ಪಿಶಾಚಿಗೆ ದೈವದ ಉತ್ತರ

ಹೊತ್ತು ಮೀರಿತ್ತು ಮನಸ್ಸು ದಣಿದಿತ್ತು ತನಗೆ ತಾನೇ ವಿರೋಧಿಸುತಿತ್ತು ಆಗ ಟಣ್ಣನೆ ಸಿಡಿದೆ ನೀನು ನಕ್ಷತ್ರಪಥದಿಂದ ಬಿದ್ದ ಶಾಖೆ ರೂಪಿಸುವಂತೆ ತನ್ನ ದಾರಿಯ ರೇಖೆ ತಡೆಯಲೆಳಸಿದ್ದೆ ಕೈಚಾಚಬಯಸಿದ್ದೆ ಕಾದು ಕೆಂಪಾದ ಕಬ್ಬಿಣದ ತುಂಡು ಬಡಿವ...

ಪಿಶಾಚಿ ದೈವಕ್ಕೆ ಹೇಳಿದ್ದು

ಯಾಕೆ ಸೃಷ್ಟಿಸಿದೆ ನನ್ನನೀ ರೀತಿ ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ ಇರುಳಿನೇಕಾಂತದ ನೀರವತೆಯಲ್ಲಿ ನನಗೆ ನಾನೇ ಆಗುವಂತೆ ಭೀತಿ ಬೀಸಿತೆ ಗಾಳಿ? ಆ! ಏನದು ಎದ್ದು ಮರಮರದ ಮೇಲು ಮರಮರವೆಂದು ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ...

ಮೂರು ಅವಸ್ಥೆಗಳು

ಮಂಡೂಕಗಳಿಗವಸ್ಥೆ ಮೂರು: ನಿದ್ದೆ, ಎಚ್ಚರ, ಮಧ್ಯಂತರ. ಮನುಷ್ಯರಿಗೆ ಕೂಡ ಅಷ್ಟೆ. ನಿದ್ದೆಯಲಿ ಕನಸು ಕೀಟಗಳದ್ದೆ ಎಚ್ಚರದಲವುಗಳ ಹಿಡಿಯಲು ಹುಡುಕಾಟ ಸಿಕ್ಕಿದರೆ ಊಟ, ಇಲ್ಲದಿದ್ದರೆ ಉಪವಾಸ ಮಧ್ಯಂತರಾವಸ್ಥೆಯಲಿ ಹೀಗೆಯೇ ಬೇಟ ಹೊಸತೇನಲ್ಲ; ತಲಾಂತರದಿಂದ ಬಂದದ್ದೆ ಕಣ್ಣಿಗೆ...

ಸಂತೆ

ಇನ್ನೇನು ಕಳೆದು ಬಿಟ್ಟರೆ ಎರಡು ರಾತ್ರೆ ಸನ್ನಿಹಿತವಾಗುವುದು ಮುಂಡೋಡ್ಳು ಜಾತ್ರೆ ಹನ್ನೆರಡು ಮುಡಿ ಗದ್ದೆ ಉದ್ದಗಲ ಸಂತೆ ಕಿನ್ನರರ ನಗರಿಯೇ ಇಲ್ಲಿಗಿಳಿದಂತೆ ಎಲ್ಲಿ ನೋಡಿದರಲ್ಲಿ ಎಂಥದೋ ಸೆಳಕು ಎಲ್ಲರನು ಒಟ್ಟಿಗೇ ಸೆರೆಹಿಡಿವ ಥಳಕು ಮಲ್ಲಿಗೆಯ...

