
ಕಾರಿ ಕಕ್ಕಿ ಬಾರಿ ಕವಳಿ ಪರಗಿ ಹಣ್ಗಳ ತಿನ್ನುವಾ ಡಬ್ಬಗಳ್ಳಿಯ ಕೆಂಪು ಹಣ್ಣನು ತಿಂದು ಹಕ್ಕಿಯ ಕರೆಯುವಾ ತೊಂಡಿ ತುಪ್ಪರಿ ಮೆಕ್ಕಿ ಕುಂಬಳ ಪುಂಡಿ ಪಡುವಲ ನೋಡುವಾ ಸವುತಿ ಹಾಗಲ ಹೀರಿ ಅವರಿಯ ತುಂಬು ಗಲ್ಲವ ಸವಿಯುವಾ ಇರುಳ ಗೂಗಿಯ ಗಾನ ಕೇಳುತ ಚಂದ್ರ...
ಮೇಲು ಮೇಲಕೆ ಮೇಲು ಮೇಲಕೆ ಮೂಲ ವತನಕೆ ಸಾಗಿದೆ ಬಡವ ದೂಡುತ ಹಗುರವಾಗುತ ದಿವ್ಯ ಬೆಳಕನು ಸೇರಿದೆ ಹಗುರವಾಗಿದೆ ಹರುಷ ತುಂಬಿದೆ ಅಂತರಂಗವು ಅರಳಿದೆ ಇಗೋ ಶೀತಲ ಶಾಂತಿ ದಲದಲ ಯೋಗವಲ್ಲರಿ ಚಿಗುರಿದೆ ಶಬ್ದ ಇಲ್ಲದ ಸೀಮೆ ಇಲ್ಲದ ಬೆಳಕು ಬೆಳಕನೆ ಹೊಮ್ಮಿದ...
ಚರ್ಮದಾಚೆಗೆ ವರ್ಣದಾಚೆಗೆ ಶಾಂತಲಿಂಗೇಶ್ವರ ಶಿವಾ ಜೀರ್ಣ ಕಾಷ್ಟದ ಚೂರ್ಣ ಶಿಲ್ಪದ ಆಚೆಯಾಚೆಯ ಶುಭ ಶಿವಾ ಜನನದಾಚೆಗೆ ಮರಣದಾಚೆಗೆ ಮಾಯವಾದಾ ವರಶಿವಾ ಆದಿ ಮಧ್ಯಾ ಅಂತ್ಯದಾಚೆಗೆ ಜಾರಿ ಹೋದಾ ಹರಶಿವಾ ಶಬ್ದದಾಚೆಗೆ ಅರ್ಥದಾಚೆಗೆ ಚಾಚಿ ಅಡಗಿದ ಶಿವಶಿವಾ ...
ಬನ್ನಿ ಬನ್ನಿರಿ ದೇವ ತರುಗಳೆ ನಗುವ ಮಲ್ಲಿಗೆ ಹೂಗಳೆ ಬನ್ನಿ ಬನ್ನಿರಿ ಹೂವು ತನ್ನಿರಿ ಸಹಜ ಸುಂದರ ಮಣಿಗಳೆ ಬಸವ ಚೇತನ ಕನಸು ಚಿಮ್ಮಲಿ ಲಿಂಗ ಗೊಂಚಲು ಹೊಮ್ಮಲಿ ಶಿವನ ಬೆಳಗು ಹಬ್ಬಿಹರಡಲಿ ವಿಶ್ವ ಸುಂದರವಾಗಲಿ ದೇವನೊಬ್ಬನು ನಾಮ ಹಲವು ಮನುಜ ಮಂಚವ ತ...
ಕಡೆಯ ಗಂಟೆಯು ಹೊಡೆವ ಮುನ್ನವೆ ಶಿವನ ಗಂಟೆಯು ಮೊಳಗಲಿ ಅಂತರಂಗದಿ ದೀಪ ಬೆಳಗಲಿ ಜೀವ ಸುಂದರವಾಗಲಿ ಒಳಗು ಮಧುರಾ ಹೊರಗು ಮಧುರಾ ಬದುಕು ಸುಮಧುರವಾಗಲಿ ಮಾತು ಪರಿಮಳ ತುಂಬಿ ತುಳುಕಲಿ ಮನವು ಮಲ್ಲಿಗೆಯಾಗಲಿ ದಿವ್ಯ ಸಂಸ್ಕಾರಕ್ಕೆ ಆತ್ಮದ ಜ್ಞಾನ ರೆಕ್ಕೆ...
