
ಪ್ರೀತಿಯ ತಂದೆಯ ಪ್ರೇಮದ ಪರಿಮಳ ತಿಳಿಸಲು ಶಬ್ದವೆ ನನಗಿಲ್ಲಾ ಅಪಾರ ಖುಶಿಯನು ಸ್ವರ್‍ಗದ ಸುಖವನು ಅಳೆಯಲು ಅಳತೆಯೆ ಸಿಗಲಿಲ್ಲಾ ಹರ್‍ಷದ ಹೊಸಯುಗ ಚಂದವ ನೋಡಿದೆ ಮಮತೆಯ ಮಂದಿರ ನಾ ಕಂಡೆ ಕ್ಷಣಕ್ಷಣ ಹೊಸಗುಣ ಶಿವಗುಣ ಸದ್ಗುಣ ಪಾವನ ಪರಿಮಳ ಪಡಕೊಂಡೆ ಅ...
ಜೀವ ಬಗಿಸಿತು ಹಿಂಗ ಹ್ಯಾವ ಮಾಡಲಿ ಹೆಂಗ ತಾಯಿ ನಿನ್ನಾ ಮಾರಿ ನೋಡಲೆಂಗ ಯಮನೂರಿನಾ ಮಾವ ಬಾಳ ಮಾಡ್ಯಾನ ಜೀವ ತಂದೆ ನಿನ್ನಾ ಪಾದ ಕಾಣಲೆಂಗ ಆತೂಮ ಅರವಟಿಗಿ ತಲಿತುಂಬ ಚಟುವಟಿಕಿ ಆತ್ಮರಾಯಾ ನಿನ್ನ ಪಡಿಯಲೆಂಗ ಲಿಂಗ್ಸೂರ ಶರಣಯ್ಯ ಗವಿಮಠದ ಗುರುಮಯ್ಯ ಕರ...
ಅಂತರಾತ್ಮನೆ ಆತ್ಮ ದೀಪನೆ ಪಕ್ಷಿಯಾಗುತ ಹಾರಿ ಬಾ ಹಸಿರು ನೋಡುತ ಹೂವು ನೋಡುತ ಮುಗಿಲ ತೋಟಕೆ ಇಳಿದು ಬಾ ನೀನೆ ಚಿನ್ಮಯ ನೀನೆ ಚೇತನ ವಿಶ್ವ ಚಲುವಿನ ಚಿಂತನಾ ಜಗದ ತಂದೆಗೆ ಯುಗದ ತಂದೆಗೆ ನೀನೆ ಶಕ್ತಿಯ ತೋರಣಾ ಜಡವು ಏತಕೆ ಜಾಢ್ಯವೇತಕೆ ಜಡದ ಕೊಡವನು ...
ಜಾತಿ ಜಂಗಮ ಸಾಕು ಜ್ಯೋತಿ ಜಂಗಮ ಬೇಕು ಲಿಂಗ ತತ್ತ್ವದ ಬೆಳಕು ಕಾಣಬೇಕು ಕೋತಿ ಭಾವನೆ ಸಾಕು ನೀತಿ ಜೀವನ ಬೇಕು ವಿಶ್ವ ಜಂಗಮ ದೀಪ ಬೆಳಗಬೇಕು ಶಬ್ದದಾಚೆಗೆ ಸಾಗು ಅರ್‍ಥದಾಚೆಗೆ ಹೋಗು ಶಬ್ದಾರ್‍ಥ ಗಡಿಯಾಚೆ ಅರುಹು ಚಾಚು ದೇಹ ಢಂಗುರ ದಾಟು ಆತ್ಮ ಡಿಂಢ...
ತಾಯ ಪ್ರೀತಿಯ ಹಸ್ತ ನೀಚಾಚಿ ಬಾರಯ್ಯಾ ಓ ಪ್ರೇಮ ಯುಗಶಿಲ್ಪಿ ದೇವದೇವಾ ನೀನೆ ನವಯುಗ ಶಿಲ್ಪಿ ಕಲ್ಪ ಕಲ್ಪದ ಶಕ್ತಿ ಕೇಳು ಮಕ್ಕಳ ಕೂಗು ವಿಶ್ವದೇವಾ ತಾಯಿಯೆಂದರು ನೀನೆ ತಂದೆಯೆಂದರು ನೀನೆ ನೀನಿಲ್ಲದಿನ್ನಾರು ಇಲ್ಲವಯ್ಯಾ ನೀನೆ ಮೌನದ ಮೌನ ನೀನೆ ಭುವನ...
