ಯಾಕಾಧುನಿಕ ಜನಕಿಷ್ಟು ಕಷ್ಟವೋ ಶಿಷ್ಟ ಕೃಷಿಯೆನ್ನಲಿಕೆ?

ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿಜ್ಞಾನವಾಧ್ಯಾತ್ಮ ಬೆರೆಯುವುದು - ವಿಜ್ಞಾನೇಶ್ವರಾ ***** ಎಕ್ಕಸಕ್ಕ=ಸಿಕ್ಕಾಪಟ್ಟೆ

ಬರಿದು ಕೃಷಿ ಮಾತ್ಯಾಕೆ? ಬರಿದಾದ ನೆಲಜಲ ಕಾಣದೇ?

ಬೇಕಿಲ್ಲವೆಮ್ಮಾರೈಕೆ ಪೂರೈಕೆಯೆಮ್ಮನ್ನದಾ ಮರಕೆ ಬೇರೆಲ್ಲದಕು ಮೂಲ ಬಲವದುವೆ ಸಾಕದಕೆ ಬೇಕೆಲ್ಲ ಮರಕದರ ತರಗೆಲೆಯ ಹೊದಿಕೆ ಭಾರಿ ಕೃಷಿ ಎನಲು ಬೊಕ್ಕತಲೆ ಬಂದೀತು ಜೋಕೆ ಬಾಳ ಕೃಷಿಗೊಂದು ಪೇಟೆ ಶಾಲೆಯದ್ಯಾಕೆ? - ವಿಜ್ಞಾನೇಶ್ವರಾ *****

ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?

ಉತ್ತು, ಕಿತ್ತು ಬತ್ತಿಸಿದ ಮೇಲಾ ನೆಲ ಬರಿ ಮಣ್ಣೆಂದು ಗತ್ತಿನೊಳು ಗೊಬ್ಬರ ಕೊಟ್ಟು ತುತ್ತಿನ ಬಿತ್ತಿಟ್ಟೊಡದ ನೊತ್ತಿ ಬೆಳೆವಾ ನೂರೊಂದು ಕಳೆಗಳನು ನೋಡಾ ಗತ್ತಿನ ಕತ್ತ ನಿಳುಹಿದೊಡಲ್ಲಿ ಕಾಂಬುದು ತುತ್ತಿಗಪ್ಪುದು, ಸುಸ್ತಿಗಪ್ಪುದು ಆ ಕಳೆಯೊಳಗೆ...

ಅಂತೆ ಪರಿವರ್ತನೆ ಜಗದ ನಿಯಮವೆಂದೊಡೆಂತು?

ಆ ತಿಪ್ಪೆ ಗೊಬ್ಬರದ ಸತ್ಯ ತಾನಬ್ಬರದ ಮೂಟೆ ಮಿಶ್ರಣವಾಯ್ತು ಅನ್ನಾಹಾರದ ಸತ್ತ್ವವದಂತೆ ಮಾತ್ರೆ ಮದ್ದುಗಳಾಯ್ತು ಅನುಭವದ ಸತ್ತ್ವವದಂತೆ ಶಾಲೆಯೊಳಕ್ಷರವಾಯ್ತು ಆತ್ಮೀಯ ಜೀವದೇವ ಸಂಬಂಧವಾ ವಿಜ್ಞಾನ ವಶವಾಯ್ತು ಅಂತೆಲ್ಲರೊಳಿರುತಿದ್ದ ದೇಹ ಬುದ್ಧಿ ಬಲವುಬ್ಬರಿಸಿ ಹಣವಾಯ್ತು -...

ಆಧುನಿಕ ಕೃಷಿಯನಂತೆ ವೈಜ್ಞಾನಿಕವೆಂದೊಡೆಂತು?

ಆಧುನಿಕ ಕೃಷಿ ಮೂಲವಲ್ಲಿಹುದು ಹಣದಲ್ಲಿ ಅಧಿಕವಾ ಧನವಂತನೆಂದೆಣಿಪ ಮನದಲ್ಲಿ ಬದುಕಿನೊಳನ್ನ ಮೊದಲೆಂದರಿಯೆ ಪೇಳದೋದಿನಲ್ಲಿ ಉದ್ಯೋಗವೆಂದನ್ನ ಕೊಂಡುಂಬ ಸುಲಭ ಸೋಗಿನಲ್ಲಿ ವಿದ್ಯುತ್ ವಾಹನದನುಕೂಲದಪವ್ಯಯದಲ್ಲಿ - ವಿಜ್ಞಾನೇಶ್ವರಾ *****

ಉಡುಗಿದಾರೋಗ್ಯಕ್ಕೆ ಕೊಂಡ ಸಾವಯವದನ್ನ ಸಾಕೇ?

ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು ನಡು ಬಳುಕಿ ಪಡೆದರದು ಸಾವಯವ ಪಾಕ -...

ಎಂತುಳಿಸುವುದೋ? ರೈತಾತ್ಮ ಶಕ್ತಿಯನು

ಅಂತು ಪೇಳುವೊಡೆಲ್ಲ ಪೇಟೆಗೆ ಬಂದು ಕುಂತೋದಿದನುಭವಕೆ ಮನ್ನಣೆ ತಂದು ಒಂದುದ್ಯೋಗ ಭಿಕ್ಷೆಯ ಪಡೆದವರಿಂದು ಸಂಭ್ರಮಿಸುತಿಹುದನು ಕಂಡ ರೈತನಿನ್ನೆಂತು ಭಂಗ ಪಟ್ಟುಂಬನ್ನದೊಳು ಸುಖವ ಕಾಂಬುದೋ? - ವಿಜ್ಞಾನೇಶ್ವರಾ *****

ತಾಳವೆನುವಾ ತರುಲತೆಗಳನೊಂಟಿ ಮಾಡುವುದ್ಯಾಕೋ?

ತಲೆಮಾರಿನಂತರವ ತಾಳದೆಲೆ ತಾನು ತಾನೆನುತ ತಲೆಗೊಂದು ಸೂರೆಳೆವ ಮನುಜ ತಾ ಸಹಬಾಳ್ವೆ ತೊರೆದೊಡಂ ಕೇಡಿಲ್ಲವಾದೊಡೆಲ್ಲ ಜೊತೆಯಾಗಿರ್‍ದೊಡದು ತಮ್ಮ ಹಿತವೆನುವ ಸಸ್ಯಗಳನೀ ಪರಿ ಬೇರ್ಪಡಿಸು ತಲದನು ತಬ್ಬಲಿ ಮಾಡಿರಲೆಲ್ಲ ಕೃಷಿ ಕೆಟ್ಟಿಹುದು - ವಿಜ್ಞಾನೇಶ್ವರಾ *****

ಹೊರೆವ ಹೊಟ್ಟೆ ಮೆರೆವಂತೆ ತಿನ್ನಿಸುವ ಸಕ್ಕರೆಗೀಪರಿ ಕೃಷಿ ಬೇಕೇ?

ಬರವೆಂದೊಂದು ಬಾವಿಯ ಮಾಡಿ ಬೇಡ ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ ಬರವೆಂದೆನುತ ಬೋರನು ಮಾಡಿ ಮಳೆ ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ - ವಿಜ್ಞಾನೇಶ್ವರಾ *****

ಇಂತೆಲ್ಲ ಕುಂತುಣ್ಣಲೆಂತೀ ಯಂತ್ರ ಹಸಿವಿಂಗುವುದೋ?

ಎಂತು ನೋಡಿದೊಡಂ ಅಂದಿದ್ದೊಂದು ಹೊಟ್ಟೆ ಹಸಿವಡಗಿಸಲು ಬಂದಾ ರಸಗೊಬ್ಬರದವಾಂತರವು ಭೀಕರವಲಾ ಒಂದರಾ ಮೇಲೊಂದು ನೂರೊಂದು ಹಸಿವೆಗಳು ಸಾಲು ಸಾಲು ಬಂಧನದೊಳೊಂದೆಡೆಗೆ ಆಂ ಎನುವ ಸಾಕು ಪ್ರಾಣಿಗಳಳಲು ಯಂತ್ರ ತಂತ್ರ ಸಿಬ್ಬಂದಿಗಳಿನ್ನೊಂದೆಡೆಗೆ ಬೇಕು ಬೇಕೆನಲು -...
cheap jordans|wholesale air max|wholesale jordans|wholesale jewelry|wholesale jerseys