ಬನ್ನಿ ಬನ್ನಿ | ಬನ್ನಿ ಬನ್ನಿ | ಬನ್ನಿ ಮಕ್ಕಳೇ | ಕೂಡಿ ಆಡಿ ಕೂಡಿ ನಲಿವ | ಬನ್ನಿ ಮಕ್ಕಳೇ|| ವಿದ್ಯೆ ಬುದ್ದಿ | ಎಲ್ಲ ಕಲಿತು | ಮುಂದೆ ನಡೆಯುವಾ | ರೀತಿ ನೀತಿ | ನಡತೆ ಕಲಿತು | ಬಾಳ ನಡೆಸುವಾ || ಕುಂಟ ಕುರುಡ | ಮೂಗ ಕಿವುಡ | ಬನ್ನಿ ಎನ್ನು...

ಗೋವೆಯ ಕಡಲಿಂದ ಎದ್ದು ಬಂದ ಜಲದೇವತೆ ನೀ ನೀಲ ಸುನೇತ್ರೀ ಮಿಥಿಲಾ ನಗರದ ವರಪುತ್ರೀ || ಬಂದಿಹೆ ನೀ ಹೊಸ ಬಾಳನರಸಿ ಆಗುವೆ ನೀ ಎನ್ನ ಬಾಳಿನ ಅರಸಿ | ಸ್ವಾಗತ ನಿನಗೀ ಚೆಲುವಿನ ನಾಡಿಗೆ ಕಲೆಗಳ ತೌರಾದ ಕನ್ನಡ ನಾಡಿಗೆ ||೧|| ಕವಿಗಳು ಹಾಡಿದ ಕನಸಿನ ಹಾ...

ಹೃದಯ ಮಂದಿರದಲೊಂದು ಮೂರ್ತಿಯನು ಕಲ್ಪಿಸಿ | ಭಕ್ತಿ ರಸ ಕುಸುಮದಿಂದ ನಿನ್ನ ಪೂಜಿಪೆ ತಂದೆ ||೧|| ನನಗಿಲ್ಲ ಧನ ಧಾನ್ಯ ನಾನಲ್ಲ ಜಗ ಮಾನ್ಯ | ಪುಣ್ಯ ಕ್ಷೇತ್ರಕ್ಕೆ ಹೋಗಿ ನಿನ್ನ ಸೇವೆಯ ಮಾಡಿ | ಸುಖ ಗಳಿಸುವಾ ಭಾಗ್ಯ ಎಸಗಿಲ್ಲ ತಂದೆ ||೨|| ಜನ ಸೇವ...

ಭಾವಗೀತೆ ಹಾಡಲೇನು | ಹೃದಯ ಭಾರ ಇಳಿಸಲೇನು || ಪ || ಕುಬ್ಜವಾಗಿ ನಿಂತ ನಾನು ನೂರು ಕನಸ ಕಂಡೆನು | ಕನಸನೆಲ್ಲ ಹಿಡಿಯ ಹೋಗಿ ಬರಿಯ ಶೂನ್ಯ ಕಂಡೆನು ||೧|| ಆಸೆ ಎಂಬ ತೇರನೇರಿ ದೂರ ದೂರ ಹೋದೆನು | ನೆನೆಸದಷ್ಟು ದೂರ ಹೋಗಿ ಗುರಿಯನೆಲ್ಲೂ ಕಾಣೆನು ||...

ಗಣಪತಿಯೇ ನಮಿಪೆವು || ನಿನ್ನ || ಗಣಪತಿಯೇ ನಮಿಪೆವು || ನಾವು || ವಿದ್ಯಾರಂಭಕೆ ಸಿದ್ಧಿ ಸಾಧನೆಗೆ ವಿಧ ವಿಧ ಕಲೆಗಳ ಕಲಿಕೆಗೆ ವಿಜಯದ ಗಳಿಕೆಯ ಸುಲಭದ ಹಾದಿಗೆ ವಿಘ್ನರಾಜನೇ ನಮಿಪೆವು ನಿನಗೆ ||೧|| ವೀರ ಯೋಧರ ದೇಶ ಸೇವೆಗೆ ವಿನಯವಂತರ ಉನ್ನತಿಗೆ |...

