ಈ ಸಂಸಾರ ಸಾಗರದೊಳು ತಾವರೆ ಎಲೆಯೊಳು ನೀರಿರುವಂತೆ ಅಂಟಿರಬೇಕು, ಅಂಟದಿರಬೇಕು| ಸದಾನಗುವ ತಾವರೆಯಂತೆ ಮುಗುಳ್ನಗುತಿರಬೇಕು|| ಈ ಸಂಸಾರ ಸಾಗರ ನಾನಾ ಬಗೆಯ ಆಗರ | ಅಳೆದಷ್ಟು ಇದರ ಆಳ ಸಿಗದಿದರ ಪಾತಾಳ| ಈಗಿದು ಅತೀ...
ಸೇವೆ ಮಾಡುವರು ಬೇಕಾಗಿದೆ ಕನ್ನಡದ ಸೇವೆ ಮಾಡುವವರು ಬೇಕಾಗಿದೆ|| ಸೇನೆ ಕಟ್ಟುವವರು ಬೇಕಾಗಿದೆ ಕನ್ನಡ ಸೇನೆ ಕಟ್ಟುವವರು ಬೇಕಾಗಿದೆ|| ಗಡಿಯ ಒಳಗೆ, ಗಡಿಯ ಹೊರಗೆ ಕನ್ನಡದ ಪಡೆಯ ಕಟ್ಟುವವರು ಹುಟ್ಟಬೇಕಾಗಿದೆ| ಗಲ್ಲಿ ಗಲ್ಲಿಯಲ್ಲಿ ಕನ್ನಡದ...
ಏನೇ ತಲೆಗೂ ಮೀಸೆಗೂ ಬಣ್ಣ ಹಚ್ಚಿಕೊಂಡರೂ| ಒಳ ಮನಸ್ಸೇಳುತಿದೆ ದೇಹಕೆ ವಯಸ್ಸಾಗಿದೆ ಎಂದು! ಆದರೂ ಹೇಳದೆ ಕೇಳದೆ ನಡೆದಿದೆ ಒಂದೇ ಸಮನೆ ಒಪ್ಪದ ಮನಸನು ಒಪ್ಪಿಸುವ ಕಾರ್‍ಯವಿಂದು || ಯಾಕೋ ಎಲ್ಲಾ ಟೀನೇಜು ಹುಡುಗ...
ಸಂಸಾರವೆಂಬ ಸಾಗರದಲ್ಲಿ ಸಮಾಧಾನಿಯಾಗಿರಬೇಕು| ಸಾಗರದಲೆಯ ಎದುರಿಸಿ ದೋಣಿ ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು|| ಸಂಸಾರದಾಳವ ನೆನೆದು ಭಯವನು ಬೀಳದೆ ಸಂಯಮದೊಳಿರಬೇಕು| ಸಂಸಾರ ತೀರವ ಸೇರುವ ತವಕದಿ ಸದಾ ಕುತೂಹಲದಿಂದಿರಬೇಕು|| ಕೈಲಾಗುವಷ್ಟು, ಹಾಸಿಗೆ ಇರುವಷ್ಟು ಕಾಲುಚಾಚುವುದೇ...
ಅಮ್ಮ ನಿನ್ನ ಮಗನಮ್ಮಾ ಏನು ತುಂಟನಿವನಮ್ಮ| ನೀನೇ ಬುದ್ಧಿ ಕಲಿಸಮ್ಮ ಯಾರ ಮಾತ ಕೇಳನಮ್ಮ ನಿನ್ನ ಹೊರತು ಇನ್ನಾರಿಗೂ ಸ್ವಲ್ಪವೂ ಹೆದರನಮ್ಮ|| ಆಟದಲ್ಲಿ ಅವನೇ ಎಂದೂ ಗೆಲ್ಲಲೇಬೇಕಂತಲ್ಲಮ್ಮ! ಸೋತವರು ಅವನೇಳಿದಂತೆಯೇ ಕೇಳಬೇಕಂತಮ್ಮಮ್ಮ| ಮಾತಿನಲ್ಲೇ ಮನೆಯ...
ಅಮ್ಮ ಎಂದು ಯಾರನು ಕೂಗಲಿ? ಅಮ್ಮ ಎಂದು ಯಾರ ತಬ್ಬಿಕೊಳಲಿ| ನಿನ್ನ ಪ್ರೀತಿ ಮಮತೆ ಸಿಗದೀಜಗದಿ ನಾನಾದೆನಿಂದು ತಬ್ಬಲಿ|| ಅಮ್ಮಾ ನನ್ನ ಆಸೆಗಳನ್ನೆಲ್ಲಾ ಯಾರಬಳಿ ಹೇಳಲಿ ಅಮ್ಮ ನನ್ನ ಬೇಕು ಬೇಡಗಳ ಹೇಗೆ ತಾನೆ...
ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ....| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕಲೆಯೋ ಇದು ಕವಿಯ ಕಲ್ಪನೆಯೋ ಇದು ಕಲ್ಲಲರಳಿದ ತರತರದ...
ಸ್ವಾತಿಯ ಮಳೆ ಹನಿ ಹನಿಯಾಗಿ ನಾನು| ಮುತ್ತಾಗಬಯಸುವೆನು ನಿನ್ನೆದೆಯ ಪ್ರೀತಿಕಡಲಾಳದಲ್ಲಿ| ಹ್ಞೂ ಅನ್ನು ಉಹ್ಞೂ ಅನ್ನು ನಾ ಬಂದಿರುವುದೆ ನಿನಗಾಗಿ ನಿನ್ನ ಹೃದಯದ ಬಾಗಿಲು ತೆರೆಯುವುದೆ ನನಗಾಗಿ|| ಅದೆಷ್ಟೋ ದಿನ ಕಾದಿರುವೆ ನಿನಗಾಗಿ ಈ...
ಮೊದಲು ಸೀರೆಯನುಟ್ಟಾ ಕ್ಷಣ ಮೊದಲ ಸೀರೆಯನುಟ್ಟ ದಿನ| ಏನೋ ಒಂಥರಾ ತರ ಹೇಳಲಾಗದ ಹೊಸತನ ಮೈ ನವಿರೇಳಿಸುವ ರೋಮಾಂಚನ|| ನೆರಿಗೆ ಸರಿಯಾಗಿ ಕೂರುತ್ತಿರಲಿಲ್ಲ ಹಾಗೆ ಗಟ್ಟಿಯಾಗಲ್ಲಿ ನಿಲ್ಲುತ್ತಿರಲಿಲ್ಲ| ಸೆರಗು ಜಾರಿ ಜಾರಿ ಬೀಳುತಲಿತ್ತು ಭುಜದಮೇಲಿಂದ...