Home / ಹೊಸಗನ್ನಡದ ಪಂಚತಂತ್ರ

Browsing Tag: ಹೊಸಗನ್ನಡದ ಪಂಚತಂತ್ರ

ಪವಿತ್ರವಾದ ಗಂಗಾನದಿಯ ತೀರದಲ್ಲಿ ಪುಣ್ಯವಾದ ಒಂದು ಆಶ್ರಮವುಂಟು. ಅಲ್ಲಿ ಜಪ, ವ್ರತ, ಉಪವಾಸ, ಯೋಗ ಮೊದಲಾದವುಗಳನ್ನು ಮಾಡುವ ತಪಸ್ವಿಗಳು ಉಂಟು. ಅವರ ಯಜಮಾನನಾಗಿ ಯಾಜ್ಞವಲ್ಕ್ಯ ಎಂಬ ಕುಲಪತಿಯುಂಟು. (ಕುಲಪತಿಯೆಂದರೆ ಸಾವಿರಾರು ಜನ ಶಿಷ್ಯರಿಗೆ ಅನ್...

ಒಂದಾನೊಂದು ನಗರದಲ್ಲಿ ದೇವಶಕ್ತಿಯೆಂಬ ಅರಸನಿದ್ದನು. ಅವನ ಮಗನಿಗೆ ಹೊಟ್ಟೆಯೊಳಗೆ ಒಂದು ಹಾವು ಸೇರಿಕೊಂಡು ಅದೇ ಕಾರಣವಾಗಿ ಸವೆಯುತ್ತ ಬಂದನು. ಏನೇನೋ ವೈದ್ಯಗಳನ್ನು ಮಾಡಿದರೂ ಅದು ಗುಣವಾಗಲಿಲ್ಲ.  ಅದರಿಂದ ಅವನಿಗೆ ಬೇಸರವಾಗಿ ದೇಶಾಂತರ ಹೋದನು. ವೇ...

ಒಂದಾನೊಂದು ಊರಿನಲ್ಲಿ ದ್ರೋಣನೆಂಬ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಅವನು  ಅವರಿವರು ಕೊಟ್ಟುದನ್ನು ತಂದು ತಿಂದು ಕಾಲಹರಣೆ ಮಾಡುವ ಬಿಡವನು. ಅವನಿಗೆ ಸೊಗಸಾದ ಬಟ್ಟೆ, ಒಡವೆ ಕೊನೆಗೆ ದಿನವೂ ತಾಂಬೂಲ ಕೂಡ ಇರಲಿಲ್ಲ. ಅವನನ್ನು ಕಂಡು ಯಾರೋ ಮರುಗಿ ...

ಒಬ್ಬನು ಬೇಡನಿದ್ದನು. ಅವನು ಹಕ್ಕಿಗಳನ್ನು ಹಿಡಿಯುವನು ಸಿಕ್ಕಿದ ಮೃಗಗಳನ್ನು ಕೊಲ್ಲುವನು. ಅವನನ್ನು ನೋಡಿದರೇ ಭಯವಾಗುವುದು.  ಅವನ ಕೈಯಲ್ಲಿ ಪಂಜರವೊಂದು, ದೊಣ್ಣೆಯೊಂದು ಯಾವಾಗಲೂ ಇರುವುದು. ಇಂಥಾ ನೀಚನು ಒಮ್ಮೆ ಅರಣ್ಯಕ್ಕೆ ಹೋದನು. ಅಲ್ಲಿ ಒಂದು...

ಒಬ್ಬಾನೊಬ್ಬನು ಚಿತ್ರರಥನೆಂಬ ರಾಜನು ಇದ್ದನು. ಆತನು ಒಂದು ಸರೋವರವನ್ನು ಕಟ್ಟಿಸಿ ಅಲ್ಲಿ ತಾವರೆಗಳನ್ನು ಬೆಳೆಸಿ ಅದಕ್ಕೆ ಪದ್ಮವನ ಎಂದು ಹೆಸರಿಟ್ಟನು. ಅಲ್ಲಿಗೆ ಯಾರಾದರೂ ಹೋಗಿ ಅದನ್ನು ಕೆಡಿಸಿಯಾರು ಎಂದು ಕಾವಲಿಟ್ಟನು. ಅಲ್ಲಿ ಚಿನ್ನದ ಹಂಸಗಳು ...

