
(ಶ್ರೀಮಾನ್ ಗುಡಿಪಾಟಿ ವೆಂಕಟಾಚಲಮ್ ರವರ ಲೇಖನವೊಂದನ್ನು ಬೆಂಗಳೂರಿನ ಕನ್ನಡಿಗರೊಬ್ಬರು ಅನುವಾದಿಸಿದುದರ ಆಧಾರದಿ೦ದ ಬರೆದುದು) ಸೀತಾ:- ಬಾರಿಲ್ಲಿ ಶ್ರೀರಾಮ ಕಲ್ಯಾಣಮೂರ್ತಿ, ಬಹುದಿನದಿ ಬಳಲಿಹೆನು; ನೊಂದಿಸಿರಿ, ಬೆಂದಿಹಿರಿ ಅಗಲಿಕೆಯ ಅನುದಿನದ ಅಗ...
ಆವದೇವನ ಬನವೋ! ದೇವದೇವನ ಬನವೋ! ದೇವನಾಡಿದ ಬನವೋ! ಮತ್ತೆ ದೇವಾನುದೇವತೆಗಳೆಲ್ಲ ಕೂಡಿದ ಬನವೋ! ಇದು ಇಂದ್ರವನ! ಸಗ್ಗವನ! ಆವುದಾದರು ಇರಲಿ; ನಾನಿರ್ಪ ಒನವಿದೇಂ ದಿವ್ಯ ಬನವೋ! ಪೂರ್ವಜನ್ಮದ ಫಲವೋ! ಪುಣ್ಯ ಪೆಚ್ಚಿದ ಫಲವೋ! ದೇವನೊಲುಮೆಯ ಫಲವೋ! ಏನಿರ...
೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು ಅಂಬಾ!...
ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ...
ಗದುಗಿನ ನಾಡಹಬ್ಬದಲ್ಲಿ ಶ್ರೀ ಮಧುರ ಚೆನ್ನ ರಿ೦ದ ಪರೀಕ್ಷಿಸಲ್ಪಟ್ಟು ರಜತ ಪದಕವನ್ನು ಪಡೆದುದು ಅಮಾ, ಚಿತ್ರದ ಅಂಗಡಿ ನೋಡೆ ! ಸುಂದರ ಸೊಬಗಿನ ಅಂಗಡಿ ನೋಡೆ ! ಬಗೆ ಬಗೆ ಬಣ್ಣದ ಪಟಗಳ ನೋಡೆ ! ಭಾರತದೇಶದ ಚಿತ್ರವನೋಡೆ ! || ೧ || ಅಮ್ಮಾ, ಇಲ್ಲಿದೆ ...
೧ ತಾಳೆಯ ಮರದಡಿ ತಪವನು ಗೈಯುವ ತರುಣನೆ ಏಳಪ್ಪಾ! ಕಣ್ಣು ಮುಚ್ಚಿ ನೀ ಕಾಲವ ಕಳೆದರೆ ಕಾಣುವಿಯೇನಪ್ಪಾ ! ೨ ತಾಳೆಯ ಮರವಿದು ಬಾಳಲಿ ಬಹುದಿನ ಕೇಳುವರಾರಪ್ಪಾ! ಅರಳು ಮಲ್ಲಿಗೆಯು ಅರೆಚಣವಿರುವದು ಪರಿಮಳವೆಷ್ಟಪ್ಪಾ! ೩ ಕಾಯಕವರಿಯದೆ ಕಾಯವ ಬೆಳಿಸಿದಿ ಹೇ...
(ಹರೀಂದ್ರನಾಥ ಚಟ್ಟೋಪಾಧ್ಯಾಯರ ಒಂದು ಇಂಗ್ಲೀಷ್ ಕವಿತೆಯ ಅನುವಾದ) ಭೂಮ್ಯಾಕಾಶದ ಕೆಂಪುಗಳೆಲ್ಲವು ಕೂಡುತೆ ಹಬ್ಬವ ಮಾಡಿದವು. ಬಂದವು ಅಲ್ಲಿಗೆ ಬಗೆ ಬಗೆ ಕೆಂಪು, ಗುಲಾಬಿ ಪೂಗಳ ಪರಿಮಳ ಕೆಂಪು, ಮಸಣದ ಜ್ವಾಲೆಯ ಗುಟ್ಟಿನ ಕೆಂಪು, ಅರುಣ ಕಿರಣಗಳ ಸಂಜೆ...








