Home / Biligiri

Browsing Tag: Biligiri

ಬಳಿಯ ಗೃಹದಿ ದಿವ್ಯಗಾನ ಸೂಸಿ, ಮಿಡಿದು ನಾಡಿಯ- ಗೈದಿತೆಂಥ ಮೋಡಿಯ! ॥ ಪಲ್ಲವಿ ॥ ವಾದದ ಬಿರುಗಾಳಿಗೆ ಮನ ಸಿಲುಕಿ ಪಟದೊಲಾಗಿರೆ “ಯಾವುದು ಸರಿ” ಎಂಬ ತೊಡಕಿನೊಳಗೆ ಮನವು ಸಿಲುಕಿರೆ ಕದಡಿದ ಜಲ ತಿಳಿಯುವವೊಲು ಕತಕ ಬೀಜ ಬೀಳಲು ಮನದ ವಿವಿಧ ಗೊಂದಲಿಂದ ...

ಪ್ರಕೃತಿಯಾ ಮಡಿಲಿನಲಿ ಕಡಲಿನೀ ತಡಿಯಲ್ಲಿ ಎಲ್ಲ ಇದೆ! ಮನಕಿಂದು ಶಾಂತಿಯೊಂದಿಲ್ಲ ॥ ಪಲ್ಲವಿ ॥ ತುಂಬು ಚಂದಿರನು ಬಹನೆನುತ ಸಾರಿಸಿದಂತೆ ಗಗನದಂಗಣವಿಂದು ಅತಿಶುಭ್ರ ನೀಲ! ಮುಗಿಲುಕಡಲುಗಳೊಳಗೆ ಬಿಂಬ ಪ್ರತಿಬಿಂಬಗಳು ಆವುದೋ! ಒಡೆಯಲಿಕಭೇದ್ಯವೀ ಜಾಲ! ...

ಹೊಗೆಯಸೊಪ್ಪಿನ ಮೇಲೆ ಪದ್ಯವ ಬರೆವ ನನ್ನನು ಹಳಿಯದೆ ಸಾವಧಾನದೊಳದರ ಮಹಿಮೆಯ ಕೇಳಿರಯ್ಯಾ ಮುಳಿಯದೆ! ಜಗದೊಳೆಷ್ಟೋ ಸೊಪ್ಪು ಸದೆಗಳು ಬೆಳೆದು ಮಡಿಯುತಲಿವೆ ನಿಜ ಪೇಳಿರೈ ನಿಮಗಾವುದೀವುದು ಹೊಗೆಯಸೊಪ್ಪಿನ ಈ ಮಜ! ಹಳಿವರೆಲ್ಲರ ತೃಪ್ತಿಗೋಸುಗ ಇದರ ಜನನವನ...

ಕಾರ್ಮೋಡದ ಭಾಂಡದೊಳಿಂ ಬರೆ ಮಿಂಚಿನ ಬುಗ್ಗೆ ತಿರೆ ಹುಬ್ಬನು ಏರಿಪೊಲಿದೆ ಬಾನಂಚಿದು ಬಗ್ಗೆ! ಸೌಂದರ್ಯದ ನಕ್ಷೆಯನೇ ರಚಿಸುವವೊಲು ಮಿಂಚು ಗೆರೆಗೆರೆಯಾಗುದ್ಭವಿಸಿದೆ ಬೆಳಗಲು ನಭದಂಚು! ಮೇಘಕಲಾವಿದನೇನನೊ ಯೋಚಿಸುತಲಿ ತನ್ನ ಕುಂಚವನಾಡಿಪನೆನ್ನುತ ಭ್ರಮ...

ಚೆಲುವಿಗಿಲ್ಲವು ಬಡವ-ಬಲ್ಲಿದ- ರೆಂಬ ಭೇದದ ಭಾವವು!- ನುಡಿಯಿದನು ಪರಿಕಿಸಲು ಈ ದಿನ ಕಂಡ ಮಗುವೇ ಸಾಕ್ಷ್ಯವು! ನಡೆದರೂ ಸಹ ತೇಲುವಂತಿಹ ನನೆಗೆ ಮಿಂಚನು ಪೂಸುತ ಮುಗ್ಧತೆಯೊಳದನದ್ದಿ ತೆಗೆದೊಲು ಹಸುಳೆಯಿದೆ ನಗೆ ಸೂಸುತ! “ಹೂವಿದಕೆ ಮತ್ತಾವ ದುಂಬಿಗ- ...

