
ಬಿಡಬೇಡ ಬಾಲಿ ಬಿಡಬೇಡ ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ|| ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ ನನಕೂಟ ಸುಸ್ತಿಲ್ಲ ಬಾಬಾರ ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧|| ಕಲಸೋರು ಕೌಹಕ್ಕಿ ಕಲಿಯೋರು ಕೂಹಕ್ಕಿ...
ವಿಲಯ ದಿಂದ ಮಲಯ ಭಾನು ಇಗೋ ಇಲ್ಲಿ ಮೂಡಲಿ ಪ್ರಲಯ ಮೇಘ ಇಂಗಿ ತಂಗಿ ಹೂವು ಹಣ್ಣು ಸುರಿಯಲಿ ||೧|| ಎಂಥ ಗಾಳಿ ಕುತ್ತು ಕೇಳಿ ಗರ್ರ ಗರ್ರ ತಿರುಗಿತು ಮನೆಯ ಗುಡಿಯ ಹುಡಿಯ ಮಾಡಿ ಚಿಂದಿ ಚೂರು ಮಾಡಿತು ||೨|| ಬರಲಿ ಶಾಂತ ಅವಲ ವಿಮಲ ರಾಜ ಹಂಸ ಜಲವನಂ ಮ...
ರೆಡಿ ರೆಡಿ ರೆಡಿ ರೆಡಿ ಎವರೆಡಿಯೊ ತಡಿ ತಡಿ ತಡಿಯಂದ್ರ ನೀ ಕಡಿಯೊ ||ಪಲ್ಲ|| ಯಾಮಿನಿಟು ಸರಸಗಟು ಗಂಟುಮೂಟೆಯ ಕಟ್ಟು ಹೊಂಡಂದ ಗಳಿಗ್ಯಾಗ ನಾರಡಿಯೊ ಯಸ್ಸಂದ್ರ ಇಲ್ಲಂಬೊ ಉಸ್ಸಂದ್ರ ನೋವಂಬೊ ಯಸ್ಸೀನ ಕಿಸ್ಸೀಗಿ ನಾ ಕಡಿಯೊ ||೧|| ಟಿಂಟಾಂಗು ಡಿಂಡಾಂಗ...
ಸಗ್ಗ ಲೋಕಕೆ ಹಗ್ಗ ಹಚ್ಚುತ ಜಗ್ಗು ಹಿಗ್ಗಿನ ಒಡೆಯನೆ ಸಾಕು ನರಕಾ ಪಾಪ ಚರಕಾ ಎತ್ತು ಎತ್ತರ ಇನಿಯನೆ ||೧|| ನೀಲ ಮುಗಿಲಿನ ಕಾಲ ಗಗನದಿ ಕಾಲವಾದನೆ ಕವಿಗುರು ಎಲ್ಲಿ ಕಿರಣಾ ಅರುಣ ಸ್ಫುರಣಾ ಕಾಣೆಯಾದನೆ ರವಿಗುರು ||೨|| ಸಾಕು ಶೀತಲ ಭೀತಿ ಬೂರಲ ಗಾಳಿ...
ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ ಬಂಗಾರ ಕಳಸಾ ನಿನಮುಡಿಗೆ ||೧|| ನೀ ಕಲ್ಲು ಆದರ ಕಲ್ಲೆಲ್ಲ ಕೈವಲ್...
ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ ಕಂಠವ ಮಳೆಯು ಗುಳುಗುಳು ನಗಿಸಲಿ ||೨|| ಬಿಲ್ವ ಬಳುವಲ ಮಲೆಯು ಬೆಳವಳ ಹ...
ಊದ್ಸೊರು ಬಂದಾರ ಬಾರ್‍ಸೋರು ಬಂದಾರ ಬೆಂಗ್ಳೂರ ಹುಡಿಗಿ ಬರಲಿಲ್ಲೋ ಹುಬ್ಬಳ್ಳಿ ಹುಡುಗಾ ಕಂಚೀನ ಕಡಗಾ ತಲವಾರ ಬೆಡಗಾ ಸಜ್ಜಾದೋ ||೧|| ಸೋಗ್ಲಾಡಿ ಮೂಲಂಗಿ ಹುಳಕ್ಲಾಡಿ ಹುಚಗಿಂಡಿ ಹಿಂಗ್ಯಾಕ ಮಾಡ್ತಾಳ ಸುಸ್ತಸುಸ್ತಾ ದೀಡ್ ಪೈಯಿ ಧೀಮಾಕಿ ಥೈಯ್‍ಥೈಯಿ ...
ನೀನೆ ತುಪ್ಪ ನಾನೆ ದೀಪ ದೀಪ ಗೊಳಿಪೆ ಅಂಗಳಾ ||ಪಲ್ಲ|| ಬ್ರಹ್ಮ ತತ್ವ ಭೂಮಿ ಯುಕ್ತ ಮಧ್ಯ ಸುಮಮ ಸಂಪದಂ ಸಟೆಯ ಲೋಕ ಅವುಟು ಶೋಕ ಬಿಟ್ಟ ಬೀಕು ಬೆಂತರಂ ||೧|| ಇತ್ತ ಯಾತ್ರಿ ಸುತ್ತ ಧಾತ್ರಿ ರಕ್ತ ರಾತ್ರಿ ನರ್ತನಂ ಅತ್ತ ಅಮಮ ಶಾಂತಿ ಘಮಮ ಅಮರ ಸುಮಮ ...
ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ|| ಮಜಕಟ ಕಟಕಟ ಕಿವಿತುಂಬ ವಟವಟ ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡ...
ಕರಿಯ ಕಾಮಿ ಟಾಮಿ ಬೆಕ್ಕು ಹಾಲು ಕುಡಿದು ಓಡಿತು ಪರಚಿ ಹೋದ ಚಿರತೆ ನಂಜು ಕಣ್ಣು ಮಂಜು ಮಾಡಿತು ||೧|| ಹಗಲಿನೆದೆಯ ರಾತ್ರಿ ಹುಣ್ಣು ಹೆಚ್ಚಿ ಕೊಚ್ಚಿ ಹಾಕಿದೆ ಸಾವು ಸಂತೆ ಹಾವು ಚಿಂತೆ ಚಿಂದಿ ಚೂರು ಮಾಡಿದ ||೨|| ಸಾಕು ಶಿವನ ಹೋತು ಹರನೆ ಹಗೆಯ ದೆ...














