Home / Panchatantra stories in Kannada

Browsing Tag: Panchatantra stories in Kannada

ಹಿಂದೆ, ಹಂಸ, ಗಿಣಿ, ಕೊಕ್ಕರೆ, ಕೋಗಿಲೆ, ಗೂಗೆ, ನವಿಲು, ಪಾರಿವಾಳ, ಮೊದಲಾದ ಹಕ್ಕಿಗಳೆಲ್ಲವೂ ಒಂದು ಕಡೆ ಸಭೆ ಸೇರಿ ಯೋಚಿಸಿದುವು:- “ನಮಗೆ ಗರುಡನು ಅರಸನಾಗಿರುವನು. ಆತನೋ ವಿಷ್ಣುವಿಗೆ ಪರಮ ಭಕ್ತನು. ನಮ್ಮನ್ನು ಕುರಿತು ಅವನು ಯೋಚಿಸುವುದ...

ಒಂದಾನೊಂದು ಕೊಳದ ತೀರದಲ್ಲಿ ಒಂದು ಭಾರಿಯ ಸೀಗೆಯಮೆಳೆಯಿತ್ತು. ಅದರಲ್ಲಿ ಜೇನುಗಳು ಒ೦ದು ಗೂಡು ಕಟ್ಟಿ ಕೊಂಡು ಸುಖವಾಗಿದ್ದುವು. ಆಗಾಗ ಗೂಡಿನಿಂದ ಜೇನುತುಪ್ಪವು ಸೋರುವುದು. ಒಂದು ಇಲಿಯು ಬಂದು ಅದನ್ನು ನೆಕ್ಕಿಕೊಂಡು ಹೋಗುವುದು. ಇಲಿಗೆ ಜೇನುತುಪ್...

ಪುರಾತನ ಕಾಲದಲ್ಲಿ ಹೇಹಯರು, ಭಾರ್ಗವರು ಎಂದು ಎರಡು ಗುಂಪಿನವರು ಇದ್ದರು. ಹೇಹಯರು ಕ್ಷತ್ರಿಯರು, ಅರಸುಗಳು. ಭಾರ್ಗವರು ಬ್ರಾಹ್ಮಣರು, ತಪಸ್ವಿಗಳು. ಹೇಹಯರಿಗೆ ತಮಗೆ ಬರಬೇಕಾದುದನ್ನೆಲ್ಲಾ ಭಾರ್ಗವರು ತೆಗೆದುಕೊಂಡರು ಎ೦ದು ಅವರಮೇಲೆ ಕೋಪ. ತಮಗೆ ದಾ...

ಹೊಸಗನ್ನಡ ಪ್ರಂಚತಂತ್ರದಲ್ಲಿ “ವೈರ ಸಾಧಿಸುವುದು” ಎಂಬ ಮೂರನೆಯ ತಂತ್ರವು. ಅದರ ಮೊದಲನೆಯ ಶ್ಲೋಕವಿದು:– ನಂಬಲು ಬಾರದು ಪೂರ್ವ ವಿರೋಧಿಯ ॥ ಗೆಳೆಗೊಂಡಿದ್ದರು ಹಿಂದಿನ ಹಗೆಯ ॥ ನೋಡೈ ಗೂಗೆಗಳಿದ್ದಾ ಗುಹೆಯ ॥ ಸುಟ್ಟುವು ಕಾಗೆಗ...

ಒಂದಾನೊಂದು ಊರಿನಲ್ಲಿ ಭದ್ರಸೇನನೆಂಬ ರಾಜನಿದ್ದನು. ಅವನಿಗೆ ರತ್ನವತಿ ಎಂಬ ಲಕ್ಷಣವತಿಯಾದ ಮಗಳಿದ್ದಳು. ಅವಳಿಗೆ ಒಬ್ಬ ರಾಕ್ಷಸನು ಹಿಡಿದಿದ್ದನು. ಆದರೆ ಅವಳು ರಕ್ಷಾ ಯಂತ್ರವನ್ನು ಕಟ್ಟಿಕೊಂಡಿದ್ದಳು. ಅದರಿಂದ ಅವಳನ್ನು ಹೊತ್ತು ಕೊಂಡು ಹೋಗಲು ಆಗಲ...

