
ಹುಚ್ಚು ಹಿಡಿದಿದೆ ನನಗೆ ಹುಚ್ಚು ಹಿಡಿದಿದೆ ಕನ್ನೆಯರೆದೆ ಕಳ್ಳನ ಬೆಣ್ಣೆ ಸೂರೆಗೊಳುವನ ಕಣ್ಣು ಹೊಡೆದು ಜಡೆಯನೆಳೆದು ಸಣ್ಣನಗುವ ಮಳ್ಳನ ಹುಚ್ಚು ಹಿಡಿದಿದೆ ಮುನಿಸಿಕೊಂಡ ಹೆಣ್ಣಿನ ಮನ ಬದಲಿಸಿ, ಕಣ್ಣಿನ ಮಿಂಚು ಹರಿಸಿ ನಮ್ಮ ಮನವ ಲೂಟಿ ಹೊಡೆವ ಚಿಣ್...
ಎಂಥ ವಂಚಕನೆ ಕೃಷ್ಣ ಹೊಂಚಿ ಮರೆಗೆ ನಿಲುವ! ಪಾರಾದೆವು ಎನುತಿರುವಾಗ ಹಾರಿ ಹೊರಗೆ ಬರುವ ಕಾಡುವ ತುಂಟ, ದಾರಿಯ ತಡೆದು ಎಂಬ ಅಳುಕು ಹೊರಗೆ; ಕಾಡದೆ ಸುಮ್ಮನೆ ಬಿಡದಿರಲಿ ಎಂಬ ಆಸೆ ಒಳಗೆ! ಪೀಡಿಸಲಿ ಹರಿ ಹಾಲಿಗೆ ಬೆಣ್ಣೆಗೆ ಎನ್ನುವ ಬಯಕೆ ದಿನವೂ ಕೂಡು...
ಹೇಗೆ ತಿಳಿವೆ ನೀ ಹೇಳೆ ಸಖೀ ಒಲಿದ ನನ್ನ ಪಾಡು? ಲೋಕದ ಕಣ್ಣಿಗೆ ನನ್ನೀ ಪ್ರೇಮ ಶ್ರುತಿಮೀರಿದ ಹಾಡು ಹಿರಿಯರ ಮೀರಿ ಕೃಷ್ಣನ ಕಂಡೆ ಕೊಟ್ಟೆ ಬೆಣ್ಣೆ ಹಾಲು ಸವಿದನು ಎಲ್ಲ ನುಡಿಸಿದ ಕೊಳಲ ಜುಮ್ಮೆಂದಿತು ಕಾಡು ಒಂದೇ ಸಮನೆ ಹಳಿವರು ಹಿರಿಯರು ಪ್ರಾಯದ ಮ...
ಬಂದಿರುವನೆ ಶ್ಯಾಮ ಸಖೀ ಇಂದು ರಾಧೆ ಮನೆಗೆ ಬಂದಿರುವನು ಚಂದ್ರಮನೇ ಬಾನ ತೊರೆದು ಇಳೆಗೆ. ಹುದುಗಿಸಿಹಳು ರಾಧೆ ನಾಚಿ ಹರಿಯೆದೆಯಲಿ ಮುಖವ ಮಲ್ಲಿಗೆ ಹೂದಂಡೆ ಮೂಸಿ ಹರಿ ಮೆಲ್ಲಗೆ ನಗುವ! ಸುರಿಯಲಿ ಮಳೆ ಎಷ್ಟಾದರು ಬೀಳಲಿ ನಭ ನೆಲಕೆ ತೋಳೊಳಗೆ ಇರುವ ಹರ...
ಏನಾಗಿದೆ ನನಗೆ ಏನಾಗಿದೆ ನನಗೆ ಎಲ್ಲ ತೊರೆದು ಏಕೆ ಹೀಗೆ ಹಂಬಲಿಸುವೆ ಹರಿಗೆ? ಏನೇ ಇದು ಮಾತೇ ಇಲ್ಲ ಎನುವರು ಜೊತೆ ಸಖಿಯರು ಏನೇ ಮನೆ ಕಳುವಾಯಿತೆ ಎಂದು ಚುಚ್ಚಿ ನಗುವರು ಮನಗೆಲಸದಿ ಮನವಿಲ್ಲ, ಅಮ್ಮ ದಿನಾ ಬಯ್ವರು ಏಕೆ ಹರಿಗೆ ಕಾದು ಕಾದು ನಗೆಗೆ ಗ...
