ಅಂಜು ಮಲ್ಲಿಗೆ ಅಂಜು ಮಲ್ಲಿಗೆ ಅಂಜಬೇಡ ಮಲ್ಲಿಗೆ ಸಂಜೆ ಮಲ್ಲಿಗೆ ಸಂಜೆ ಮಲ್ಲಿಗೆ ಮುಂಜಾನೆಯು ಬಾ ನಮ್ಮಲ್ಲಿಗೆ ಚೆಂಡು ಮಲ್ಲಿಗೆ ದುಂಡು ಮಲ್ಲಿಗೆ ಉಂಡು ಬಾ ಮಲ್ಲಿಗೆ ಮಂಜಿಗೆ ಬಾ ಮಳೆಗೆ ಬಾ ಬಾರೆ ಬಾ ನಮ್ಮಲ್ಲಿಗೆ *****...

ಚಂದಿರನೆಂದರೆ ಐಸ್ ಕ್ರೀಮ್ ಮುದ್ದೆ ಆದುದರಿಂದದು ಯಾವಾಗ್ಲು ಒದ್ದೆ ತಾರೆಗಳಿಗೆಲ್ಲ ಅಲ್ಲಿಂದ್ಲೆ ಸಪ್ಲೈ ನಮಗೋ ಇನ್ನೂ ಬಂದಿಲ್ಲ ರಿಪ್ಲೈ! ಆದರು ನಮಗೆ ಚಂದಿರ ಮುದ್ದೇ! ಈವತ್ತು ಮುದ್ದೇ ನಾಳೆನು ಮುದ್ದೇ ನಾವ್ ಮಲಗೋದು ಅವನನು ಹೊದ್ದೇ! *****...

ಹೆಸರು ಪರಪುಂಜನ ಪರಕಾಯ ಪ್ರವೇಶ ಹಿಂದೆ ಅಂಥ ಹೆಸರಿನ ಒಬ್ಬ ರಾಜ ದೇಶ ಸಂಚಾರ ಮಾಡಬೇಕೆಂದು ನಿರ್ಧರಿಸಿ ನಿಜ ದೇಹವನ್ನು ತನ್ನ ಆಪ್ತ ಮಿತ್ರ ವಿದೂಷಕನ ಕೈಗೊಪ್ಪಿಸಿ ಆಗ ತಾನೇ ಸತ್ತ ಅಲೆಮಾರಿ ಸನ್ಯಾಸಿಯೊಬ್ಬನ ದೇಹವನ್ನು ಸೇರುವನು. ವಿದೂಷಕನೊ ಎಲ್ಲ ವ...

ತಾವರೆಯಿಲ್ಲ ತಾವರೆಯ ಎಲೆಯಿಲ್ಲ ಬೀಳುವ ಹೂವಿಲ್ಲ ಹೂಬಿಡುವ ಮರವಿಲ್ಲ ದಾಟಿಸುವ ಅಂಬಿಗನಿಲ್ಲ ಕಾದು ನಿಂತ ದೊಣಿಯಿಲ್ಲ ಆಕಾಶದಲ್ಲಿ ಚಂದ್ರನಿಲ್ಲ ನಕ್ಷತ್ರಗಳಿಲ್ಲ ಬೀಸುವ ಗಾಳಿಯಲ್ಲಿ ಹಾಡುವ ಹಕ್ಕಿಗಳಿಲ್ಲ ಪಾದ ತೊಳೆವ ಅಲೆಗಳಲ್ಲಿ ಮುತ್ತಿಡುವ ಮೀನುಗ...

ಬೇಂಡು ವಾದ್ಯಗಳು ನಿಂತು ದೀಪಗಳು ಆರಿ ಊರವರು ಅವರವರ ಮನೆಗಳಿಗೆ ತೆರಳಿ ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ ಇಡಿಯ ಜಗತ್ತೇ ಮಲಗಿರುವ ಸಮಯ ಅದು ಬಫೂನನ ಸಮಯ ಕೆಂಪು ಮಣ್ಣಿನ ಗೆರೆಗಳು ಬಿಳಿಯ ಸುಣ್ಣದ ಬೊಟ್ಟುಗಳು ಇನ್ನೂ ಮಾಸಿಲ್ಲ ಮೂಗಿನ ಮೇಲೆ ಮೊಂಡ...