ಒ೦ದೂರಿನಲ್ಲಿ ಒಬ್ಬ ಚಂದ್ರನೆಂಬ ಅರಸನಿದ್ದನು. ಅವನ ಮಕ್ಕಳಿಗೆ ಕಪಿಗಳೊಡನೆ ಆಟವಾಡುವುದು ಎಂದರೆ ಬಹಳ ಆಶೆ. ಅದರಿಂದ ಆ ರಾಜಪುತ್ರರು ಆ ಕಪಿಗಳಿಗೆ ಬೇಕಾದ ತಿಂಡಿಗಳನ್ನು ಕೊಡುತ್ತಿದ್ದರು. ಆ ಅರಮನೆಯಲ್ಲಿಯೇ ಎಳೆಯ ಮಕ್ಕಳ ಗಾಡಿಗೆ ಕಟ್ಟುವುದಕ್ಕೆಂದು...

ಒಂದೂರಿನಲ್ಲಿ ಒಬ್ಬ ಬಡವನು ಇದ್ದನು. ಅವನು ದಿನವೂ ತಿರುಪಕ್ಕೆ ಹೋಗಿ ಹಿಟ್ಟನ್ನು ತರುವನು. ತನ್ನ ಹೊಟ್ಟೆಗಾಗಿ ಉಳಿದುದನ್ನು ಒಂದು ಮಡಿಕೆಯಲ್ಲಿ ಹಾಕಿ, ತನ್ನ ಮಲಗುವ  ಕಡೆ ಅದನ್ನು ಒ೦ದು ಗೂಟಕ್ಕೆ ನೇತು ಹಾಕಿದ್ದನು. ಅದನ್ನು ಆಗಾಗ ನೋಡುತ್ತಿದ್ದರ...

ಒಂದೂರಿನಲ್ಲಿ ಮಂಥರನೆಂಬ ನೇಗೆಯವನಿದ್ದನು. ಒ೦ದು ದಿನ ಅವನ ಮಗ್ಗದ ಮರಮುಟ್ಟುಗಳೆಲ್ಲಾ ಮುರಿದು ಹೋಯಿತು. ಅದರಿಂದ ಮರವನ್ನು ತರಬೇಕೆಂದು ಒಂದು ಕೊಡಲಿ ತೆಗೆದುಕೊಂಡು ಕಾಡಿಗೆ ಹೊರಟನು. ಹಾಗೆಯೇ ತಿರುಗುತ್ತಾ ಸಮುದ್ರ ತೀರಕ್ಕೆ ಬಂದು, ಅಲ್ಲೊ೦ದು ಮರವ...

ಒ೦ದೂರಿನಲ್ಲಿ ಒಂದು ಕತ್ತೆಯಿತ್ತು. ಅದು ಹಗಲುಹೊತ್ತು ಅಗಸನ ಮನೆಯಲ್ಲಿ ಭಾರಗಳನ್ನು ಹೊರುವುದು : ರಾತ್ರಿಯಹೊತ್ತು ಮನ ಬಂದಂತೆ ಅಲೆಯುವುದು: ಮತ್ತೆ ಬೆಳಗಾಗುತ್ತಲೂ ಅಗಸನ ಮನೆಗೇ ಬಂದುಬಿಡುವುದು. ಹೀಗಿರಲು, ರಾತ್ರಿಯ ಹೊತ್ತು ಸ್ವೇಚ್ಛೆಯಾಗಿ ತಿರು...

ಒಂದಾನೊಂದು ಕೊಳದಲ್ಲಿ ಶತಬುದ್ಧಿ ಸಹಸ್ರಬುದ್ಧಿ,ಎಂಬ ಎರಡು ಮೀನುಗಳು ಇದ್ದುವು. ಅವಕ್ಕೆ ಸ್ನೇಹಿತನಾಗಿ ಏಕಬುದ್ದಿ ಎಂಬ ಒ೦ದು ಕಪ್ಪೆಯು ಇತ್ತು. ಅವು ಮೂರೂ ಕೊಳದ ತೀರಕ್ಕೆ ಬಂದು ಬಂದು ಅಷ್ಟು ಹೊತ್ತು ಸುಖವಾಗಿ ಮಾತನಾಡುತ್ತ ಸ್ವಲ್ಪ ಹೊತ್ತು ಕುಳಿ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...