ಕೃಷ್ಣ ಬಂದನೆ ಸಖೀ!

ಕೃಷ್ಣ ಬಂದನೆ ಸಖೀ ನೋಡು ಹೊರಗೆ ಶುಭ ಶಕುನವಾಗುತಿದೆ ಎಲ್ಲ ಕಡೆಗೆ! ಶ್ರಾವಣದ ಮೋಡ ಸುರಿಯುತ್ತಿವೆ ಕಾದಿರುವ ಭೂಮಿಗೆ ನೀರಧಾರೆ, ಬಾನು ಗುಡುಗಿನ ತಬಲ ನುಡಿಸುತ್ತಿದೆ ನಡುನಡುವೆ ಹೊಂಚುತಿದೆ ಮಿಂಚು ಬೇರೆ, ಕೋಗಿಲೆ ಮಯೂರ...

ಹರಿನಾಮದ ಪಾನದ ರುಚಿ

ಹರಿನಾಮದ ಪಾನದ ರುಚಿ ತಲೆಗೆ ಹೊಕ್ಕಿದೆ ಹಾಡಿ ಕುಣಿವ ಈ ದಾಸಿಯ ಬಾಳು ಉಕ್ಕಿದೆ ಊರು ಕೇರಿ ಕೇಕೆ ಹಾಕಿ ಕೈಯ ತಟ್ಟಿದೆ ಮೀರಾ ಹುಚ್ಚಿ ಎಂಬ ಕೂಗು ಬಾನ ಮುಟ್ಟಿದೆ. ನಿಜವೆ, ನಾನು...

ಪ್ರಿಯತಮನಿಲ್ಲದೆ ಮಬ್ಬಾಗಿದೆ

ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ ಎಂಥ ಹಬ್ಬವೆ ಹೇಳು ಸಖಿ? ಇದೆಂಥ ಹಬ್ಬವೇ ಹೇಳು ಸಖಿ. ಮನ್ಮಥದೇವನ ಹೋಳಿಯುತ್ಸವ ಹಾಳುಸುರಿಯುತಿದೆ ಹೀಗೇಕೆ? ಓಕುಳಿಯಾಟಕೆ ಕಳೆಯೇ ಇಲ್ಲ ಬಿಕೋ ಎನ್ನುತಿದ ಹಸೆ ಏಕೆ? ಬೇಯುತ್ತಿದೆ ಎದೆ ಒಂದೇ...

ಬರುವುದ ಕಂಡೆ ಗಿರಿಧಾರಿ

ಬರುವುದ ಕಂಡೆ ಗಿರಿಧಾರಿ ನನ್ನ ಮನೆಯ ಮುಂದೆ ಹಿಗ್ಗಿ ಅಡಗಿದೆನು ಲಜ್ಜೆಯಲಿ ಮನೆಬಾಗಿಲ ಹಿಂದೆ. ಹಳದಿಯ ರೇಸಿಮೆ ವಸ್ತ್ರದಲಿ ಹೊಳೆವ ದಿವ್ಯ ದೇಹ ಬಾನಿನ ಬಣ್ಣದ ಮುಖದಲ್ಲಿ ಕಣ್ಣು ಜೋಡಿ ಸೂರ್ಯ. ಕೇಸರಿ ಬಣ್ಣದ...

ಪ್ರೀತಿಯ ದೀಪವ ಎದೆಯ ಬೆಳಗಿ

ಪ್ರೀತಿಯ ದೀಪವ ಎದೆಯಲಿ ಬೆಳಗಿ ಮರೆಗೆ ಸರಿದೆಯೇನು? ಅರಿಯದ ಹೆಣ್ಣ ಉರಿಸುವೆಯಲ್ಲ ಎಂಥ ಕಟುಕ ನೀನು! ನೀನಿಲ್ಲದೆ ನಾ ಹೇಗಿರಲಿ - ಶಶಿ ಹರಸದ ನಭದಂತೆ, ಮಿಡುಕುತ್ತಿರುವ ನೀರಿನಲಿ ಉಸಿರು ಕಟ್ಟಿದಂತೆ. ದಾರಿದಾರಿಯ ಅಲೆಯುವೆ...

