ಇಳಾ ಪ್ರಾಸ್ಪೆಕ್ಟ್ ತಗೊಂಡು ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯೇ ಆಗಿಬಿಟ್ಟಿತ್ತು. ಹೊಟೆಲಿನಲ್ಲಿ ನಿವಾಸ್ ಊಟ ಕೊಡಿಸಿದ್ದರಿಂದ ಹಸಿವಿರಲಿಲ್ಲ. ಮುಂದೆ ಓದಲು ಅಮ್ಮನನ್ನು ಹೇಗೆ ಒಪ್ಪಿಸುವುದು- ಎಂಬುದೇ ದೊಡ್ಡ ಚಿಂತೆಯಾಗಿತ್ತು. ಆದರೆ...
ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ ನೋಡುತ್ತ ಇರುವುದು. ಅದರ ಪಕ್ಕದಲ್ಲಿದ್ದ ಕಲಾಭವನವನ್ನು ನೋಡಿದ್ದಳು. ಆದರೆ ಸಾಹಿತ್ಯ ಪರಿಷತ್ತು ಭವನ ಇ...
ಪತ್ರಿಕೆಯನ್ನು ಓದುತ್ತಿದ್ದ ಇಳಾ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಿಂದಿನ ಶೈಕ್ಷಣಿಕ ಅರ್ಹತೆಯಿಲ್ಲದೆ ಪದವಿಯನ್ನು ಓದಬಹುದು. ಮನೆಯಲ್ಲಿಯೇ ಕುಳಿತು ಓದಿ ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿದುಕೊಂಡಳು. ಡಿಗ್ರಿಗೆ ಕಟ್ಟಿಬಿಡೋಣವೆಂದು ಆಲೋಚನೆ ಮ...
ಪ್ರತಿನಿತ್ಯ ಪತ್ರಿಕೆಯಲ್ಲಿ ರೈತರ ಆತ್ಮಹತ್ಯೆ ಅಂತ ನೋಡಿ ನೋಡಿ ಇಳಾಳ ಮನಸ್ಸು ರೋಸಿ ಹೋಗಿತ್ತು. ಯಾಕೆ ಈ ರೈತರು ಇಷ್ಟೊಂದು ಹತಾಶರಾಗಿ ಸಾವಿಗೆ ಮೊರೆ ಹೋಗುತ್ತಾರೆ, ಇದಕ್ಕೇನು ಕಾರಣ? ಇದನ್ನು ತಡೆಯುವ ಮಾರ್ಗ ಯಾವುದು? ಕೃಷಿ ನಂಬಿಕೊಂಡಿದ್ದಕ್ಕೆ ...
ಗಿಡಗಳಿಗೆ ಗೊಬ್ಬರ ಕೊಡಬೇಕಾಗಿರುವುದರಿಂದ ಗೊಬ್ಬರದ ವ್ಯವಸ್ಥೆ ಮಾಡಬೇಕಿತ್ತು. ಗೊಬ್ಬರ ಬೇರೆ ಸರಿಯಾಗಿ ಸಿಗದೆ ಗಲಾಟೆಯಾಗುತ್ತಿತ್ತು. ಈ ಗೊಬ್ಬರಕ್ಕಾಗಿ ರೈತರೆಲ್ಲ ದಿನವಿಡೀ ಸರತಿ ನಿಂತು ಅಷ್ಟೋ ಇಷ್ಟೋ ಗೊಬ್ಬರಪಡೆಯಬೇಕಿತ್ತು. ಈ ಗೊಬ್ಬರ ರಾಕ್ಷಸ...
ಎಲ್‌ಐಸಿ ಹಣ, ವಿಸ್ಮಯ ಕೊಟ್ಟ ಹಣ ಎಲ್ಲಾ ಸೇರಿಸಿ ಬ್ಯಾಂಕಿಗೆ ಕಟ್ಟಿದರು. ಕೈಯಲ್ಲಿ ಎರಡು ಲಕ್ಷ ಖರ್ಚಿಗೆಂದು ಇಟ್ಟುಕೊಳ್ಳುವಂತೆ ದೊಡ್ಡಪ್ಪ ಹೇಳಿದ್ದರಿಂದ ಇಳಾ ತನ್ನದೊಂದು ಅಕೌಂಟ್‌ನ್ನು ಸಕಲೇಶಪುರದ ಬ್ಯಾಂಕಿನಲ್ಲಿ ತೆಗೆದು ಎರಡು ಲಕ್ಷ ಅಲ್ಲಿ ಇ...
ಎಲ್.ಐ.ಸಿ. ಹಣ ಆರು ಲಕ್ಷ ಬರಬಹುದೆಂದು ಅಂದಾಜು ಸಿಕ್ಕಿತು. ಬ್ಯಾಂಕ್ ಮ್ಯಾನೇಜರ್ ಇನ್ನೂ ರಜೆಯಲ್ಲಿಯೇ ಇದ್ದರೂ, ಇನ್‌ಚಾರ್ಜ್ ಸಿಬ್ಬಂದಿಯಿಂದ ತೋಟದ ಮೇಲಿರುವ ಸಾಲ ೨೪ ಲಕ್ಷ, ಬಡ್ಡಿಯೇ ಕಟ್ಟಿಲ್ಲವಾದ್ದರಿಂದ ಅಸಲು ಬಡ್ಡಿ ಸೇರಿ ಅಷ್ಟು ಹಣ ಬೆಳೆದಿ...
ಹಾಸ್ಟಲಿನಲ್ಲಿದ್ದ ತನ್ನ ವಸ್ತುಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ಇಳಾ ಸಕಲೇಶಪುರದಿಂದ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮನೆ ತಲುಪಿದಳು. ಬಂದವಳೇ ರೂಮು ಸೇರಿ ತನ್ನ ವಸ್ತುವನ್ನೆಲ್ಲ ಹಾಕಿ ಅಜ್ಜಿಯನ್ನು ಹುಡುಕಿಕೊಂಡು ಬಂದಳು. ಅಜ್ಜಿ ದೇವರ ಮನೆಯಲ್...
ಮೋಹನನ ಅಧ್ಯಾಯ ಆಲ್ಲಿಗೆ ಮುಗಿದಂತಾಯಿತು. ಹತ್ತಿರದವರನ್ನು ಬಿಟ್ಟರೆ ಎಲ್ಲರೂ ಹೊರಟು ನಿಂತರು. ಮನೆಯಲ್ಲಿ ಸ್ಮಶಾನ ಮೌನ, ಒಂದು ರೂಮಿನಲ್ಲಿ ಇಳಾ ಮಲಗಿ ದುಃಖಸುತ್ತಿದ್ದಳು. ಅವಳನ್ನು ಸಮಾಧಾನಿಸುತ್ತ ಸುಂದರೇಶ, ರಮೇಶ ಅಲ್ಲಿಯೇ ಇದ್ದರು. ನೀಲಾ ಮತ್ತ...
ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ. ಪ್ರತಿಸಲ ಮಳೆ ಬಂದಾ...