Home / ನಸುಕು

Browsing Tag: ನಸುಕು

`ಪತ್ರಂ ಪುಷ್ಪಂ ಫಲಂ (ಚ) ತೋಯಂ’ ಇತ್ತರೆ ಬರುವೆನು ಹತ್ತಿರವೇ ಎಂ- ದತ್ತೂ ಕರೆದೂ ಭಿಡೆಗಿಡೆಯಿಲ್ಲದೆ ನಯಭಯವಿಲ್ಲದೆ ಭಿಕ್ಷೆಯ ಬೇಡುವ ಭಿಕಾರಿ ಭೋ ಪ್ರಭು ಜಯತು ಜಗದ್ಗುರು! ಭಗವದ್ಗೀತಾ- ಕರ್ತೃವೆ! ನೇತೃವೆ! ಎಲ್ಲೆಯು ಇಲ್ಲದ ಎಲೆ ಎಲೆ ದೇವ...

೧ ಹೊತ್ತು ಮುಳುಗಲು ನಿತ್ಯ ನಿತ್ಯದಿ ಕತ್ತಲಾಯ್ತಿನ್ನೇನು ಗತಿಯೆಂ- ದತ್ತು ಸತ್ತರೆ ಸತ್ತು ಸುಣ್ಣಾಗುವದೆ ಮತ್ತೇನು? ಕತ್ತಲೆಯ ಹೊಟ್ಟೆಯೊಳು ಹುಟ್ಟುವ ಮುತ್ತಿನಂತಹ ಹಗಲಿನೊಳಗಿನ ಸತ್ಯತೆಯ ಗಂಧವನು ತಿಳಿಯದೆ ಅತ್ತರೇನಹುದು? ೨ ಒಂದು ಒಂದೇ ವಸ್ತುವದ...

೧ ಓಂ ನಮಃ ಶ್ರೀ ಪ್ರಣವ! ನಿನಗೆ ಪೃಥ್ವೀಪಿತಗೆ ನಿನ್ನ೦ತರಂಗದೊಳು ವಿಶ್ವಾಂತರಂಗಗಳು ಕಣ್ಣಿಗೊಪ್ಪುವ ಕೃಷ್ಣರೂಪವೇ ನನ್ನದೀ ಪ್ರೇಮಪ್ರಣಾಮ ನಿನಗೆ! ೨ ಕೂತು ಕಂಗೊಳಿಸುತಿಹೆ ಜಗದ ಜಗಲಿಯನೇರಿ ಪ್ರೀತಿಯನ್ನಾತಂಥ ಚೈತನ್ಯ- ದಾತೃವೇ! ಜ್ಯೋತಿಯೇ ಜೀವಿತಂಗ...

೧ ಇಳೆಯ ನೆಲದಲ್ಲಿ ಮುಗಿಲೆಂತ ಮುಗಿಲಲ್ಲಿ ಸುಳಿ- ದಾಡುತಿಹ ಗಾಳಿಯಲ್ಲಿ ನಲಿನಲಿವ ಕಡಲಲ್ಲಿ ನೀನಿದ್ದು ಹಿಗ್ಗುತ್ತ ಊದುತಿಹೆ ಕಾಳಿಯಲ್ಲಿ! ೨ ಹಿಂದಿದ್ದಿ! ಇಂದಿದ್ದು ಮುಂದೆಯೂ ಇದ್ದರೂ ನನಸೆ ನೀನೆನಗೆ ಕಾಣೆ! ಹಿಂದು ಮುಂದಿಂದುಗಳನಿನ್ನುಳಿದು ಎಂದೆ...

ಕೊಡುಗೈಯ ದೊರೆ ನಮ್ಮ ರಾಮಚಂದ್ರಾ! ಕಡೆವರೆಗು ಕೈಪಿಡಿವ ಪ್ರೇಮಸಾಂದ್ರಾ! ಎಷ್ಟೊಂದು ಜೀವಿಗಳಿಗಿತ್ತಿನೋ ಮೋದ! ಮತ್ತೊಂದು ಜೀವಲತೆಗಿಂದಾಸರಾದ! ಎಂಥ ಧೀರೋದಾತ್ತ ಸ್ನೇಹಶೀಲ! ಇಂಥವನಿಗೆಂದಿಗೂ ದೇವನನುಕೂಲ! ಇಂಗಡಲ ಚಂದಿರಗೆ ಇಂದೇಕೆ ಜೋಕೆ? ಮಂಗಲಾತ್ಮ...