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ. ...

ಅನಿಸುತ್ತದೆ ನನ್ನ ಕಥಾನಾಕನನ್ನು ಹೀಗೆ ಒಂಟಿಯಾಗಿ ಬಿಡಬಾರದಾಗಿತ್ತು ಎಂದು.  ಆದರೆ ಬಿಟ್ಟಿದ್ದನೆಲ್ಲಿ ಇವುನು ನನ್ನನ್ನು ವರ್ಷಗಟ್ಟಲೆ ಸದಾ ತಲೆಯೊಳಗೆ ಹೊಕ್ಕು ಊಟ ನಿದ್ದೆಗೆ ಬಿಡದೆ ಮಳೆಗೆ ಸೋರುವ ಬಿಸಿಲಿಗೆ ಸುಡುವ ಬಾಡಿಗೆಮನೆಯಲ್ಲೂ ಮಂಚದ ಮೇಲೆ...

ಗಂಗೋತ್ರಿಯಲ್ಲಿ ರಾತ್ರಿ ರೋಡುಗಳೇಕೆ ನಡೆಯುವುದಿಲ್ಲ ಕಟ್ಟಡಗಳೇಕೆ ತೆರೆಯುವುದಿಲ್ಲ ಮರಗಳು ನಿಂತದ್ದೇಕೆ ಮಣ್ಣು ಮಲಗಿದ್ದೇಕೆ ಸಮಯ ಯಾಕೆ ತುಂಡಾಗಿದೆ ಹೀಗೆ ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ ವ್ಯವಾಗುತ್ತಿದೆ ನನಗೆ ಗೊತ್ತಿರುವ ಸಮುದ್ರದಂಡೆಗ...

ನಾವೇನು ಮಾಡೋಕಾಗತ್ತೆ ಎಂದರೆ ಕೆಲಸ ಹೇಗೆ ಗಿಟ್ಟಿಸಿಕೊಂಡಿರಿ? ಮನೆ ಹೇಗೆ ಕಟ್ಟಿಸಿಕೊಂಡಿರಿ? ಮಕ್ಕಳನ್ನು ಹೇಗೆ ಅಮೇರಿಕೆಗೆ ಕಳಿಸಿದಿರಿ? ಒಂದು ದಿನ ಸಮೀಪ ಭರ್‍ರೆಂದು ಧಾವಿಸಿಹೋದ ಕಾರು ನಮ್ಮಿಬ್ಬರ ಮೇಲೂ ರಾಡಿ ಎರಚಿದ್ದು ನೆನಪಿಲ್ಲವೆ? ನಂತರ ನೀ...

ಸಹಾರಾ ಎಂದರೆ ಅರೆಬಿಕ್ ಭಾಷೆಯೊಳಗೆ ಶೂನ್ಯವೆಂದು ಅರ್ಥ ಮೈಲುಗಟ್ಟಲೆ ಮರುಭೂಮಿಯ ಮೇಲೆ ಹೊಗೆಯಿಲ್ಲದೆ ಹಬೆಯಿಲ್ಲದೆ ಕಾದ ಮರುಳು ಮುಕ್ಕಳಿಸುವ ಬಯಲು ಚಿಗುರದೆ ಹೂ ಬಿಡದೆ ಬಿಸಿಲ ಝಳಕ್ಕೆ ಅಪರೂಪ ತೇಲುವ ಓಯಸಿಸ್ ಎಟುಕದ ಆಕಾಶಕ್ಕೆ ತಲೆಯೆತ್ತುವ ತಾಳೆಗ...

1...5859606162...66