ನಿಲ್ಲು ನಿಲ್ಲು ನಿಲ್ಲು ಮನವೆ ಮರಳಿ ಯಾತಕ ಮರೆಯುವಿ ಟೊಂಗಿ ಟೊಂಗಿಗೆ ತೂರಿ ಹಾರುವಿ ಮಂಗನಾಟವ ಮಾಡುವಿ ಯಾರು ಯಾರಿಗೊ ಶಿವಾ ಅನ್ನುತ ಗುಡ್ಡ ಬೆಟ್ಟಾ ತಿರುಗಿದಿ ಗಡಿಗಿ ಮಡಕಿ ಕುಡಿಕಿ ಚಟಿಗಿಗೆ ಅಡ್ಡ ಉದ್ದಾ ಉರುಳಿದಿ ಚರ್ಮ ಚೀಲಕ ಮಣ್ಣ ಹೆಂಟಿಗೆ ದ...
ಜ್ಯೋತಿ ಪುಂಜದ ಸೂಕ್ಷ್ಮ ರೂಪದ ಜ್ಯೋತಿ ಕಂದನ ತೂಗುವೆ ಸುತ್ತ ಮುತ್ತಾ ಜ್ಯೋತಿ ತುಂಬಿದ ಜ್ಯೋತಿಯಾತ್ಮನ ತೂಗುವೆ ಸೂರ್ಯನಾಚೆಗೆ ಚಂದ್ರನಾಚೆಗೆ ಮುಗಿಲಿನಾಚೆಗೆ ತೂಗುವೆ ಕಲ್ಪದಾಚೆಗೆ ಕಾಲದಾಚೆಗೆ ಆಚೆಯಾಚೆಗೆ ತೂಗುವೆ ಸೂರ್ಯಚಂದ್ರರು ಧರಣಿ ಮಗುವನು ತ...
ಬಾರ ಪಾತರಗಿತ್ತಿ ಚನ್ನಿ ನಿನಗ ಯಾತರ ಚಿಂತಿಯು ಹೂವು ಹೂವಿನ ತೇರು ಎಳಿಯ ನೀನ ಕಳಸದ ಗಿತ್ತಿಯು ಹಸಿರು ಹೂವು ಗುಡ್ಡ ಬೆಟ್ಟಾ ನಿನ್ನ ಮಂಚಾ ತೂಗ್ಯವ ಮುಗುಲ ಮ್ಯಾಲಿನ ತಂಪುಗಾಳಿ ನಿನ್ನ ಪಕ್ಕಾ ತೊಳೆದವ ದೇವರಾಯನ ಮನಿಯ ತೋರ ನೀನ ಪಾರ್‍ವತಿ ರೂಪಸಿ ನೀ...
ಬಸವ ಚೇತನ ಶಿವನಿಕೇತನ ಭುವನ ಕಾಶಿ ಕ್ಷೇತ್ರಾ ಬಸವ ವಚನಾ ವೇದ ಮಂತ್ರಾ ಪ್ರೇಮಗೀತಾ ಜ್ಞಾನಾ ದೇಹ ದೇಗುಲ ಮನವೆ ಲಿಂಗಾ ಕೋಟಿ ಲಿಂಗದ ಕ್ಷೇತ್ರಾ ನಡೆಯೆ ಲಿಂಗಾ ನುಡಿಯೆ ಜಂಗಮ ಜ್ಞಾನ ಮಾನಸ ಯಜ್ಞಾ ನಾನು ಕಿರಿಯಾ ನೀನು ಹಿರಿಯಾ ಗೌರಿಶಂಕರ ಶಿಖಽರಾ ಸಕಲ...
ಇದೇ ಭುವನಾ ಶಿವನ ಕವನಾ ನಾವು ದೇಗುಲ ವಾಗುವಾ ನುಡಿವ ದೇಗುಲ ನಡೆವ ದೇಗುಲ ವಿಶ್ವ ಜಂಗಮವಾಗುವಾ ಶಿವನ ಒಡ್ಡೋಲಗದಿ ನಾವೆ ನಂದಿ ಭೃಂಗಿ ಗಣಗಳು ನಾವೆ ಪಾರ್ವತಿ ಗಂಗೆ ಗೌರಿಯು ಬನ್ನಿ ಕುಣಿಯುವ ಗೆಳೆಯರು ಮಣ್ಣ ಭೂಮಿಯ ಮಂತ್ರ ಮಾಡುವ ಚಂದ ಸ್ವರ್ಗವ ಕಟ್...