ನನ್ನನರಸುತೊಬ್ಬ ಜಾಣಿಯೆದುರು ಬಂದಳು ತನ್ನದೊಂದು ಪ್ರೇಮಸಂಽದೇಶ ತಂದಳು! ದೊರೆಯ ದಯೆಯ ಕೈಯು ನನ್ನ ಕೈಯ ಬೆರಳಲಿ ಬೆರೆತ ಗುರುತ ಕಂಡು ಹೃದಯಕುಸುಮವರಳಲಿ! ಈ ಕುಸುಮವಿದರ್ಪಿತವಿದೆ ಯಾವ ದೇವಿಗೆ ಅಕೆಯೊಲುಮೆ ನನ್ನ ಬಾಳ ದಾರಿ-ದೀವಿಗೆ! *****...

ಜೀವದ ಗೆಳತಿಯರೆ ಗುಟ್ಟಿನ ಮಾತೊಂದ ಕೇಳುವೆ ಪಡಿನುಡಿ ಪೇಳುವಿರಾ? ||ಪಲ್ಲ|| ಜೀವಕಾಂತನು ಯಾವ ಏಕಾಂತದೊಳಗೆ ತಾ ಪವಡಿಪನೆಂಬುದನರುಹುವಿರಾ? ಎಂದು ಬಂದೀ ಕೈಯ ಪಿಡಿವನೆಂಬುದನಾರು ಬಲ್ಲಿರಿ ದಯವಿಟ್ಟು ಉಸಿರುವಿರಾ? ||೧|| ಪತಿದೇವರಾಯನ ಜೊತೆಗೆ ಬಾಳುವ...

ಪ್ರೀತಿಯೆ ಬಾರೇ ದೂತಿಯೆ ಬಾರೇ ‘ಪ್ರೀತಿಯ ದೂತಿ’ಯ ಜ್ಯೋತಿಯ ತಾರೆ ಬಾರೇ ಬಾರೇ ತೋರೇ ತೋರೇ ಜೀವದ ಗೆಳತಿಯ ಪ್ರೀತಿಯ ಧಾರೆ! ಈ ಹೃದಯದ ಆಲ್ಹಾದಿನಿಯೆಲ್ಲಿ? ಈ ಜೀವನ-ಸಂಜೀವಿನಿಯೆಲ್ಲಿ? ನನ್ನಾ ಗೆಳತಿಯ ಬಳಿಯಿಂದಲಿ ಬಹ ಗಾಳಿಯೆ ಬಾ ತಂಗ...

ಇಂದಿಗಿಪ್ಪತ್ತೇಳು ವರುಷಗಳ ಹಿಂದೆ ಬಂದಿತೀ ಜಗದೊಳಗೆ ಮಗುವು ತಾನೊಂದೆ ಬರುವಾಗ ಬಾಯಲ್ಲಿ ಬೆಳ್ಳಿಬೆಳಕು! ಇರುವಾಗ ಎಲ್ಲಿರುವದೇನೊ ಆ ಥಳಕು! ಮಗುವು ಹುಟ್ಟಲು ಮೂರು ಹೆಳ್ಳಿಗಳಿಗೆಲ್ಲಾ ನಗೆಯ ಸಕ್ಕರೆ ಚಿಸ್ಸಿ ಚೆಲ್ವರಿಯಿತಲ್ಲಾ! ಬೆಳಕು ಚಂದ್ರಗೆ ಮೂ...

೧ ಯಾವ ಹೂವ ಕರುಳ ಕಂಡರಮಮ ಮಧುವೆ ನಷ್ಟವು! ಜೀವಭೃಂಗ ಬಳಸಿ ಬಳಲಿ ಭ್ರಮಿಸುತಿದೆ ಭ್ರಮಿಷ್ಠವು! ೨ ಹೂವ ತರುವ ಜೀವ ಹುಲ್ಲ ಹೊರುವ ಒಳ್ಳೆ ಹೊತ್ತಿದು! ದೇವನೆಂಬ ಕಾವ ಪುರುಷ ಕೊಟ್ಟ ವಿಷದ ತುತ್ತಿದು! ೩ ತಾಯಿಯಿತ್ತ ನಂಜ ನುಂಗಿ ಬದುಕಿದವನ ಹೆಸರನು ಬಾ...

123...5

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...