
ರಾಮನಿಲ್ಲದ ನಾಡಿನಲ್ಲಿ ರಾಮ ಬಾಣದ ಆರ್ಭಟ ಜುಟ್ಟು ಗಡ್ಡಗಳ ಕಾಳಗದಲ್ಲಿ ರಕ್ತದೋಕುಳಿ ಚೆಲ್ಲಾಟ ರಾಮನಿದ್ದನೋ ಇಲ್ಲವೋ ಮಸೀದಿಯಂತೂ ಬಿದ್ದಿದೆ ಮಂದಿರ ಮೇಲೇಳದಿದ್ದರೂ ಸಿಂಹಾಸನ ದಕ್ಕಿದೆ ಜುಟ್ಟುಗಳ ಆಚೆಗೂ ಜುಟ್ಟುಗಳು ಬೆಳೆದಿದೆ ಗಡ್ಡಗಳ ಆಚೆಗೂ ಗಡ್...
(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ ಎಲ್ಲ ಎಲ್ಲ ಬದುಕಲಿ ನಮ್ಮ ಸಾವು ನೋಡಿ ...
ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ ಸೂರ್‍ಯರಿಗೆ ಮರುಜನ್ಮ ಜೊತೆಗೇ ಬಂತ...
ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಹೃದಯ ತೆರೆದಿವೆ ಗಾಳಿ ಕೊಳಲ ನೂರು ಸ್ವರಕೆ ಅಬ್ಬರದ ಮನ ಜಾರ...
ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸ ಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್‍ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು ಯಾಕ ಒಳಗ ಕುಂತಿ ಎದ್ದು ಹೊರಗೆ ಬಾರಣ್ಣ… ನ...
ಬೇಡ ಅಮ್ಮ ಬೇಡ ಕಾಣದೂರಿನ ಪಯಣಕೆ ತಪ್ಪೊ ನೆಪ್ಪೊ ಹೊಟ್ಟೆಗಿರಲಿ ಮರಳು ನಿನ್ನೀ ಊರಿಗೆ ಮೂಲೆಯಲ್ಲಿ ಒಂಟಿ ಹಣತೆ ಕಣ್ಣು ಸಹಿಸದಾಗಿದೆ ಸುತ್ತ ಕತ್ತಲು ಗಾಢ ಮೌನ ಬದುಕು ಮಸಣ ಆಗಿದೆ ಊರು ಸೇರಿದೆ ಬಂಧು ಬಳಗ ಮರಳಿ ಬರುವ ಖಾತ್ರಿಯಿಲ್ಲ ನಿನ್ನ ಕರುಣೆಯೆ...
ಕ್ರೀಡಾ ಭೂಮಿಕೆ ಮತ್ತು ಬಯಲು ಆಲಯಗಳೆರಡೂ ಒಂದೇ. ಎರಡೂ ಪವಿತ್ರವಾದುವೇ. ಕಾರಣ, ಇಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲಗೊಳ್ಳುವ ಮನಸ್ಸು ಎಲ್ಲಾ ಜಾತಿ, ಮತ, ವರ್ಗ, ಪಂಗಡ, ಭಾಷೆ, ರಾಷ್ಟ್ರೀಯತೆ ಮೊದಲಾದ ಎಲ್ಲಾ ಗೋಡೆಗಳನ್ನು ಮೀರಿ ನಿ...
ಒಲವೇ ನನ್ನೊಲವೇ ಕಣ್ಣಲ್ಲಿ ಕಾಡಿರುವೆ ನೂರೊಂದು ಕನಸಾಗಿ ಬಾಳೆಲ್ಲ ತಬ್ಬಿರುವೆ |ಪ| ಇನ್ನು ಏಕೆ ಇಲ್ಲ ಮಾತು ಒಲವು ಕಾಣದೆ ಹೃದಯ ಒಡೆದು ತರಲೆ ಹೇಳೆ ಕೋಮಲೆ || |ಅ.ಪ| ಕನಸು ನೀನು ಕವನ ನೀನು ಅದನೆ ಬರೆವೆ ನೀನು ನಿನ್ನ ಹೊರತು ಯಾವ ಮಾತು ಕಲಿತಿಲ್ಲ...
ಜೀವದಲುಸಿರು ಇರುವಾಗ ನೋಡು ಕರುನಾಡು ನಾಲಿಗೆ ನುಡಿಯುತಿರುವಾಗ ಕನ್ನಡವ ಹಾಡು /ಪ// ಕನ್ನಡವ ಹಾಡು ಸಿರಿಗನ್ನಡವ ನೋಡು ಚೆಲುಗನ್ನಡ ಬೀಡು ಅದರಿಂದಲೆ ಈ ಹಾಡು /ಅ.ಪ./ ಹುಟ್ಟಿದ ಕೋಗಿಲೆ ಹಾಡುವುದು ಕನ್ನಡ ಸ್ವರದಲ್ಲಿ ಗಿರಿನವಿಲು ಗರಿ ಬಿಚ್ಚುವುದು ...








