Home / ನಸುಕು

Browsing Tag: ನಸುಕು

೧ ಉಮ್ಮಳಿಸಿದೆ ಮಗು! ಕಾಯುವ ತಾಯಿಯ ಕೈಯ ನೀಡುವಿರಾ ನನ್ನಯ ರಯ್ಯ ಗೆಳೆಯರಿರಾ! ೨ ಇಮ್ಮಡಿ ಮುಮ್ಮಡಿ ನಾಲ್ಮಡಿ ನೂರ್ಮಡಿ ತಳಮಳಗೊಳುತಿಹುದು ಈ ಮಗು ಕಳವಳಗೊಳುತಿಹುದು! ೩ ನಿಮ್ಮಯ ನೆಮ್ಮದಿ-ಮಡಿಲಲಿ ಮಡಗಿಸಿ ಮಲಗಿಸಿಕೊಳ್ಳುವುದು ಗೆಳೆಯರೆ ತೂಲಗಿಸಿ ತ...

೧ ‘ಜಯ ಜಗದಂಬೆ ಭಯವಿಲ್ಲೆಂಬೆ ಹಂಬಲ ತುಂಬೆ ನಂಬಿದೆನಂಬೆ ಅನ್ಯರ ನಂಬೆ’ ಎಂದೆನ್ನುವ ಹಸುಳಾ ಬಾಲಾ! ಇಂದೇ ಕುಡಿ ತಾಯಿಯ ಹಾಲ! ೨ ತಾಯಿಯಾಗಿ ತಾ ಕಾಯಲಿ! ಮಗು ತನ್ನಾ! ಅಕ್ಕನಾಗಿ ಬಲು ಅಕ್ಕರಿಸಲಿ! ಚಿನ್ನಾ! ತಂಗಿಯಾಗಿ ನೆರೆ ತಂಗಿಸಲೈ ...

೧ ಗೆಳೆಯರ ಗೆಳೆಯಾ ಬೆಳಗುತ ಬಂದಾ ಹಿಗ್ಗಿನ ಬೆಳೆಯಾ ಸುಗ್ಗಿಯ ತಂದಾ ಇಳೆಯೊಳಗಿನ ಎಳೆ ಗೆಳೆಯರೆಲ್ಲರೂ ಕೊಯ್ಯ ಬನ್ನಿರಿ ಒಯ್ಯ ಬನ್ನಿರಿ! ೨ ಗುರುಹಿರಿಯರ ಆ ವರಪ್ರಸಾದವ ತಿರೆಯಲಿ ತೂರಲು ತ್ವರೆಯಲಿ ಬಂದಾ ಇಳೆಯೊಳಗಿನ ಎಳೆ ಗೆಳೆಯರೆಲ್ಲರೂ ಪಿಡಿಯಬನ್ನ...

೧ ನೆನೆಯಲಾಗಿ ನಿಮಿ- ಷಾರ್ಧದಲ್ಲಿ ಅನಿ- ಮಿಷರ ಮೀರಿ ನೆಗೆ- ಯುತ್ತ ಬಂದು ಈ ಜೀವನಕ್ಕೆ ಜೀ- ವನವನೆರೆದು ಸಂ- ತೈಸುವಂಥ ಏ- ಕಾಂತದೇಕ ಮಾ- ತ್ರಾಧಿಕಾರಿ ಪ್ರೇ- ಮಾವತಾರಿ ಮಮ ಪ್ರಾಣದಾನಿ ಸಂ- ಜೀವ ವರದ ಶ್ರೀ ರಾಮಚಂದ್ರನಿಗೆ ಓಂ ನಮೋ ನಮೋ! ೨ ತವಕದಿ...

೧ ಹೆಜ್ಜೆ ಹೆಜ್ಜೆಗೆ ರಾಮ ಗರ್ಜಿಸುವೆ ಶ್ರೀರಾಮ ಮಜ್ಜೀವನದ ಪ್ರೇಮ- ಕಜ್ಜಾಯವಿದು ರಾಮ ಗರ್ಜಿಸುವೆ ಶ್ರೀರಾಮ ! ** ಜಗವಾಗ ಹಗೆಯಾಗೆ ಇಗೊ ನಿನ್ನ ಗೆಳೆಯನೆಂ- ದುಗುವ ಆ ನಗೆಯೊಡನೆ ಹೊಳೆಯಲಾ ಮಗುವು ಹೊಳೆಯಲಾ ಮಗುವು ಆ ಮಗುವು ನೀನೆಂದು ರಾಮಚಂದಿರನೆಂ...

