ಹೆಮ್ಮೆ ನನಗೆ ಅಮ್ಮ ನಿನ್ನ ತಾಯಿಯೆಂದು ಕರೆಯಲು ಕಂದನೆಂಬ ನಿನ್ನ ಪ್ರೀತಿ ಸವಿಯು ಜೇನಿಗಿಂತಲು ಏನು ತಾನೆ ಇದ್ದರೂ ನಿನಗೂ ಸಿರಿವಂತರು? ಬಲ್ಲೆ ನಾನೆ ಇರುವರೆಷ್ಟೋ ನಿನಗೂ ಧೀಮಂತರು; ಬಾಳಿಬಂದ ಗರಿಮೆಯಲ್ಲಿ ಯಾರು ಸಮಕೆ ಬರುವರು? ತಾಳಿ ನಿಂತ ಸಹನೆಯ...

ಚಿಕ್ಕೆಯಾಗಿ ಒಳಗೆ ಹೊಳೆದು ತುಟಿಗೆ ಬಾರದವನೆ, ಮಕ್ಕಳ ನಗೆಗಣ್ಣಿನಲ್ಲಿ ಬಾಗಿಲು ತೆರೆದವನೆ, ಉಕ್ಕುವ ಹೂಚೆಲುವಿನಲ್ಲಿ ಸೊಕ್ಕುವ ತೆನೆ ಪಯಿರಿನಲ್ಲಿ ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ! ಆಡುವ ಮಗು ಓಡಿ ಬಂದು ತೊಡೆಯನೇರಿದಾಗ, ಗೂಡ ನೆನೆ...

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ! ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು; ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ ಅಂಬರದಲಿ ಮಿಂಚಿದೆ ನಿನ್ನ ಕ...

ಗಾಳಿಗೆ ತೂಗಾಡುವ ಬಿದಿರ ಚಿಂತೆ ಇಂತು ಗಾಳಿಯನೇ ಆಡಿಸುವ ಬಾಳಾಗುವುದೆಂತು? ಸಿಕ್ಕಿಬಿದ್ದೆ ಮೆಳೆಯಲಿ ಮೈಯೆಲ್ಲಾ ಮುಳ್ಳು ಬಾ ಎನ್ನದ, ಕೋ ಎನ್ನದ ಬಾಳಿದು ಹಸಿ ಸುಳ್ಳು ಪಾದ ಹುಗಿದು ಮಣ್ಣಲಿ ಕನಸಾಡಿದೆ ಕಣ್ಣಲಿ ಕಾಯುತಿರುವೆ ಕಡಿವವನಿಗೆ ಬಾಳಾಗಲು ನ...

ಶರಣಾದೆ ತಾಯೆ ಶರಣಾದೆ ಕಾಯೆ, ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ ಒಡಲಾದ ಸಿರಿಯೆ. ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು, ಬೆಳಗೀತು ಭುವನವೇ ನೀನೊಮ್ಮೆ ನಗಲು; ಕೋಪಿಸಲು ಆಕಾಶ ಕಾರುವುದು ಸಿಡಿಲು, ಇರುಳೊಂದು ಎಲ್ಲಿದೆಯೆ ನಿನ್ನದೇ ನೆರಳು! ಹೊಲ...

ಉರಿಯುವ ಚೆಂಡನು ನೀಲಿನಭದಲ್ಲಿ ಇರಿಸಿದವರು ಯಾರು? ಹಗಲಿನ ನಾಟಕ ಮುಗಿಸಿ ಕರಿತೆರೆ ಸರಿಸುವವರು ಯಾರು? ಅಂಧಕಾರದಲಿ ಚಂದ್ರನ ಹಣತೆಯ ಹಚ್ಚುವವರು ಯಾರು? ಬಾನಿನ ಮೈಯನು ಮುಗಿಲ ವಸ್ತ್ರದಲಿ ಮುಚ್ಚುವವರು ಯಾರು? ಸಣ್ಣ ಗಿಡದಲು ಬಣ್ಣದ ಹೂಗಳು, ಹಸಿರೆಗೆ...

ಏನೇ ನೋವಿರಲಿ- ಯಾವುದೆ ಭಾಧೆಯ ಕಾವಿರಲಿ, ನಮ್ಮ ಮನೆಯೊಂದೇ – ಇದರಲಿ ಪ್ರೀತಿ ಆರದಿರಲಿ. ಸ್ನೇಹ ಪ್ರೀತಿ ಎಂತೋ-ವಿರಸವು ಕೂಡ ಸಹಜ ಅಂತೆ, ಚಿಂತೆ ಇಲ್ಲ ಇರಲಿ-ಎಲ್ಲೂ ಗೋಡೆ ಬಿರಿಯದಂತೆ ಬೇಸಿಗೆ ಉರಿಬೇಗೆ-ಜಡಿಮಳೆ ಸಿಡಿಲು ರೇಗಿ ಕೂಗೆ ಕದವು ಅ...

ಏನು ಸಂಯಮ ನಿನ್ನದು ಎಂಥ ತಾಳ್ಮೆಯು ನಿನ್ನದು! ಎಲ್ಲ ಕಡೆಯೂ ಇರುವ ನಿನ್ನನೆ ಅಲ್ಲಗಳೆದರೂ ತಾಳ್ವುದು, ನಿನ್ನ ಕಾಣದ ಬೆರಳು ಸೋಕದೆ ಹೂವು ದಳಗಳ ತೆರೆವುದೇ? ನಿನ್ನ ಸನ್ನೆಯ ಆಜ್ಞೆ ಬಾರದೆ ಗಾಳಿ ಕಂಪನು ಹೊರುವುದೇ? ಗಿರಿಯು ನಿಲುವುದೆ, ಹೊನಲು ಹರಿವ...

ಸರಿದೀತೇ ಕಾರಿರುಳು ಈ ದೇಶದ ಬಾಳಿಂದ? ಸುರಿದೀತೇ ಹೂ ಬೆಳಕು ಈ ಭೂಮಿಗೆ ಬಾನಿಂದ? ಅಲುಗಾಡಿದ ಛಾವಣಿ ಮೇಲೆ ಬಿರುಕಾಗಿವೆ ಗೋಡೆಗಳು, ನಡುಗುತ್ತಿದೆ ಕಾಲಡಿ ನಲವೇ ಗುಡುಗುತ್ತಿವೆ ಕಾರ್ಮುಗಿಲು, ಕೆಳಸೋರಿದೆ ಮಳೆಧಾರೆಯು ಹರಕಲು ಸೂರಿಂದ, ಕೊನೆಯೆಂದಿಗೆ...

ಬಾನಿಂದೇನೋ ಇಳಿಯುತಿದೆ ಬುವಿಯೆದೆಯೊಳಕ್ಕೆ ಕಲ್ಪನೆ ಏನನೊ ಸೇರಿಸಿದೆ ಕಾಣುವ ದೃಶ್ಯಕ್ಕೆ ನದಿಯೆದೆಯಲ್ಲಿ ಮುಗಿಲಿನ ಕವಿತೆ ಹುಣ್ಣಿಮೆ ಇರುಳಲ್ಲಿ, ಬಾನಿನ ಹಾಡು ಮೂಡಿತು ಹೇಗೆ ಭೂಮಿಯ ಶ್ರುತಿಯಲ್ಲಿ? ನೋಟಕೆ ಶ್ರವಣಕೆ ತಿಳಿಯದ ಏನೋ ಕಾಡಿದೆ ಎದೆಯಲ್ಲ...

1...4243444546...68