
೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ ಪ್ರಶಾಂತ ಭಾವದಿ ಕೃತಕೃತ್ಯತೆಯಾ...
ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ, ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ ಪಾತದದ್ಭುತ ಭೀಮಕಾಂತ ಕಮನೀಯತೆಗೆ ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ; ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ, ಈ ನದಿಯ ಚಿತ್ರತರ ಭ್ರಗುಪತನ ಘೋಷವನು- ಮ...
ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ ಕೆಳ ಕೆಳಗಾಳದ ಕಣಿವೆಯೊಳು; ಕಪ್ಪೆಯ ಗೂಡೋ, ಹುತ್ತವೊ ಇದು ಎನೆ ನಗೆಗೇಡಾಯಿತು ನೆರೆಹೊಳಲು; ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ, ಹಳುವೋ ಹುಲ್ಗಾವಲ ಹರಹೋ? ಎನ್ನುತ ಭ್ರಮಿಸುವ ತೆರವಿಂದಾಯಿತು ನಂದಿಯ ಬೆಟ್ಟದ ಮೇ...
ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ ವರ ಯೋಗಿಯ ನಿಶ್...
ರಾಜ್ಯನೀಗಿ ಪಲಿತ ಮಾಗಿ ನಡೆದ ವಾನಪ್ರಸ್ಥನಾಗಿ; ಹೇಽಮಂತ ತಪಸ್ಸಾರ ಚೈತ್ರ ಗಾದಿಗಿನ್ನೂ ಬಾರ; ಅಂಥ ಸಂಽದಿಗ್ಧ ಸಮಯ. ಆಳ್ವರಿಲ್ಲದಿಳೆಯ ಪರಿಯ- ನೆಂತು ಪೇಳ್ವೆ? ಬಾನೊ ಬಯಲು, ಶಿಶಿರಶರಣವಾದ ನೆಳಲು, ದಹನನಿಪುಣ ಕಠಿನತಪನ, ನೀರಸತರು ನಿಬಿಡ ವಿಪಿನ, ಹ...