ಒಂದಾನೊಂದು ಊರಿನಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಆತನು ಬೇಸಾಯ ಮಾಡುವನು. ಆ ಬೇಸಾಯವು ಯಾವಾಗಲೂ ಫಲವೇ ಆಗುತ್ತಿರಲಿಲ್ಲ. ಒ೦ದು ದಿನ ಆ ಬ್ರಾಹ್ಮಣನು ಸಂಜೆಯ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಒಂದು ಮರದಡಿ ಆಗ ಕೊಂಚ ದೂರವಿದ್ದ ಹುತ್ತದಿಂದ ಹೊ...

ಒಂದಾನೊಂದು ಹುತ್ತದಲ್ಲಿ ಅತಿದರ್ಪನೆಂಬ ಒ೦ದು ಕರಿಯ ನಾಗರ ಹಾವು ಇತ್ತು. ಅದು ಬಲು ದೊಡ್ಡದು, ತೊಲೆಯತುಂಡೋ ಎನ್ನುವಷ್ಟು ದೊಡ್ಡದು. ಒ೦ದು ದಿನ ಅದು ತಾನು ಎಂದೂ ಬಂದು ಹೋಗುತ್ತಿದ್ದ ಮಾರ್ಗವನ್ನು ಬಿಟ್ಟು ಇನ್ನೊಂದು ಮಾರ್ಗದಿಂದ ಈಚೆ ಬಂತು. ಹಾಗೆ ...

ಒಂದಾನೊಂದು ಊರಿನಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಆತನು ಅಗ್ನಿ ಹೋತ್ರನನ್ನು ಇಟ್ಟುಕೊಂಡು ತನ್ನ ಪಾಡಿಗೆ ತಾನಿದ್ದನು. ಒಂದು ಸಲ ಆತನಿಗೆ ಯಜ್ಞ ಮಾಡಬೇಕು ಎನ್ನಿಸಿತು. ಅದಕ್ಕಾಗಿ ಒಂದು ಆಡು ತರಬೇಕು ಎಂದು ಬೇರೊಂದು ಗ್ರಾಮಕ್ಕೆ ಹೋಗಿ ಅಲ್ಲಿ ಒಬ್ಬ ...

ನಾನು ಹಿಂದೆ ಒಂದು ಮರದಲ್ಲಿ ವಾಸವಾಗಿದ್ದೆನು. ಅದೇ ಮರದಲ್ಲಿ ಕೆಳಗೆ ಒಂದು ಗುಬ್ಬಿಯು ಒಂದು ಪೊಟರೆಯಲ್ಲಿ ಇತ್ತು. ನಾವಿಬ್ಬರೂ ಆಗಾಗ ಅಷ್ಟು ಹೊತ್ತು ಸೇರುವೆವು: ದೇವರ್ಷಿ ಬ್ರಹ್ಮರ್ಷಿಗಳ ಪುರಾಣ ಕಥೆಗಳನ್ನೂ ನಾವು ಹೋಗಿ ಬಂದ ಕಡೆಯಲ್ಲಿ ಕ೦ಡ ವಿಚಿ...

ಒಂದಾನೊಂದು ಕಾಡಿನಲ್ಲಿ ಚತುರ್ದಂತನೆಂಬ ಮಹಾ ಗಜವಿತ್ತು. ಅದು ಒ೦ದು ಹಿಂಡಿಗೆ ಸಲಗವಾಗಿ ಸುಖವಾಗಿತ್ತು. ಆ ಆನೆಯ ಕಾಡಿನಲ್ಲಿ ಒಂದು ಸಲ ದೊಡ್ಡ ಅನಾವೃಷ್ಟಿಯು ಬಂದು, ಮಳೆಗಳು ಇಲ್ಲದೆ ಹೋದುವು. ಕೆರೆಗಳು, ಮಡುಗಳು, ಸರೋವರಗಳು ಒಣಗಿ ಹೋದುವು. ಆಗ ಆನ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...