ಉಷಾ ಸ್ವಪ್ನ

ಗೆಳತಿ, ನೆನಪೇತಕೆ ಬರುವುದೊ?

ಕೋಗಿಲೆಯೊಲವನು ಉಲಿದಾಗ, ಪೂರ್ವದ ಗಾಳಿಯು ಸುಳಿದಾಗ, ಪುಲಕದಿ ಮನ ಮೈ ಮರೆತಾಗ, ಗೆಳತಿ, ನೆನಪೇತಕೆ ಬರುವುದೊ ನಾನರಿಯೆ! ಗುಲಾಬಿ ಹೂವುಗಳರಳಿ, ತಿರೆ ಮಲಾಮೆಯಿಂದಲಿ ಮೆರೆಯುತಿರೆ, ಬಾಳಿನ ಕಂಬನಿ […]

ಅಂದು – ಇಂದು

ಬಿಗುಮಾನ ಒಂದೆಡೆಗೆ ; ಬಿಂಕ ಮತ್ತೊಂದೆಡೆಗೆ. ಬೇರಾವುದೋ ಹೊಸತು ಭಾವನಾವರಿಸಿರಲು ಮೊದಲ ಪರಿಚಯದಂದು ಕಣ್ಣೆತ್ತಿ ನೋಡದೆಯೆ ಮೌನದಲಿ ಮಾತುಗಳ ಮುಳುಗಿಸುತ ಹಿಗ್ಗಿದೆವು. ಚಪಲ ಚಂಚಲ ಕಣ್ಣು ನೋಡಲೆಳಸುತಲಿತ್ತು! […]

ನನ್ನ ವೀಣೆಯು ಮಲಗಿದೆ!

ಹಗಲ ಹೊನ್ನಿನ ಕಿರಣರಾಸಿಯ ಬೆಳಕು ಕತ್ತಲ ಮಡಿಲಲಿ ಮಲಗಿ ನಿದ್ರಿಸೆ ಸಂಜೆರಾಗದ ಜೋಗುಳದ ಸವಿನುಡಿಯಲಿ, ಗಾಳಿ ತೂರಿದೆ ಮೇಘಮಾಲೆಯ ಮುಗಿಲ ಮಂಟಪ ಗೆಜ್ಜೆಗೆ ಮಾಲೆಯಾಗಿದೆ ನಿಶೆಯ ಒಲವಿನ […]

ಓ ಬೆಂಕಿ!

ಓ ಬೆಂಕಿ! ಸಾಗರದ ನೂರ್ಲಕ್ಷ ಅಲೆಗಳಿಗೆ ಬೆಂಕಿ ಹೊತ್ತಿಸಿದಂತೆ ಕೆನ್ನಾಲಗೆಯನೆತ್ತಿ ಹೊರಳಿಸಿದೆ! ಈಗಿನ್ನು – ಕಳೆದಿಲ್ಲ ಅರೆಗಳಿಗೆ!- ದಡದ ಮರಳಿನ ಅಮಿತ ಸೇನೆಯನು ಹಿಂದೊತ್ತಿ, ತಡಿಯೆಲ್ಲ ತನಗೆಂದು, […]

ಯಾವುದ ನೆನೆಯಲಿ, ಯಾವುದ ಬಿಡಲಿ?

ನಾವೀರ್ವರು ಜತೆಗೂಡುತ ಕಳೆದಾ ಸುಖದ ಹೂವ ಹೊಂಬಾಳನು ನೆನೆವೆನೆ, ಕಣ್ಣು ಮಿಡಿಯುವುದು ದುಃಖದ ಹನಿಯಳಿದಾ ಬಾಳಿಂದಿಲ್ಲವೆ, ಸೇರಿರೆ, ಅಳಿಮನೆ ! ಗೆಳತಿ, ಯಾವುದ ನೆನೆಯಲಿ, ಯಾವುದ ಬಿಡಲಿ? […]

ಜಗ ಬದಲಾದರು ಜೀವನ ಬದಲದು!

ಜಗದೊಳಗಲ್ಲೆಲ್ಲಿಯು ಕ್ರಾಂತಿ ಹಬ್ಬಿ, ದಲಿತ ಜನಜೀವನದುನ್ನತಿ ಸಾಧಿಸುತ್ತಿದೆ. ತರುತಿದೆ ಶಾಂತಿ, ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ? ಜಗ ಬದಲಾದರು, ಜೀವನ ಬದಲದು! ರಷ್ಯದ ವೀರರ ಕೆಚ್ಚು […]

ಸುಂದರತೆಯಾನಂದ

ಸುಂದರತೆಯಾನಂದ ಅಮರವೆಂದನು ಅಂದು ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು; ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು, ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು ಸಾವ ಸುಖ ಬಯಸಿದನು ! […]

ಕೋಗಿಲೆಯ ಪಾಡು

ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. “ಕೋಗಿಲೆಯೆ ಇಂದೇಕೆ -ಈ ಋತು […]

ಓ ಮಧುರ ಮಾರುನುಡಿ !

ಜೀವನದ ಹಗಲಿನಲಿ ಕನಸು ಸುಳಿವಂದದಲಿ, ಆಕೆ ಬಂದಳು ಮುಂದೆ; ನಡುಹಗಲು ಬರುತಿರಲು ಅಳಿವಡೆವ ನೆರಳಿನೊಲು ಹಾರಿಹೋದಳು ಹಿಂದೆ! ಅವಳಿಲ್ಲ, ಈಗೆನ್ನ ಮನಸು ಕನಸಿನ ಅನ್ನ. ಕಂಗೆಟ್ಟ ಶಶಿ […]

ಎದೆ ತಂತಿ ಮಿಡಿದಾಗ

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ ಹಾರವಾಗಿಡುವಾಸೆ ಮನವ ತುಂಬಿರಲಾನು ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು, ಕಿಚ್ಚಿನಲಿ […]