೧ ಬಂದನು ಅಗೊ ಹೃನ್- ಮಂದಿರದಲಿ ಇಗೊ ನಿಂದನು ನನ್ನಯ ರಾಮಾ ಇನ್ನು ಎಂದಿಗೂ ಜನುಮಕೆ ಕ್ಷೇಮಾ! ೨ ಮನವೇ ಗರ್ಜಿಸು ತನುವೇ ಗರ್ಜಿಸು ಸ್ನೇಹಸಿಂಧುವಿನ ನಾಮಾ! ನನ್ನಾ ಧರ್ಮಬಂಧುವಿನ ನಾಮಾ! ೩ ಎನಿತು ಮಧುರವೋ ಇನಿಯನ ನಾಮಾ| ರಾಮಚಂದಿರನ ನಾಮಾ ಘನ್ನಾ ಪ್...

೧ ಇದು ಹೇಗೆ ಬಂದಿತೈ ಈ ಹೊಸ ವಿಷಾದ- ಇದೆಯೆಂದು ತಿಳಿದಿರಲು ಗೆಳೆಯನ ಪ್ರಸಾದ? ೨ ಮಿಶ್ರಭಾವೋದ್ರೇಕತಾಪವೇಕೆ? ಅಶ್ರುಜಲಧಾರಾಪ್ರಪಾತವೇಕೆ? ೩ ತಿಳಿದೊ ತಿಳಿಯದೆಯೊ ಏನಾಯಿತೋ ರೇಯಾ! ಗೆಳೆಯ! ಗೆಳೆಯರ ಗೆಳೆಯ! ಬಿಡುವರೇ ಕೈಯಾ? ೪ ಜನ್ಮಾಂತರದ ಪುಣ್ಯ ತ...

೧ ಇಂದು ಬಾಗಿಲವರೆಗು ಇದಿಗೋ ಬಂದ ಆ ದೊರೆ ಒಳಗೆ ಬರಲಿ- ಲ್ಲೆಂದು ಹೃದಯವೆ ನಿನ್ನ ಮನದೊಳು ಹೆದರಿ ಬೆದರುವೆಯಾ? ೨ ಒಳಗೆ ಬಂದರೆ ಈಗ ತುಂಬುತ ತುಳುಕುತಿಹ ಕಣ್ಣೀರಿನಿಂದಲಿ ತೊಳೆಯುವನು ಇವ ತನ್ನ ಪಾದವ- ನೆಂದು ತೆರಳಿದನೋ! ೩ ಪ್ರೀತಿಬಾಧ್ಯನೆ ಪೀತಿ ನ...

(ಇನ್ನೊಂದು ಸಂವಾದ) ಲೋಕದೊಳಗೆಲ್ಲರೂ ಸೌಖ್ಯದಿಂದಿರುತಿಹರು ಮೂಕ ಜೀವವೆ ನಿನಗು ಸಕಲವೂ ಕುಶಲವೇ? ಏಕೆ ಸಖನೇ ಈ ತದೇಕಚಿತ್ತವು ಏಕೆ? ಏಕಾಕಿಯಾಗಿರುವೆಯಾ ? *** ಶೋಕ-ಯೋಗಕ್ಷೇಮ ಕೇಳುವವರಾರವರು ಏಕಾಂತದೊಳಗೆ ಇರುವವರೆ ಇಲ್ಲದ ಮೇಲೆ? ಏಕಾಕಿಯಾಗಿರುವೆಯ...

ಹೇಳು ಬೇಗ – ಕೇಳು ಈಗ ರಾಮನೇನು? – ಕಾಮಧೇನು! ** ಈತನಾರು? – ಪ್ರೀತಿಪೈರು! ಎಂತು ಕೀರ್ತಿ?- ಪ್ರೀತಿ-ಮೂರ್ತಿ; ರಾಸರಾಜ್ಯಚಕ್ರವರ್ತಿ!- ಏಕೆ ಈತ?-ಪ್ರೀತಿಯೇಕೆ? ** ಈತನೆಂಥ ಪ್ರೀತಿಕಾಂತ?- ಎನ್ನ ಚೆನ್ನ ಚಂದ್ರಕಾಂತ! ಓತುಸ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...