
ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯ...
ನೆತ್ತಿಗೇರಿದ ಕಣ್ಣ ಕುರುಡು ದಬ್ಬಾಳಿಕೆಯೆ! ಪೊಳ್ಳು ಬಿಂಕದ ಮೂಗ ಮೇಲೆಮಾಡಿ, ಹಿಂಬರಿಕೆಯಡಿಯಲ್ಲಿ ಸಿಕ್ಕು ತೊತ್ತಳಿಗೊಂಡು ಸಾವವರ ನರಳಿಕೆಯ ಕಿವುಡಗೇಳಿ, ಇಲ್ಲಿಯೂ ಅಲ್ಲಿಯ ಕೊನೆಗಾಣದಾಸೆಗಳ ಅಂತರ ಪಿಶಾಚಿಯೇ! ತಣಿಸಲೆಳಸಿ ರಕ್ಷಕನು ಎಂದು ತಿಳಕೊಂಡ...
ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ? ಕೂಡಿಹವು ಚಿಂತೆ ಚಿಂತನಗಳಿಲ್ಲಿ ಎಡಗೈಯ ಭಾರವನು...
ತಂತಾನೆ ತಣಿವಿನಲ್ಲಿದ್ದ ತಲ್ಲೀನತೆಯು ನಿದ್ದೆ ತಿಳಿದೆದ್ದಾಗ ಎನಿತೆನಿತು ಶಾಂತಿ! ಬಾಯಿಲ್ಲದನುಭವದ ನೆನವೆ ನನೆಕೊನೆಹೋಗಿ ಕನಸೇ ನನಸಾಗಿರಲದೆಂಥ ನವ ಕಾಂತಿ! ಆಟವೇ ಹಿಗ್ಗು? ಒಡನಾಟವೇ ಹಿರಿ ಹಿಗ್ಗು ನೋಟದ ವಿಲಾಸವೇ ಗುಡಿಕಟ್ಟಿದಂತಿದೆ. ಒಂದು ಹಿಗ್...
ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ ಚಿತ್ರ...














