ಅಡುಗೆ ರಸರುಚಿ ವಾಸನೆಯ ಮೋಹ ಸವಿಗೆ ಬಾಗದವನಾರು ಹೇಳು ? ಕುರಿಯ ಕಾವ ಕುರುಬನೀಂ; ಧರೆಯ ಕಾವ ರಾಜಗೆ ಪಕ್ವಾನ್ನ ನಾಕಕೆ ಅನ್ಯ ಕೀಳು ಮೊಸರನ್ನ ಸಂಡಿಗೆ ಉಪ್ಪಿನಕಾಯ ಲೀಲಾಂಮೃತಕೆ ಸಖ್ಯನಾಗದವನಾರು ಧೀರ ? ರಣರಂಗ ಕಲಿಯೇನು; ಕಾಳಗದ ಹುಲಿಯೇನಿದಕೆ ವಿಶ್...

ಗಾಡಿ ಓಡುತಿದೆ; ಅಕೋ ತಡೆಯದೆ ದುಡುಕುತಿದೆ ತಾ ಮುಂದಿನ ಎಡೆಗೆ ನಡುಹಗಲೆನ್ನದೆ; ಚಳಿ ಬಿಸಿಲೆನ್ನದೆ ಓಡುತಿದೆ ಆಕೆ ಹೊಸಬಾಳುವೆಗೆ ನಿಲ್ವನೆಗಳಲಿ ನಿಲ್ಲುತ ನುಗ್ಗುತಿದೆ ತನ್ನಯ ನಿಯಮವ ಮಾಡುತಿದೆ ಬಂದವರೆನ್ನದೆ ಇಳಿದವರೆನ್ನದೆ ಮುಂದಿನ ನಿಲ್ವನೆ ಮು...

ಕವಿಯ ಹೃದಯ; ಕವನದುದಯ ಸವಿಯ ರಸವು; ದೇವನೊಲವು ಓ ಅವನ ಹೃದಯ ಕಲೆಯು ಆವ ಲೀಲೆಯೋ ಕಾವ್ಯದೊಲವು ಎಲ್ಲ ಕಲೆಗಾರನಹುದು ಕವಿಯು ಇವನ ಮನವು ಸ್ವೈರ ಮನೆಯು ಹರುಷ ಹೊರಸು ಹೆಣೆವ ಕಲೆಯು ವಿರಸ ಹೊನಲು ತರುವ ಕವಿಯು ಅವನ ಉಕ್ತಿ ಓಟ; ಓ ಹೃದಯ ಶಲೆ! ಕಾಣದದನು ...

ಕಾಲು ತಾಗಿದ ಮುಳ್ಳು ; ಮೈಯಲ್ಲ ಮುರಿಯುವದು | ಕಾಯ ತಾಗಿದ ಮುನಿಸು; ಮನವೆಲ್ಲ ಮೆಲ್ಲುವದು || ಇಂದಿಲ್ಲ ನಾಳಿಲ್ಲ ಎಂಬೊಂದು ಕುಂದಿಲ್ಲ | ಭವಹರನ ನೆನೆದೊಡೆ ಎಂದೆಂದು ಭಯವಿಲ್ಲ || ಹಾ ತಡೆ ತಡೆ ಓಡದಿರು; ನೋಡು ಮುಂದಿದೆ ತಗ್ಗು | ಓ ತಡೆ ತಡೆ ದುಡ...

ಪುಟ್ಟ ಹೃದಯನಾದೊಡೆ ಏನು? ಹರುಷ ಹೊನಲು! ವಿರಸವರಿಯದ ಸರಸ ಸೊಗಸು ಏನು? ನಿಮ್ಮ ಜೀವನರಾಗ ಎನಗಿಂತ ಬಲು ಮಿಗಿಲು ಸುಖಜನ್ಮ ಸಾರ್ಥಕತೆ ನಿಮಗೆ ಏನು? ಸರ್ರೆಂದು ಬುರ್ರೆಂದು ಹಾರುವಿರಿ! ಎಲ್ಲಿಗೋ ? ಆಚೆಯಾ ಗಿಡದ ಪಕ್ಕದಾ ಹೊಲಕೋ? ಗುಡ್ಡದೋರೆ‌ಇಂದಿಳೆವ...

ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ ರಕ್ತ ಉಕ್ಕಿ, ಶಕ್ತಿ ಮಿಕ್ಕಿ ಕೋಡಿಯೊಡೆದು ಓಡಲಿ ಕಾಮ ಮೋಹ ಸಿರಿಯು ಸ್ವಾರ...

ಓ ದೇವ ! ಓ ನಿನ್ನ ಚರಣಕೆನ್ನ ಶರಣು ! ಈ ದೇಹ! ಈ ಪ್ರಾಣ ನಿನಗೆ ಶರಣು !! ಅದೊ ! ಅಲ್ಲಿ-ಅಗೋ!! ನಾ ಕಂಡೆ ನಿನ್ನ ಇಗೋ ! ಇಲ್ಲಿ-ಇಗೋ !! ನಾ ಪಡೆದೆ ನಿನ್ನ ಅಲ್ಲಿ! ಹುಲ್ಲ ಗುಡಿಸಿಲಿನಲಿ ಕಂಡೆ ನಿನ್ನ ಅಲ್ಲಿ! ಅವರಾಡುವ ಬಡ ಸೊಲ್ಲಿನಲ್ಲಿ!! ಅಲ್ಲಿ...

ಚಿಗುರಿದಾ ಹುಲ್ಲಲ್ಲಿ; ಚಲುವಿನಾ ಓಟದಲಿ ಆಡುತಲಿ ಸುಳಿಸುಳಿವ ಓ ನಿಲ್ಲು ಹಾವೇ ! ನಿನ್ನ ಅಂದವೇನು ಬಣ್ಣ ಮಿಂಚುವ ನಿಲವಿನಲಿ ವಿಷಹೊತ್ತ ಹೆಡೆಯೇ ನಿನ್ನ ಗೆಲುವಿನ ಠೀವೆ! ತಡೆ ಇನ್ನೂ ಕ್ಷಣವನ್ನು ಮಿನುಗು ಮಿಂಚೆ ನಾಕದಿಂ ಭುವಿಗೊಗೆದ ಬೆಳ್ಳಿಯೂ ಛಡಿ...

ಈ ಸಲಾರೆ ಇನ್ನು ನಾನು; ಕಾಣಲಾರೆ ಮುನ್ನು ಕಡಲ ನಡುವೆ ಈಸಿದೆ ತುದಿ‌ಇಲ್ಲ, ಮೊದಲಿಲ್ಲ; ಮಾಡಲೇನು ಇನ್ನು ದಣಿದು ನಾನು ಬಳಲಿದೆ ಏಸು ಕಾಲ ಈಸಿದೆ! ಎನಿತು ದಿನ ನೂಕಿದೆ! ಮುಗಿಯ ಬಹುದೆ ಕಡಲು? ಮುಗಿಯಲಿಲ್ಲ ತಿಳಿಯಲಿಲ್ಲ; ಕೈಯಬೀಸಿದೆ ಇನ್ನು ತಾಳದೆನ...

ಏಕೀಕರಣದ ಪೂರ್ವದಲ್ಲಿ ಬರೆದ ಕವನ ೧ ಒಂದಿರುಳ ಕನಸಿನಲಿ ಕನ್ನಡಮ್ಮನ ಕೇಳಿದೆನು ‘ಬೇಕು ನಿನಗೇನು ಎಂದೂ’ ೨ ಪೌರ್ಣಿಮೆಯ ಚಂದ್ರನಿಗೆ ಕಲೆಯ ತೆರದೀ ನನಗೆ ಒಡೆದ ಕರ್ನಾಟಕದ ಕುಂದು ಎಂದೂ ೩ ಕೋಡಿಯೊಡೆದಿಹ ಕಣ್ಣೀರು ಹೊಳೆಯಾಗಿ ಬಿಡದೆ ಸುರಿಸಿ ಮನಬಿಚ್ಚಿ...