ಎಲ್ಲಿ ಹೋದನೇ ಮರೆದು-ಹರಿ ಎಲ್ಲಿ ಹೋದನೇ ತೊರೆದು? ಎಲ್ಲಿ ಹೋದನೇ ನಲ್ಲೆ ನೀಡಿದಾ ಹಾಲನು ಮಣ್ಣಿಗೆ ಸುರಿದು? ಅಲೆದು ಬಂದೆನೇ ವನವ-ನಾ ತೊರೆದು ಬಂದೆನೇ ಜನವ; ಒಲಿದು ನೀಡಿದ ಹರಿಗೆ ನನ್ನನೇ ಸುಲಿದು ಸವಿದನೇ ಫಲವ ಮಾಸಿತೇ ಮನ ಗೆಳತಿ ದಾಸನಾದ ಹರಿ ಎನ...
ನಂಬಿದವರ ಎಂದೆಂದೂ ಕಾಯುವ ಗೋವಿಂದ ಬಿಡಿಸು ದಾಸಿ ಮೀರೆಯ ಲೋಕದ ಸುಳಿಯಿಂದ. ನಾಮದೇವ ಗೃಹದ ಮುಂದೆ ಚಪ್ಪರವನು ಕಟ್ಟಿದೆ ಧನ್ನಾಭಕ್ತನ ಹೊಲದಲಿ ಬೆವರ ಸುರಿಸಿ ಬಿತ್ತಿದೆ, ಕರಮಾಬಾಯಿ ನೀಡಿದ ಖಿಚಡಿಯೆಲ್ಲ ತಿಂದೆ ಭಕ್ತ ಕಬೀರನ ಮನೆಯ ಎತ್ತು ಹೊಡೆದು ತಂ...
– ಗೋವಿನ ಹಾಡು ಗೀತೆಯನ್ನು ಆಧರಿಸಿ ರಚಿಸಿದ ಗೀತರೂಪಕ. ಇದನ್ನು ಆಡಿಸುವಾಗ ಪಾತ್ರಗಳ ಜೊತೆಯಲ್ಲಿ ಹಾಡುವ ಮೇಳಗಳನ್ನೂ ಬಳಸಬಹುದು. ಕಾಳಿಂಗ ಎಂಬ ಗೊಲ್ಲ ಮನುಜ ಗಿನುಜರಾ ಕಥೆಯಲ್ಲ – ಇದು ದೇವದಾನವರ ಸ್ತುತಿಯಲ್ಲ, ಆಡಿದ ಮಾತಿಗೆ ಜೀವವ ...
ನನ್ನ ಮುದ್ದು ಚಿಲಿಪಿ ಗಿಣಿಯೇ ಬಂಗಾರ ತುಂಬಿದ ಗಣಿಯೇ ಹೂನಗೆ ಅರಳಿದೀ ಮುಖಕೆ ಹುಣ್ಣಿಮೆ ಆಕಾಶ ಎಣೆಯೇ? ಹೇಗಿರದೆ ನೀನಿದ್ದೆ ಮಗುವೇ? ಕತ್ತಲಾಗಿತ್ತಲ್ಲ ಜಗವೇ ನೀ ಬಂದು ನಗಲು ಈ ಇಳೆಗೇ ಹರಿದಿದೆ ಬೆಳಕಿನ ಹೊಳೆಯೇ! ರಸಹೀನವಾಗಿತ್ತು ಬಾಳು-ಈಗ ಮೊಸರು...
ಹೇಗೆ ಸಹಿಸಲೇ ಇದರಾಟ ತಾಳಲಾರೆ ತುಂಟನ ಕಾಟ ಸಣ್ಣದಾದರೂ ಶುದ್ಧ ಕೋತಿ ಸಾಕಮ್ಮ ಇದ ಸಾಕಾಟ! ನೂರು ಇದ್ದರೂ ಸಾಲದು ಬಟ್ಟೆ ನಿಮಿಷ ನಿಮಿಷಕೂ ಒದ್ದೆ! ತೂಗೀ ತೂಗೀ ತೂಕಡಿಸುತ್ತಿರೆ ನಗುವುದು ಬೆಣ್ಣೇ ಮುದ್ದೆ! ಕೇಕೆ ಹೊಡೆವುದು ಕೋಗಿಲೆಯಂತೆ ಗರ್ಜನೆಯಂತ...








