ಸುತ್ತ ಹಬ್ಬುತಿದೆ ತುಳಸೀ ಪರಿಮಳ ಸಣ್ಣಗೆ ಗೆಜ್ಜೆ ದನಿ, ಕೋಗಿಲೆ ಉಲಿಯೋ ಕೊಳಲೊ ಕಾಣೆ ಮೋಹಕ ಇನಿಯ ದನಿ. ಹಗಲಿನ ಧಗೆಯಲಿ ನೀಲಿಯ ಮುಗಿಲು ಇಣುಕಿ ಹಾಯುವಂತೆ ಯಾರದೊ ನೆರಳೋ ಹೊಂಚಿ ಆಡುತಿದೆ ಗುರುತೇ ಕೊಡದಂತೆ. ಇಲ್ಲೇ ಗಿಡಮರ ಪೊದೆಗಳ ಮರೆಗೆ ತಿಳಿಯದ...

ಹೆತ್ತ ತಾಯಿಯೆ ನಿನ್ನ ಸೇವೆಗೆ ಮುಡಿಪು ನನ್ನೀ ಬಾಳುವೆ, ನಿನ್ನ ಮಗ ನಾ ಎನುವ ಹೆಮ್ಮೆಯ ಹೊತ್ತು ಹರಿದಿದೆ ಕಾಲುವೆ. ನಿನ್ನ ಸ್ಮರಣೆಯೆ ಇಂಥ ಭೀಕರ ಯುದ್ಧ ರಂಗದ ನಡುವೆಯೂ, ಸಹಜವಲ್ಲದ ಬಿರುಸು ಬಾಳಿನ ಮೃತ್ಯು ಸನ್ನಿಧಿಯಲ್ಲಿಯೂ. ನೆಮ್ಮದಿಯೊಳಿದೆ ಇಡ...

ತಾಯೇ ನಿನ್ನ ಪ್ರೀತಿಯ ಬಾಗಿನ ಎಲ್ಲಕು ಮೀರಿದ್ದೆ, ಗಾಳಿ, ನೀರು, ಅನ್ನದ ರಕ್ಷೆ ಮಾತಿಗೆ ನಿಲುಕದ್ದೆ. ಕನ್ನಡದಂಥ ಕಂಪಾಡುವ ನುಡಿ ನಾಲಿಗೆಗೇರಿದ್ದು, ಪಂಪ ಕುವೆಂಪು ಕುಮಾರವ್ಯಾಸ ಬಂಧುಗಳಾದದ್ದು, ಸಾಮಾನ್ಯವೆ ಶ್ರೀ ಪುರಂದರ ಬಸವ ಜಕಣರು ಕಡೆದದ್ದು,...

ನನ್ನ ಮನದಾಳಕ್ಕೆ ನೀನು ಇಳಿದುದೆ ಚಂದ ಸುಳಿದಂತೆ ಮಲೆನಾಡ ಗಾಳಿ ಗಂಧ ಎಳೆಗರಿಕೆ ಮೇಲೇಳುವಂತೆ ಸುಡು ನೆಲದಿಂದ ಸಂಜೆ ಹಣ್ಣಾದಂತೆ ಬಾನ ತುಂಬ ನೀ ಸುಳಿವ ಗಳಿಗೆ ಪ್ರೀತಿಯ ಹೊಳೆಗೆ ನೆರೆಬಂತು ಬಣ್ಣ ಬದಲಾಗಿತ್ತು ಪೂರ ಇಳೆಗೆ ಮಣ್ಣು ಹೊನ್ನಾಗಿತ್ತು, ಮ...

ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು ಅಮ್ಮಾ ನಿನ್ನ ಕಣ್ಣ ಕಾಂತಿಯ ಸಣ್ಣ ಕಿರಣವು ನಾನು ಎಂಥ ಹೆಮ್ಮೆಯೆ ಅಮ್ಮ ನಿನ್ನ ಕಂದ ನಾನಾಗಿರುವುದು ಸಾಟಿ ಇಲ್ಲದ ಭುವನಮಾತೆ ನನ್ನ ತಾಯಾಗಿರುವುದು ಇತಿಹಾಸಕೇ ನಿಲುಕದ ಕಾಲಕೂ ನೀ ಪೂರ್ವಳು ಉಪನಿಷತ್ತ...

ಮುಗಿಲ ತೂರಿ ಮೇಲೆ ಎದ್ದ ಗಿರಿಯ ನೆತ್ತಿಯಲ್ಲಿ, ಕರುಳ ಕೊರೆವ ಹಿಮಗಾಳಿಯ ಕಲ್ಲಭಿತ್ತಿಯಲ್ಲಿ, ಎವೆ ಬಡಿಯದ ಎಚ್ಚರದಲಿ ಹೊತ್ತಿ ಉರಿವ ಕೆಚ್ಚಿನಲ್ಲಿ ದೇಶ ನನ್ನ ದೈವ ಎಂದು ಹೋರಾಡುವ ಧೀರರೇ, ನಿಮ್ಮೊಡನಿದೆ ನಮ್ಮ ಹೃದಯ ಇದೋ ನಿಮಗೆ ವಂದನೆ ತಿನ್ನಲಿರದ...

ಕರಗುವ ಇರುಳಿನ ಹಣೆಯಲ್ಲಿ ಮೂಡಲ ಗಿರಿಯ ಮಣೆಯಲ್ಲಿ ಹೂಳೆಯುವ ರತ್ನದ ಹಣತೆಯನು ಹಚ್ಚುವರಾರು ಮರೆಯಲ್ಲಿ? ಬೆಟ್ಟವು ಬಾನಿನ ಕಡೆಗೇಕೆ ತೊರೆಗಳು ತಗ್ಗಿನ ಕಡೆಗೇಕೆ? ನಭದಲಿ ತೇಲುವ ನೀಲಿ ಹಂಡೆಗಳು ಮಣ್ಣಿಗೆ ಉರುಳುವುದೇತಕ್ಕೆ? ಹೂವನು ಚಿಮ್ಮುವ ಮುದವೇನ...

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ ಶಕ್ತಿಗಿದೋ ನಮನ, ಸುತ್ತಲು ಸಾಗರವಸ್ತ್ರವ ಧರಿಸಿದ ಭರ್ತೆಗಿದೋ ನಮನ; ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ ತಾಳಿ ನಿಂತರೂನು ಸಾಟಿಯಿಲ್ಲದಾ ಏಕರೂಪಾದ ತಾಯಿಗಿದೋ ನಮನ. ಮರಗಿಡ ಆಡಿ ತೀಡುವ ಗಾಳಿಯ ಪರಿಮಳ ನಿನ್ನುಸಿ...

ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ ಮೀಯು...

ಮರವು ತೂಗಾಡಿದವು ಬಳ್ಳಿ ಓಲಾಡಿದವು ಹೂವು ನಕ್ಕವು ಕುಲುಕಿ ಮೈಯನೆಲ್ಲ, ಮಂದಮಾರುತ ಸುಳಿದು ಗಂಧವನು ಹಂಚಿದನು ನೀ ಬಂದೆ ಎನ್ನುವುದು ತಿಳಿಯಲಿಲ್ಲ ನದಿ ಹಾಡಿ ಓಡಿತು, ಬೆಳುದಿಂಗಳಾಡಿತು ಮೆಚ್ಚಿ ಸವರಿತು ಬೆಳಕು ಮುಗಿಲ ಗಲ್ಲ, ಮಣ್ಣ ಕಣ ಕಣವೂ ಚಿನ್ನ...

1...4142434445...68