ಭೂತ ಭವಿಷ್ಯಗಳ ನಡುವೆ

ಅಡಿಗರಿಂದಲು ಕಲಿತೆ ನಾಡಿಗರಿಂದಲು ಕಲಿತೆ ಅಡಿಗಡಿಗೆ ಕಲಿತುದನು ನುಡಿಯಲ್ಲಿ ಮರೆತೆ ರತಿಯ ಬಗ್ಗೆಯು ಬರೆದೆ ಆರತಿಯ ಬಗ್ಗೆಯು ಬರೆದೆ ಮತಿಯ ಪರಿಧಿಗೆ ತೋರಿದಂತೆ ಒರೆದೆ ಹರಿದ ಕಾಗದದ ಚೂರು ಮಹಾಯುದ್ಧಗಳ ಜೋರು ಧರೆಯೊಳಗೆ ಸಕಲವನು...

ಯಾತ್ರಿಕರು

ಒಣ ನದಿಯ ದಂಡೆಯಲಿ ನಡೆದಿರ ನೀವು ಹೀಗೆಷ್ಟು ಸಾವಿರ ವರುಷ? ಹಗಲಿಗೆ ದಹಿಸುವ ಸೂರ್ಯನ ಕಾವು ತಿಂಗಳ ಬೆಳಕಿಗೆ ಆಗಿ ಅನಿಮಿಷ ಸಿಕ್ಕಿದರು ಸಿಗದಂಥ ಪರ್ವತ ಶಿಖರ ಹತ್ತಿ ನಿಂತಾದ ಅದೆಷ್ಟು ಹೊತ್ತು? ನೋಡಬೇಕೆಂದುದನು...

ಜಾನ್ ಮೆಕೆನ್ರೊ

ಕೆಟ್ಟ ಹುಡುಗ ಜಾನ್ ಮೆಕೆನ್ರೊ ಬಯ್ದುಗಿಯ್ದು ಮಾಡಿದರೆ ಎಲ್ಲಾ ಮಂದಿ ರೇಗುವವರೆ- ವದಿಯೋಣವನ್ನ ಬನ್ರೊ! ಅದೇ ಹುಡುಗ ಜಾನ್ ಮೆಕೆನ್ರೊ ಆಡಲು ಮಜಬೂತು ನೋಡುತ್ತಾರೆ ಸುಮ್ಮನೇಕೇ ಕೂತು ಏನದ್ಭುತ ಕಣ್ರೊ! ಕಣ್ಣ ಮುಂದೆ ಮೋಡವೊಂದು...

ಅಹಲ್ಯೆ

ಇಂದ್ರ: ಹಚ್ಚಿ ಹೊಗೆಬತ್ತಿ ನೋಡುವೆನು ಕಣ್ಣೆತ್ತಿ ಬಾರಿಬಾರಿಗು ಜೀವದ ಪವಾಡ ಕೋರಿ ನಿನ್ನೆಯಷ್ಟೇ ಬದುಕು ಮೈತುಂಬಿ ಉದ್ದಕು ನಿಂತಿದ್ದ ಒಡಲು ಇಂದು ಕೇವಲ ಕಲ್ಲು ಎಂದರೆ ನಂಬುವೆನೆ ನೊಡುವ ಕಣ್ಣುಗಳನೆ ಒಬ್ಬಾತನ ಸ್ನೇಹದಲಿ ಇನ್ನೊಬ್ಬನ...

ಮಸ್ಸೂರಿ

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ! ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ...

ಮುನ್ನುಡಿಕಾರ

ಮೊದಲ ಪುಟಗಳನು (ತನಗೆ ಬೇಕಷ್ಟು) ನುಂಗಿಹಾಕುವ ಹಕ್ಕು ಹಿರಿತನದ ಸಹಜ ಅಧಿಕಾರ ಬಲ ತೋರಿದ್ದೆ ದಿಕ್ಕು ತಿಳಿದವರು ತಿಳಯದವರು ಎಂಥ ಮಹಾತ್ಮರೂ ಓದುವರು ಮುನ್ನುಡಿ ಬಾಗಿಲು ದಾಟಲೇಬೇಕಷ್ಟೆ ಮನೆಯ ಒಳಗಿರಿಸುವುದಕ್ಕೆ ಅಡಿ ಮನಸ್ಸು ಮಾಡಿದರೆ...