
ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ ***** * ಅಜ್ಜಿ ಕಾಲಿಗೆ ದೀಪ:...
ಪಾಚಿಗಟ್ಟಿದ ನೆನಪ ಲೋಳೆಯ ಮೇಲೆ ಕಾಲಿಟ್ಟು ಕಣ್ಕಾಣದಂತೆಲ್ಲೋ ಜಾರದಿರು ಮನಸು ಇದ್ದಲ್ಲೆ ಕಣ್ಮುಚ್ಚಿ ಧೇನಿಸು ಕಂಡರೂ ಕಂಡಾವು ಒಂದೆರಡು ಕನಸು *****...
ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು ಹಾಳೆ ***** *ಕಣ್ಣಿ: ಸಣ್ಣ ಕರುಗಳನ್ನು ಕಟ್ಟಿಹಾಕಲು ನುಣುಪ...
ಹೆಣ್ಣೆಂಬುದೇ ಸೌಂದರ್ಯದ ಅಚ್ಚು ಕೆಲವರಿರಬಹುದು ಅದರಲ್ಲಿ ಸ್ವಲ್ಪ ಹೆಚ್ಚು *****...