“ವಾರಿಧಿಯ ತೆರೆಗಳನು ತಬ್ಬಿ ಚುಂಬಿಸಿದ ರವಿ. ಇರುಳು ಬರೆ ಪೆರೆಯ ದೌತ್ಯದಿ ತನ್ನ ಸಂದೇಶ- ವರುಹಿದನು ಸಂತಸದೊಳುಬ್ಬೆ ಸಾಗರದೆದೆಯು. ಮಾರನೆಯ ದಿನ ಸೂರ್ಯ ಪ್ರಿಯೆಗೆ ಹೊಂಗಿರಣಗಳ ಸೀರೆಯುಡಿಸುತ ನಲಿದ. ತೆರೆಗೊಂದು ರವಿಯಾಗಿ ನೀರ ಕೇಳಿಯನಾಡಿ ...

ತೆಂಗುಗರಿಗಳ ನಡುವೆ ಚಂದ್ರಮನು ನಗುತಿರಲು ಸೊದೆಗದಿರ ಹೀರಿ ಗರಿ ತೂರಾಡುತಿರಲು, ಇಳೆಯ ಪೆರೆಯೊಲು ಚೆನ್ನೆ ಬಳಿಯೊಳೇ ಒರಗಿರಲು, ಪ್ರಶ್ನೆಯಿದ ಕೇಳಿದೆನು ನಗುವುಕ್ಕುತಿರಲು: “ನೋಡಿದೋ ಒಲವರಸಿ! ಗರಿ ಕಿರಣಗಳ ಕಣ್ಣ- ಮುಚ್ಚಾಲೆಯಾಟವಿದು ಸೊಗಸು...

ಆರಿದಾರಿದು ಕರಿಯ ಅಂಚಿನ ಬಿಳಿಯ ಸೀರೆಯ ಕನ್ನೆಯು ತುಂಬು ಜವ್ವನವನ್ನೆ ಬಿಂಬಿಪ ನುಣುಪು ಕೆನ್ನೆಯ ಚೆನ್ನೆಯು? ಕರಿಯ ಮೋಡದ ಮೇಲೆ ಥಟ್ಟನೆ ಸುಳಿದು ಮೆರೆಯುವ ಮಿಂಚೊಲು ಕಾಡಿಗೆಯ ಕಣ್‌ತುದಿಯೊಳಹಹಾ! ಕಣ್ಣಮಿಂಚಿನ ಗೊಂಚಲು! ಕಂಗಳೆಸೆಯುವ ಮಿಂಚಕುಡಿಗಳ-...

“ಕಾಗೆಯಂತೆಯೆ ಬಣ್ಣ ಆ ನರ ಪ್ರಾಣಿಗಹ!” ಎನ್ನುವರು ಕರಿಯರನು ಜನರು ಕಂಡು “ಆಹ! ಆಕೆಯ ಕೇಶ ಕಾಗೆಯೊಲೆ ಕಪ್ಪೆ”ಂದು ಬಣ್ಣಿಸರು! ಜನರ ಮತಿಯೆಷ್ಟು ಮೊಂಡು! ಅಹುದು! ದಿಟ! ನೀನೇನೊ ಕೊಂಚ ಕಪ್ಪಿರಬಹುದು! ‘ಅತಿಕಪ್ಪು’ ಎಂಬ ...

ತಿರೆಯೊಳೆಲ್ಲೆಡೆ ಕರಿಯ ಮಸಿಯನು ನಿಶೆಯ ಭೂತವು ಎರಚಿತು ತರುಗಳೊಳು ತಮ ತೂಕಡಿಸುತಿರೆ ಮಿಂಚು ಗಗನವ ಪರಚಿತು. ಮಿಂಚ ಚಾವಟಿಯೇಟ ತಡೆಯದೆ ತಮದ ತೇಜಿಯು ಭರದಲಿ ಓಡಲೆದ್ದಿಹ ಧೂಳ ತೆರದಲಿ ಮೋಡ ಹಬ್ಬಿದೆ ನಭದಲಿ. ಬಾನ ಕಳಶವು ಮಿಂಚಿನೇಟಿಗೆ ಬಿರಿದು ಅಮೃತ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...