
ದೇವ ಕರುಣಿಸು ಜಯವ ನಾಡ ನಾಯಕಗೆ ಜೀವದಿಂದುಳುಹೆಮಗೆ ನಾಡ ಬಿಡುಗಡೆಗೆ. ಹಿಂಸೆಯನ್ನಡಗಿಸಲು, ಹಿಂಸಕರನೆದುರಿಸೆ, ಅ- ಹಿಂಸೆಯೆನ್ನುವ ಹಿರಿಯ ತತ್ವವನು ಸಾರಿ, ಧ್ವಂಸಕರ ಲೋಕದಲಿ ಶಾಂತಿ ಮೂಡಿಸೆ, ಪರಮ- ಹಂಸ ಸಂದೇಶವಾಚರಿಸುತಿಹ ಗಾಂಧಿಗೆ. (೬-೫-೧೯೪೪:...
‘ಅಸ್ಪೃಶ್ಯ ಚಂಡಾಲ ಪಂಚಮ ಹೊಲೆಯ’ರೆಂದು ದೂರವಿಟ್ಟಿಹೆವಲ್ಲ ನಮ್ಮ ಸಮ ಸೋದರರ? ಅನ್ಯತ್ರವಿಲ್ಲದಿಹ ಹೊಲೆಯದೇನವರ? ನಾವೆ ಮಾಡಲು ಹೇಸುವೆಮ್ಮ ಸೇವೆಯನಿಂದು ಅವರು ಮಾಡುತಲಿಹುದೆ ಅವರಿಗಂಟಿದ ಹೊಲೆಯೆ? ಸಲ್ಲದಿಲ್ಲದ ಸತ್ತ ಶಾಸ್ತ್ರದಾಧಾರವನು ಕೊಟ್ಟು, ಅ...
ಹಬ್ಬ ಬಂತು, ಓ ಹಬ್ಬ! ಕೆಳೆಯರೇ, ತೋರಣ ಕಟ್ಟೋಣ! ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ ತೋರಣ ಕಟ್ಟೋಣ! ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ, ತೋರಣ ಕಟ್ಟೋಣ; ಬೆಳಗಿನ ಜಾವ ಮುಗಿಯುವ ಮುನ್ನ ತೋರಣ ಕಟ್ಟೋಣ! ಚುಕ್ಕಿಯಾಗಸದೆ ಮಾಸುವ ಮುನ್ನ ತೋರಣ ಕಟ್ಟೋಣ; ...
ಸ್ವತಂತ್ರ ಭಾರತದರುಣೋದಯದ ಮುಂಗಿರಣವದೋ ಮೂಡುತಿದೆ; ಶತಮಾನದ ಮೇಲಿನ ಕಡು ದಾಸ್ಯದ ಭಂಗಗೈದ ತಮವೋಡುತಿದೆ. ಸ್ವಾತಂತ್ರ್‍ಯದ ಹರಿಕಾರರು ಮಲಗಿದ ಜನರನೆಚ್ಚರಿಸ ಬಂದಿಹರು; ಚಾತಕದೊಲು ಬಾಯ್ ಬಿಡುತಿಹ ಜನಕೆ ಒಸಗೆ ಭರವಸೆಯ ತಂದಿಹರು. ಇನ್ನೂ ಮಲಗಿರಲೇನು ...








