ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ
ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ ಗಣಿಸಿದರು ಚೆಲುವೆಂಬ ಹೆಸರು ಎಲ್ಲಿತ್ತದಕೆ ? ಏರುತಿದೆ ಈಗ ಅದು ಸೌಂದರ್ಯಪಟ್ಟಕ್ಕೆ ಸಿಕ್ಕಿಸಿದೆ ಹುಸಿ ಹೊಳೆವ ಚೆಲುವನಪವಾದಕ್ಕೆ. ಕಲೆಯ ಎರವಲು ಮುಖವ ತೊಡಿಸಿ ಕಳಪೆಗಳನ್ನು ಕಮನೀಯ ಎನ್ನಿಸುವ ಕೈವಾಡ...