Home / ವಿ ಕೃ ಗೋಕಾಕ್

Browsing Tag: ವಿ ಕೃ ಗೋಕಾಕ್

ಎಳೆಯನಿರೆ ಕೇರಿಕೇರಿಗಳಲ್ಲಿ ತಿರುಗಾಟ- ವಾಡುತ್ತ ಗುರಿಯಿಲ್ಲದಲೆಯುತಿರೆ ನಾ ಮೋಹಿ- ಸಿದೆ ಮೇಲೆ ನೋಡುತ್ತ, ಓರ್‍ವನಶ್ವಾರೋಹಿ ವವನಮಾರ್‍ಗದಿ ಚಲಿಸುತ್ತಿದ್ದ. ಇದು ಕಣ್ಮಾಟ- ವಲ್ಲೆಂದು ನೂರು ಸಲ ಪರಿಕಿಸುವ ಹಿನ್ನೋಟ ತಾನೆ ನಿರ್‍ಧರಿಸಿತ್ತು. ಗೆಳೆ...

ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ. ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ- ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ ಅವನು ದೇವಪ್ರಾಯ, ಉಳಿದರಿಗೆ...

ಹಣೆಯಲ್ಲಿ ಕುಂಕುಮದ ಬೊಟ್ಟು, ಮೈಯ್ಯಲ್ಲಿ ಬಹು ಬೆಲೆಬಾಳ್ವ ಕೇಸರಿಯ ಬಟ್ಟೆ, ಕೈಯಲ್ಲಿ ಮನ- ದನ್ನ ಗೆನೆ ಹಿಡಿದ ಹೂಮಾಲೆ, ಮುಡಿಯಲ್ಲಿ ಬನ- ಮಲ್ಲಿಗೆಯ ಹೆಣಿಕೆ, ಮನದಲ್ಲೆಣಿಕೆ ಈ ನೋವು ಈಗ ಕಳೆಯುವುದೆಂದು ಬಂದಳಾ ಮಾಸತಿಯು ಬಾಳುವೆಯ ಬನ್ನವನು ನುಂಗಿ...

ಜಯ ಜಯ ಜಯಂತಿ ನಿನಗಿರಲಿ ಓ ! ದಮಯಂತಿ | ಎಲ್ಲರಿಗೆ ತಿಳಿದಿರಲಿ ! ಮೂಲೋಕ ಗಮನಿಸಲಿ,- ‘ಮಾನವನ ನಲುಮೆಗೀ ಭೂತಲದಿ ಸಮನಿಸಲಿ ನಾಕದೈಸಿರಿ’ ಎಂಬ ಹಿರಿನುಡಿಯು. ಕುವದಂತಿ ಹಿಂಗಲಿ ನಳರಾಯ ಹಾಕಿಟ್ಟ ಹಿರಿಪಂಙ್ತಿ ಅಮರ ದೀವಿಗೆಯಾಗಿ ಬೆಳಗಲಿ! ರಮಿಸಲಿ ಪ್...

ಅರಸು ವಿಶ್ವಾಮಿತ್ರ ಮಾತುಗೆಲುವ ಮನೀಷೆ- ಯಿಂದ ಕಾಡನು ಸೇರಿ ಮುನಿಯಾಗಬಯಸಿದನು. ಜಯಲಕ್ಷ್ಮಿ ತನ್ನ ವಶವಿರಲೆಂದು ಸಹಿಸಿದನು ನೂರು ಸಂಕಟಗಳನು, ಪೂರೈಸದಭಿಲಾಷೆ. ಸ್ವರ್‍ಲೋಕದವರು ಕಳುಹಿಸಿದ ಮೇನಕೆಯಾಸೆ- ಗಾಗಿ ಮತ್ತೆ ಪ್ರಪಂಚಭಾರವನ್ನು ವಹಿಸಿದನು ಅ...

೧ ನೋಡು ಗೆಳೆಯ ಶ್ರಾವಣವಿದು ಹೊಸ ಹೊಂಚನು ಹಾಕುತಿದೆ ಬಿತ್ತಿರುವುದ ಬೆಳೆಯಲೆಂದು ಗಾಳಿಮಳೆಯು ಜೀಕುತಿದೆ. ಅದಕಂತೆಯೆ ಎದೆಯುದ್ದಕೆ ಹೊಲದ ನಿಲುವು ತೂಗುತಿದೆ ಕಾರ್‍ಗಾಲದ ಹೊಸ ಹೊಂಚಿದು; ಕಾಲಪುರುಷನೊಳಸಂಚಿದು : ಬಾನಂಗಳಕೇಳ್ವುದೆನಲು ಮುಗಿಲೆ ನೆಲಕ...

ಇಳೆಯನೆಲ್ಲ ತುಂಬಿನಿಂತು ನಾಟ್ಯವಾಡುತಿರುವ ರೂಹೆ ! ಅಲ್ಲಿ-ಇಲ್ಲಿ ಎಲ್ಲೆಡೆಯಲಿ ಇದ್ದ ನಿನ್ನ ನಿಲುಕದೂಹೆ ! ಮನವ ಸೆಳೆದುಕೊಳ್ಳುವ ಶಕ್ತಿ ! ನಿನ್ನ ಮಿರುಗಮಿಂಚಿದೇನು ? ಬಣ್ಣ ಬಣ್ಣಗಳನ್ನು ತೋರ್‍ವ ನಿನ್ನ ಸಹಜ ಸೃಷ್ಟಿಯೇನು ? ಬಂದ ಮಾವಿನಡಿಗೆ ನಿ...

ಉಧೋ! ಉಧೋ! ಏಳಿರೆನ್ನು! ಇದೋ! ಇದೋ! ಎದ್ದೆವೆನ್ನು! ಎಲ್ಲು ಇಲ್ಲ ದೇವರು. ನಾವೆ ನಮ್ಮ ದೇವರು. ತಾಳಬೇಕು,-ಬಾಳಲು. ಸಹಿಸಬೇಕು,-ಆಳಲು. ಬಿನ್ನವಿಸಲು,- ಕೊಡುವದಿಲ್ಲ ! ಗರ್‍ಜಿಸೆ-ಕೊಡದಿರುವದಿಲ್ಲ ! ಹಣಕಾಸೆಳೆ ಬೈಲಿಗೆ. ಕೈಯ್ಯ ಹಚ್ಚು ಧೈಲಿಗೆ. ಹ...

ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ ಕೈ. ಮರುಳೆಂದವು – ಸೈ, ಸ...

ಸುಡು ನಿನ್ನ ಸಿಂಗರವ, ನಿನ್ನ ಸೊಗವ. ಬಿಡು ನಿನ್ನ ಬೆಡಗ ಹಾ- ಳಾಗಿಸಿತು ಜಗವ! ಆಳಾಗಿಸಿತು ನೂರು ದೇಹಗಳನು, ತೊಳಲಾಡಿಸಿತ್ತೆನಿತೊ ಗೇಹಗಳನು! ನಿನ್ನ ಮಖಮಲು ಮುಖವ ಬಣ್ಣಿಸಿದ ವೆಂಪು,- ಕಳೆಯಲದು ನಿಲ್ಲುವವು ನೂರು ಸಂಪು! ಓ ಸುವಾಸಿನಿ! ನೀನು ತೈಲಿ...

1...10111213

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...