ತನ್ನೆಲ್ಲಾ ಸಿಟ್ಟು ಬಟ್ಟೆಯ ಮೇಲೆ ಹಾಕಿ ತಿರು ತಿರುವಿ ಕಲ್ಲಿಗೆ ಹೊಡೆದು ಬಿಸಿಲಿಗೆ ಒಣಗಿಸಲು ಹಾಕಿ – ನೀರಿಗೆ ಈಜು ಬಿದ್ದು ಸಮಾಧಾನ ಪಡುವವ – *****...

ಎಷ್ಟೊಂದು ದಿನಸಿಗಳು ನಿನ್ನಂಗಡಿಯಲ್ಲಿ ಕೇಳಿದ್ದೆಲ್ಲಾ ಸಿಗುವ ನೋಡಿದ್ದೆಲ್ಲಾ ಬೇಕೆನ್ನುವ ಬಗೆ ಬಗೆಯ ಮೃಷ್ಟಾನ್ನ ಭೋಜನಕೆ ಬಾಯಿ ನೀರೂರಿಸುವ ಲವ್ (ಲವ್) ಲವಿಕೆಯಂತರಂಗದವ. *****...

ಸೆರೆಹಿಡಿದು ಮುಗ್ಧರನ್ನಾಗಿಸಿ ಹರೆ ತರುತ ಅಂತರಾಳಕ್ಕಿಳಿದು ಹೃದಯ ಬಿರಿಸಿ ನಗು, ಸಂತೋಷ, ಕಣ್ಣೀರು ಕೊಡುತ ಮೂಕ ಚಿತ್ರಗಳದೆಷ್ಟೋ ಮಾತಾಡಿಸುತ್ತವೆ. *****...

ಕುಡಿದು ಹಾಜರಾಗುತ್ತಾನೆ ಪ್ರತಿ ರಾತ್ರಿ ಹೆಂಡತಿಯನ್ನು ಎಳೆಯಲು ಮಕ್ಕಳನ್ನು ಹೊಡೆಯಲು ಕೊನೆಗೆ ಬಾಳು ಹಾಳು ಬಾವಿ ಇದ್ದದ್ದಕ್ಕೂ ಇಲ್ಲ ಇಲ್ಲದ್ದಕ್ಕೂ ಇಲ್ಲವೇ ಇಲ್ಲ. *****...

ಹುಳಗಳು ಜೊಲ್ಲು ಸುರಿಸಿ ಸತ್ತು ರೇಶ್ಮೆಯಾಗಿ ಮಡಿವಂತರ ಮೈಮೇಲೆ ಏರಿದರೆ ಮಡಿ ಇರುವರಂತೆ – ಮನುಷ್ಯ ಮನುಷ್ಯ ಮುಟ್ಟಿದರೆ ಮೈಲಿಗೆಯಾಗುವರಂತೆ ನೀತಿಪಾಟ ಹೇಳಿಕೊಟ್ಟವನಾವನೊ?….. *****...

ಇಂತಿಷ್ಟೇ ಆಯುಷ್ಯ ನಿನ್ನದು ತಗೋ ಈ ರತ್ನ ಹವಳ ಮುತ್ತು ಬದುಕಿ ಉಳಿಯುವೆ ಬಹಳಷ್ಟು ವರ್‍ಷ – ಸಾವಿರ ನೋಟುಗಳು ಕೊಟ್ಟು ಉಂಗುರ ಹಾಕಿಕೊಂಡು ಹರಬರುತ್ತಲೇ ಕಾರಿಡಾರ್‌ನಲ್ಲಿ ಬಿದ್ದು ಸತ್ತ ಈತ – ಆತ ಸಾಯುವುದು ಗೊತ್ತಿದ್ದೇ ಎದೆಯೊಡಸಿ ...

ಏನೇನೂ ಬೇಡವೆಂದು ತಪಸ್ಸು ಮಾಡಲು ಊರಾಚೆಗೆ ಹೋದ ಸನ್ಯಾಸಿಗೆ ಇಲಿಗಳ ಕಾಟ ತಪ್ಪಿಸಲು ಬೆಕ್ಕು ತಂದ ಬೆಕ್ಕಿಗೆ ಹಾಲೆಂದು ಹಸು ತಂದ ಹಾಲು ಕರೆಯಲು ಹೆಣ್ಣು ತಂದ ಮತ್ತಿನ್ನೇನು ಸನ್ಯಾಸಿ ಸಂಸಾರಿಯಾದ. *****...

ಪುಸ್ತಕಗಳನೋದದೇ ಮುನ್ನುಡಿ ಬರೆದ ಪುಟಗಳ ನೋಡಿ ಪತ್ರಿಕೆಗಳಿಗೆ ಬರೆದು ಹೆಸರುಗಳಿಸಿಕೊಳ್ಳಬಹುದು – ಬೇಡವೆಂದರೆ ಒಂದಿಷ್ಟು ಅಣಕಿಸಿ ಕೂಗಾಡಿಕೊಂಡರೂ ಸಾಕು – ಪ್ರಸಿದ್ಧಿಗೆ ಏರಿಬಿಡುತ್ತಾನೆ (ಳೆ). *****...

ತಲೆಬುರುಡೆಯಲ್ಲಿ ಏನೆಲ್ಲ ತುಂಬಿಕೊಂಡಂತೆ ಕಪಾಟಿನಲ್ಲಿಯೂ ಕೂಡಾ – ಆಸ್ತಿ ಅಂತಸ್ತಿಗೆ ತಕ್ಕಹಾಗೆ ಅವುಗಳವುಗಳದೇ ಧಿಮಾಕು ಹೆಚ್ಚಾದರೆ ತಲೆಸಿಡಿಯುತ್ತದೆ ತುಂಬಿ ಓವರ್‌ಲೋಡ್ ಆದರೆ ಕಚಡಾ ಹೊರಬೀಳುತ್ತದೆ. *****...