
ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು. ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು. ಹಲವು ನದಿಗಳ ನೀರು ಕುಡಿಯುವೆನು. ಏಳು ಸಮುದ್ರಗಳನ್ನು ಹೊಗುವೆನು. ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವು...
ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು. ಓಡಿ ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು ಕೊಳ್ಳುತ್ತವೆ. ಹೋದರೆ ಇವರು ಎಂದು ಇಣಿಕಿ ನೋಡುತ್ತವೆ. ಹುಳ ಹುಪ್ಪಟೆಗಳ ಆಸೆ ತೋರಿಸಿ ಕರೆಯಬೇಕು ಇವನ್ನು. ಕಚ್ಚಿ...
ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ ನೇನೇಕೆ ಹೇಳಲಿ? ಎಲ್ಲರಿಗೂ ಗೊತ್ತಿರುವ ತೀರ ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ. ಬರೇ ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ...
ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ ಹಳೇ ದೊಗಲೆ ಶರ್ಟು. ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ. ಒಡೆದ ಮಡಕೆಯ ತಲೆ. ಕಣ್ಣುಗಳಿರಬೇಕಾದಲ್ಲಿ ಬಿಳೀ ಸುಣ್ಣದ ಬೊಟ್ಟು. ಕಣ್ಣಲ್ಲಿ ಕಣ್ಣಿಟ್ಟು...
ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು. ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು. ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು. ಪಡಸಾಲೆಯಲ್ಲಿ ತೂಗಿದ ಬೃಹತ್ತಾ...
ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ? ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ. ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿ...
ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ. ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ. ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್...








