
ಇರವಿಗೂ ಅರಿದೇನು? ಇರವೆ ಅರಿದರಿದು; ಮೇ- ಣಿದುವೆ ಅದ್ಭುತರಮ್ಯ ಶ್ರೀವಿಭೂತಿ! ಕಂಡುದನೆ ಕೊನೆಯೆಂದು ಕಣ್ಣು ಬಣ್ಣಿಸುತಿತ್ತು. ಅರಿವು ಒಡನುಡಿಯಿತ್ತು ‘ನೇತಿ ನೇತಿ’. ಒಂದು ಕಿಡಿಕಣದಲ್ಲು ಮಿಡಿದು ಮಿಳ್ಳಿಸುತಿರುವ ಇರವಿನಾಲದ ಬೀಜವದಕು ಕಿರಿದು. ಹ...
ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ ಎಂಟೆದೆಯ ಹುಲಿರಾಯ, ನಂಟ ನೀನು. “ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು” ಎನುವೆ ಅದು ತಿಂದಂಥ ಗಂಟು ಏನು? ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು ನರಪಶುವು ನರಹಸುಗಳೆಷ್ಟೊ ತಿಂದ. ತನ...
ಹರಿಗಡೆದ ಕೆರೆಯ ಕೊಳೆಗೊಂಡು ನಾರುವ ನೀರು ರಸವ ಹೀರುವ ಕಸದ ತವರು ಮನೆಯು. ಸಾವ-ಕುದುರೆಯ ದಂಡಿನೊಲು ಬರುವ ಸೊಳ್ಳೆಗಳ ಮೇವು-ಮೀಸಲಕಾಗಿ ಕಾದ ಬನವು. ಮೀಂಬುಲಿಗ ಬೆಳ್ಳಕ್ಕಿ ಬೇಟೆಯಾಡಲು ಅಡವಿ; ಮೀನಗಳ ಹುಟ್ಟು ಮನೆ; ಸುಡುವ ಕಡೆಯು; ಮೀನಬಲೆಗಾರರಾಡುಂ...









