Home / ಬಾಲ ಚಿಲುಮೆ / ಕಥೆ / ವೈರವು ಬಂದ ಕಥೆ

ವೈರವು ಬಂದ ಕಥೆ

ಹಿಂದೆ, ಹಂಸ, ಗಿಣಿ, ಕೊಕ್ಕರೆ, ಕೋಗಿಲೆ, ಗೂಗೆ, ನವಿಲು, ಪಾರಿವಾಳ, ಮೊದಲಾದ ಹಕ್ಕಿಗಳೆಲ್ಲವೂ ಒಂದು ಕಡೆ ಸಭೆ ಸೇರಿ ಯೋಚಿಸಿದುವು:- “ನಮಗೆ ಗರುಡನು ಅರಸನಾಗಿರುವನು. ಆತನೋ ವಿಷ್ಣುವಿಗೆ ಪರಮ ಭಕ್ತನು. ನಮ್ಮನ್ನು ಕುರಿತು ಅವನು ಯೋಚಿಸುವುದೂ ಇಲ್ಲ. ಹೀಗೆ ಕೇವಲ ಹೆಸರಿಗೆ ಮಾತ್ರ ಸ್ವಾಮಿಯಾಗಿರುವ ಅರಸನಿಂದ ನಮಗೇನು ಪ್ರಯೋಜನ? ದಿನದಿನವೂ ನಮ್ಮನ್ನು ಮನುಷ್ಯರು ಸಾವಿರಾರಾಗಿ ಕೊಲ್ಲುತ್ತಿದ್ದರೂ ಆತನು ಏನಾದರೂ ಮಾಡಿದ್ದಾನೆಯೇ? ಕೇಳಿಲ್ಲವೆ?
ಓದು ಹೇಳದ ಗುರುವು| ಮಂತ್ರ ಬರದರ್ಚಕನು ॥ 
ರಕ್ಷೆ ನೀಡದ ನೃಪನು| ನಲವು ನುಡಿಯದ ಭಾರ್ಯೆ ॥ 
ಮುರಿದ ನಾವೆಯ ತೆರದೊಳಿವರ ಬಿಡಬೇಕು ॥೯॥ 
ಅದರಿಂದ ನಮ್ಮ ಕಷ್ಟ ಸುಖಗಳನ್ನು ನೋಡುವ ರಾಜನೊಬ್ಬನನ್ನು ಮಾಡಿಕೊಳ್ಳೋಣ” ಎಂದು ಚಿಂತಿಸಿ, ನೋಡುವುದಕ್ಕೆ ಚೆನ್ನಾಗಿದ್ದಾನೆಂದು ಗೂಗೆಯನ್ನು ಅರಸಾಗಿ ಆರಸಿಕೊಂಡರು. ಅರಸುತನದ ಅಭಿಷೇಕಕ್ಕಾಗಿ ಬೇಕುಬೇಕಾದ ಪದಾರ್ಥಗಳೆಲ್ಲವೂ ಸಿದ್ಧವಾದುವು. ಸಿಂಹಾಸನವನ್ನು ಹಾಕಿ, ಅದರ ಮೇಲೆ ಹುಲಿಯ ಚರ್ಮವನ್ನು ಹಾಸಿ, ಮಂತ್ರಗಳನ್ನೂ ಹಾಡುಗಳನ್ನೂ ಹೇಳುತ್ತಿರುವ ವೇಳೆಯಲ್ಲಿ ಒಂದು ಕಾಗೆಯು ಎಲ್ಲಿಂದಲೂ ಬಂತು “ಇದೇನು ಪಕ್ಷಿ ಕುಲವೆಲ್ಲ ಇಲ್ಲಿ ಸೇರಿದೆ. ಏನೋ ದೊಡ್ಡ ಉತ್ಸವ ನಡೆಯುತ್ತಿದೆ? ಎಂದುಕೊಂಡಿತು. ಪಕ್ಷಿಗಳೂ ಆ ಕಾಗೆಯನ್ನು ನೋಡಿ “ಪ್ರಾಣಿಗಳಲ್ಲಿ ನರಿಯು ಹೇಗೋ ಹಕ್ಕಿಗಳಲ್ಲಿ ಈ ಕಾಗೆಯು. ಹಾಗೆ ಬುದ್ಧಿವಂತನು. ಇದನ್ನೂ ಕೇಳಬೇಕಾಗಿತ್ತು”? ಎಂದು ಕೊಂಡುವು. ಆ ವೇಳೆಗೆ ಕಾಗೆಯು “ಇದೇನಿದು?” ಎಂದು ಕೇಳಿತು. ಅವು “ನಮಗೆ ರಾಜನಿಲ್ಲ ಅದರಿಂದ ಒಬ್ಬ ರಾಜನನ್ನು ಆರಿಸುತ್ತಿದ್ದೇವೆ. ಈ ಗೂಗೆಯನ್ನು ಅರಸನನ್ನು ಮಾಡಬೇಕೆಂದು ಇದ್ದೇವೆ. ನೀನೇನು ಹೇಳುವೆ?” ಎಂದುವು.  ಈ ಕಾಗೆಯು ನಕ್ಕು “ನವಿಲು, ಹಂಸ, ಮೊದಲಾದ ಬೇಕುಬೇಕಾದ ಹಕ್ಕಿಗಳೆಲ್ಲ ಇರುವಾಗ ಈ ಹಗಲು ಕುರುಡನಿಗೆ ಅರಸುತನವೆ? ಈ ಸೊಟ್ಟ ಮೂತಿಗೆ ಸಿಂಹಾಸನವೆ? ಚೆನ್ನಾಯಿತು. ನಾನು ಒಪ್ಪುವುದಿಲ್ಲ. ಕೇಳಿಲ್ಲವೆ?
ಅರಸು ಕೀಳನಾದರೆ ಧರ್ಮ ಮರೆತು ಹೋಹುದು ॥ 
ಧರಣಿ ಬೆಳೆಯ ಬೆಳೆಯದು| ನರರ ಗೋಳು ಬೆಳೆವುದು ॥೧೦॥ 
ಅಲ್ಲದೆ ಒಬ್ಬ ರಾಜನಿರುವಾಗ ಇನ್ನೊಬ್ಬ ರಾಜನನ್ನು ಮಾಡುವುದೆಂದರೇನು? ಆಕಾಶಕ್ಕೆ ಒಬ್ಬ ಸೂರ್ಯ ಎನ್ನುವ ಹಾಗೆ ಪ್ರಜೆಗಳಿಗೆ ಒಬ್ಬನೇ ರಾಜ. ಅಲ್ಲದೆ ಗರುಡನು ಸಾಮಾನ್ಯನೇ? ಕೇಳಿಲ್ಲವೆ?
ಮಹಿಮರಾ ಹೆಸರಿನಿಂದಲೆ ಸಿದ್ಧಿಯಹುದು| 
ಚಂದ್ರಮನ ಹೆಸರೆತ್ತಿ ಬದುಕಿದುವು ಮೊಲಗಳು ॥೧೧॥ 
ಆ ಹಕ್ಕಿಗಳು ಅದು ಹೇಗೆ ಎಂದು ಕೇಳಲು ಕಾಗೆಯು ಹೇಳಿತು:-
*****
ಚತುರ್ದಂತನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...