ಎಂಥಾ ಸುಂದರ ಭಸ್ಮಾ ಥಳಥಳ ಥಳಥಳ ಭಸ್ಮಸ್ನಾನವ ಮಾಡಿದೆ ಬೂದಿ ಭಸ್ಮವ ಬಿಟ್ಟೆ ಜ್ಯೋತಿ ಭಸ್ಮವ ಹಿಡಿದೆ ಭಸ್ಮ ಸ್ನಾನವ ಮಾಡಿದೆ ಬೆಳಕು ತುಂಬಿದ ಭಸ್ಮ ಥಳಕು ಚಿಮ್ಮಿದ ಭಸ್ಮ ಜ್ಯೋತಿ ಸ್ನಾನವ ಮಾಡಿದೆ ಚಿದ್ಲಿಂಗ ಶಿವಯೋಗಿ ಲಕಲಕ ಹೊಳಿದಂತ ಜ್ಯೋತಿ ಸ್ನಾ...
ಹಡೆದಪ್ಪ ಪಡೆದಪ್ಪ ಪಟ್ಟದ ಮಠದಪ್ಪ ಅಪ್ಪನಽ ಮಠ ನೋಡಿದೆ ಮಠದ ಮ್ಯಾಲಿನ ಮಠವು ಘಟದ ಮ್ಯಾಲಿನ ಘಟವು ದಿಟಪುಟ ಮಠ ನೋಡಿದೆ ಹೊಟ್ಟಿ ತುಂಬಾ ಉಂಡ ಗಟ್ಟಿ ಅಮೃತ ಲಿಂಗ ಮಠಸಾಮಿ ನಾ ನೋಡಿದೆ ಲಂಡ ಭಂಡರ ಹಿಡಿದು ಬೆತ್ತ ಬೀಸಿದ ಅಪ್ಪ ಗುರುಸ್ವಾಮಿ ನಾ ನೋಡಿದೆ...
ಕಂಡೆ ಕಂಡೆ ನಿನ್ನ ಕಂಡೆ ಕಂಡುಕೊಂಡೆ ಮಧುವನಾ ನೀನೆ ರಥವು ಪ್ರೀತಿ ಪಥವು ಶಾಂತಿವನದ ಉಪವನಾ ಬೆಳಕು ಕಂಡೆ ಭಾಗ್ಯ ಕಂಡೆ ಕಳೆದ ಗಂಟು ದೊರಕಿದೆ ಶಿಖರದಿಂದ ಶಿಖರಕೇರಿ ಶಿವನ ಮುಕುರ ಸೇರಿದೆ ನನ್ನ ತಂದೆ ಜಗದ ತಂದೆ ಯುಗದ ತ೦ದೆ ಹಾಡಿದಾ ನನ್ನ ಗುಣವ ಮನದ...
ಮಳೆಯ ಮುದುಕನ ದೂಕಿ ಚಳಿಯ ಮುದಿಕಿಯ ನೂಕಿ ಪಂಚಮಿಯ ಹೊಸಹುಡಿಗಿ ಬಂದಳಲ್ಲೊ ಭರಭಽರ ಜೋಕಾಲಿ ಸರಭಽರ ಹೊಸಬಗರಿ ಪಾತಽರಗಿತ್ತೀಯ ತಂದಳಲ್ಲೊ ಹುಡಿಗಿ ಅಂದರ ಹುಡಿಗಿ ಹಂಡೆ ಮಾಟದ ಬೆಡಗಿ ನಾಗರಕ ಥೈಥಳಕು ಹೊಚ್ಚತಾಳೊ ಸೆರಗು ಎತ್ತೋ ಏನೋ ಸೀರಿ ಸುತ್ತಾ ಸೂರೊ...







