ಗಳಿಗೆಬಟ್ಟಲ ತಿರುವುಗಳಲ್ಲಿ – ೭

ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ.

ಗಳಿಗೆಬಟ್ಟಲ ತಿರುವುಗಳಲ್ಲಿ – ೧

ರೊಟ್ಟಿಯಾಕಾರ ದೃಷ್ಟಿಗೋಚರ ಹಸಿವು ನಿರಾಕಾರ ಆಕಾರದಲ್ಲೇ ಸೆಳೆವ ರೊಟ್ಟಿ ನಿರಾಕಾರದಲ್ಲೇ ದಹಿಸುವ ಹಸಿವು ಆಕಾರ ನಿರಾಕಾರದಲ್ಲಿ ಆವಿರ್ಭವಿಸಿ ನಿರುಪಮ ತಾದಾತ್ಮ್ಯ. *****