ಎಲ್ಲಿ ಮಾಯವಾದ

ಹದಿನೈದು ದಿನದಿಂದ ಕೊರಗಿ ಕೊರಗಿ ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ ಎಲ್ಲಿ ಮಂಗಮಾಯವಾದ? ತಾರೆಗಳಿಗೆ ದಿಗಿಲು ಪಾಪ ಹೋಗಿ ಹುಡುಕೋಣ ಅಂದರೆ ಅಮವಾಸ್ಯೆ ಕತ್ತಲು. *****

ದಾರಿ ಬಿಡಿ

ಚಂದ್ರಪ್ನೋರೇ ಚಂದ್ರಪ್ನೋರೇ ದಾರಿ ಬಿಡಿ. ಇಂದ್ರಪ್ನೋರು ಹೇಳಿದಾರೆ ಭೂಮಿ ದೇವಿಗೆ ಸ್ನಾನ ಮಾಡ್ಸೋಕೆ ಸ್ನಾನ ಮುಗಿಯೋವರೆಗೂ ಮೋಡದ ಪರದೆ ಸರಿಸಿ ಇಲ್ಲಿ ಹಣಕಿ ನೋಡದೆ ಬೇರೆ ಎಲ್ಲಿಗಾದರೂ ಸ್ವಲ್ಪ ಗಾಡಿ ಬಿಡಿ. *****

ಪ್ರತ್ಯಕ್ಷ ದೇವರು

ಮುಸ್ಲಿಂರಿಗೆ ಹಿಂದೂಗಳಿಬ್ಬರಿಗೂ ಪ್ರತ್ಯಕ್ಷ ದೇವರೆಂಬುವವನೊಬ್ಬನೆ ಅವನೇ ನಮ್ಮ ಜತೆಗಿರುವ ಚಾಂದ್ ಯಾನೆ ಚಂದಿರ ಮೊಹರಂಯಿರಲಿ ಯುಗಾದಿಯಿರಲಿ ಅವನ ಬೆಳ್ಳಿಯ ಮುಳ್ನಗುವಿನ ದರ್ಶನಕ್ಕಾಗಿ ಎಲ್ಲೆಡೆ ಕಾತರ ಮತ್ತೇಕೆ ದೇವರು ಧರ್ಮದ ಹೆಸರಿನಲ್ಲಿ ಬಾಂಬು ದೊಂಬಿ ದಾಂದಲೆ...

ಚಂದ್ರ ಆಗೋದು ಸಾಧ್ಯವಿಲ್ಲ

ನೂರು ಅಶ್ವಮೇಧ ಯಜ್ಞ ಮಾಡಿದರೆ ಯಾರು ಬೇಕಾದರೂ ಆಗಬಹುದು ಇಂದ್ರ ಹೌದೊ ಅಲ್ಲವೊ? ಆದರೆ ಸಾವಿರ ಯಜ್ಞ ಮಾಡಿದರೂ ಯಾರೂ ಚಂದ್ರ ಆಗೋದು ಸಾಧ್ಯವಿಲ್ಲ ಗೊತ್ತು ತಾನೇ? ಸೂರ್ಯ ಅವನೊಬ್ಬನೇ ಇರಬಹುದು ಆದರೆ ಚಂದ್ರ...

ಚಂದ್ರ ನೀನೊಬ್ಬನೆ

ಉರಿಯಿಲ್ಲ ಬಿಸಿಯಿಲ್ಲ ಉರಿಬಿಸಿಲ ಬೇಗೆ ಬವಣೆಗಳಿಲ್ಲ ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ ಅಸ್ತಕ್ಕೆ ರಕ್ತದೋಕುಳಿಯಿಲ್ಲ ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ ಠಳಾಯಿಸಲೆಂಬ ಠೇಂಕಾರದವನಲ್ಲ. ಏನಾದರೂ ಹೋದರು ಲೆಖ್ಖಿಸಿದೆ ಬೆಳಗು ಬೈಗಿನ ಕಾಲಚಕ್ರದ ನಿಷ್ಠುರಕ್ಕೆ ನಿಷ್ಠನಾಗಿ...
cheap jordans|wholesale air max|wholesale jordans|wholesale jewelry|wholesale jerseys