Home / ಜಾಗೃತಿ ಗೀತೆಗಳು

Browsing Tag: ಜಾಗೃತಿ ಗೀತೆಗಳು

ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ ...

ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು; ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು | ಬೆಳಕ ಕಾಣದೆ ಹೋದವರು ಬದುಕನ...

ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ ತಾಯಿಯ ಉಳಿಸೋಣ ನಲುಗಿದ ...

ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನೇಕ...

ಗೊತ್ತಿರುವುದು ನನಗೆ ಪಂಚೆಯ ಶ್ರೀರಾಮ ಹುಟ್ಟಿರುವುದು ಈಗ ಚೆಡ್ಡಿಯ ಶ್ರೀರಾಮ || ರಾಮ ಹುಟ್ಟಿದ ಅಂದು ತಾಯಿಯ ಗರ್ಭದಲಿ ಅವನೆ ಹುಟ್ಟಿದ ಇಂದು ಮಸೀದಿ ಮೂಲೆಯಲಿ ಅಂದು ರಾಮನ ಜನನ ಹಗಲು ಹೊತ್ತಿನಲ್ಲಿ ಇಂದು ಅವನ ಜನನ ತೂತು ಕತ್ತಲಲ್ಲಿ ಅಂದು ಬಿಲ್ಲು...

ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮನ...

ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ; ಸಿರಿ ಗಂಧದ ಬೀಡಲ್ಲಿ ! ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ; ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ ; ಚೆಲುವ ಕನ್ನಡ ನೆಲದಲ್ಲಿ ಗ...

ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ ಓಕುಳಿಯನು ಎರೆದ ಭ್ರಷ್ಟವಾದ ನೂರೊಂದು ಬಣ್ಣಕೆ ಹೊಸ ಭ...

ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್ಮ ಪುರುಷನಿಗ್ಯಾವುದು ಧರ್ಮ ಧರ್ಮವ ಹೇರಿದ ತಪ್ಪಿಗೆ ಕಾವಲು ಇವನ ಕರ್ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ ಮಾತ...

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಸಹವಾಸದಲಿ! ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ ಹೋದ ಮಾತುಗಳಿರ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...