ಸಾಹಿತ್ಯ ಗಗನದಲಿ ಧ್ರುವ ತಾರೆ ಮಿನುಗುತಿತ್ತು ಒಮ್ಮೆಲೇ ಮಾಯವಾಯ್ತು ಕಣ್ಮರೆಯಾದುದು ಜಡಕಾಯ ಶಾಶ್ವತವಾಗಿ ಉಳಿದದ್ದು ಅಮೂಲ್ಯ ಕೃತಿಗಳಲಿ. ಅದೆಂದಿಗೂ ಧ್ರುವ ಚಿರ ಶಾಂತಿ ಹೊಂದಲಿ ಜೀವ ಎಂದು ನಿನ್ನ ಬೇಡುವೆ ದೇವ. ೭-೧೦-೧೯೭೫ ರಂದು ಶ್ರೀ ಡಿ.ವಿ. ಗ...

‘ದುಡಿಯುವ ಮಹಿಳೆ’ ಪಟ್ಟ – ಭದ್ರ ನನಗಿಲ್ಲ. ‘ಕಸ ಮುಸುರೆಯವಳು’ ಅನ್ನುವ ಬಿರುದು ಮಾತ್ರ ನನಗೆ. ವಾರದ ರಜಾ ದಿನದಿಂದ ಹೆರಿಗೆಯ ರಜೆಯವರೆಗೆ ಯಾವ ರಜೆಯೂ ನನಗಿಲ್ಲ. ದಿಪಾವಳಿ- ಯುಗಾದಿಗೂ ರಜೆ ಇಲ್ಲ – ಜಾಸ್ತಿ ಕೆಲಸ! ಓಟಿ ಇಲ್ಲ &#82...

ಪೇಟೆ ಬೀದಿಯಲ್ಲಿ ಹಗಲು – ಹತ್ತು ಘಂಟೆಯ ಸಮಯ ಒಬ್ಬ ಬಿದ್ದಿದ್ದ ಕುಡಿದೋ ಜ್ಞಾನ ತಪ್ಪಿಯೋ, ಸತ್ತೋ ಬಿದ್ದಿದ್ದ. ನೋಡಲು ಯಾರಿಗೂ ಮನಸ್ಸಿಲ್ಲ, ಧೈರ್ಯವಿಲ್ಲ, ಸಮಯವಿಲ್ಲ ಸಂಜೆ – ಅವನು ತರಕಾರಿ ಮಾರುತ್ತಿದ್ದ. ಬೆಳಗಿನ ವೇಳೆ ಸಂತೆಯಲ್...

ವೃತ್ತಪತ್ರಿಕೆಯ ಕುರಿತು ಶಾಲಾ ಕಾಲೇಜು ದಿನಗಳಿಂದಲೂ ಬರೆಯುತ್ತಾಬಂದಿದ್ದೇವೆ ಲೇಖನಗಳನ್ನು, ಪ್ರಬಂಧಗಳನ್ನು. ಹಾಡಿ ಹೊಗಳಿದ್ದೇವೆ ಅದರ ಬಹು ಉಪಯೋಗಗಳನ್ನು. ಕಳೆದ ವಿದ್ಯಾರ್ಥಿ ದೆಸೆ ಮುಗಿದ ನಿರುದ್ಯೋಗ ಪರ್ವ ಬಂದೆರಗಿದ ಸಂಸಾರ ಸಾಗರ ಇದೀಗ ತಿಳಿಸ...

ಬನ್ನಿ ಕೂಗಾಡೋಣ ಸ್ಟೇಚ್ಛೆಯಾಗಿ ಕಿತ್ತಾಡೋಣ ಬಾಯ್ತುಂಬ ಜಗಳ ಮಾಡೋಣ ಸಂಶಯ, ಅಸಮಾಧಾನ ಅಶಾಂತಿ, ಜಿಗುಪ್ಸೆ ಪರಸ್ಪರ ಮಿಥ್ಯಾರೋಪ ಎಲ್ಲ ಹೊರ ಹಾಕೋಣ ನೋವಿಳಿಸಿ ಹಗುರಾಗೋಣ ದ್ವೇಷ ರೋಷ ಮರೆಯೋಣ ನಗುತ ನಗುತ ಬಾಳೋಣ. ಮೌನಾರೋಪ ಬೇಡ ಶೀತಲ ಯುದ್ಧ ಬೇಡ ಮನ...

12345...9