ಹೇಗೆ ಬರೆಯಲೇ ಓಲೆ?

ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ? ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ? ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ ಹೇಳಲಿರುವುದ ನಾ ಹೇಳಲಾರೆನೇ ಕಂಪಿಸಿದೆ ಜೀವ ನಾ ತಾಳಲಾರೆನೇ...

ಶ್ರೀ ಕೃಷ್ಣನ ಚರಣಕಮಲ

ಶ್ರೀ ಕೃಷ್ಣನ ಚರಣಕಮಲ ಭಜಿಸು ಮನವೆ ನೀ ಅವಿನಾಶೀ ಶ್ಯಾಮನ ಪದ- ಕಮಲ ಭಜಿಸು ನೀ ಲೋಕ ಒಂದು ನೀರ ಗುಳ್ಳೆ, ಕಂಡರೇನು, ಕಡೆಗೆ ಸುಳ್ಳೇ! ಬುವಿ ಬಾನಿನ ಮಧ್ಯೆ ಮಾಯೆ ಮೆರೆವ ಮಿಥ್ಯಕಿಲ್ಲ...

ಎಲ್ಲಿಗೆ ಕರೆದೊಯ್ಯುವೆ ನೀ?

ಎಲ್ಲಿಗೆ ಕರೆದೊಯ್ಯುವೆ ನೀ ಹೇಳು ಕನ್ನಯ್ಯಾ? ಬ್ಬಂದಾವನ ಬೀದಿಗಳಲಿ ಹೂ ಚೆಲ್ಲಿದ ಹಾದಿಗಳಲಿ ಎಳೆದೊಯ್ಯುವೆ ಎಲ್ಲಿಗೆ ಹೇಳು ಕನ್ನಯ್ಯಾ? ಮಡಕೆ ಒಡೆದು ಮೊಸರ ಕುಡಿದೆ ನನ್ನ ಭಂಗಿಸಿ! ಬೆಣ್ಣೆ ಸವಿದು ನಡೆದೆ ಪುಂಡ ನನ್ನ...

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೋ ನನ್ನ

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ ನಿನ್ನ ಶ್ರೀಚರಣಗಳ ಹಾಡಿ ಬೆಳೆಸುವೆ ವನವ ಕನ್ನಯ್ಯಾ, ನನ್ನ ಕನ್ನಯ್ಯಾ. ಕನಕಾಂಬರೀ ಬಣ್ಣ ಸೀರೆಯನ್ನುಡುವೆ, ಬಣ್ಣಬಣ್ಣದ ಗಿಡವ ಪಾತಿಯಲಿ ನೆಡುವೆ ಸೇವೆಯಾನಂದವೇ ಕೂಲಿ...

ಕೇಳು ಕೇಳು ಓ ಜೀವಗೆಳತಿಯೇ

ಕೇಳು ಕೇಳು ಓ ಜೀವಗೆಳತಿಯೇ, ಲೋಕ ಮೀಟಿದೆ, ನಾ ಕ್ಲೇಶ ದಾಟಿದೆ. ಗೆಜ್ಜೆ ಕಾಲಿಗೆ, ತುಳಸಿಮಾಲೆ ಕೊರಳಿಗೆ, ಲಜ್ಜೆ ಬಿಟ್ಟೆನೇ, ಹೆಜ್ಜೆ ಹಾಕಿ ಕುಣಿದೆನೇ. ರಾತ್ರಿ ಹಗಲಿಗೆ ಸೂತ್ರಧಾರಿ ಶ್ಯಾಮನ ಮಾತ್ರ ನನೆದನೇ, ಪ್ರೀತಿಪಾತ್ರಳಾದೆನೇ...