ನಮ್ಮ ಪಿಂಜ್ರಾಪೋಲ್ ಗೋಮಾತೆಯಲ್ಲವಯ್ಯ;
ಕಾಮಧೇನುವೆಂಬ ಅಪರೂಪದ ಹಸು; ಅದು
ಸ್ವರ್ಗದಲ್ಲಿದೆಯಂತೆ, ಅದನ್ನು ಪಡೆದವನು
ಮೂರು ಲೋಕದೊಡೆಯ ಇಂದ್ರ ದೇವೇಂದ್ರ,
ಬರೇ ಕೇಳಿದ ಕಥೆ ಅನ್ನು:  ಅದರ ಸೌಂದರ್ಯವನ್ನು ಕಂಡವರೂ ಇಲ್ಲ,
ಅದರ ಹಾಲು
ಕುಡಿದವರಾರು ವಾಪಸ್ಸು ಬಂದೂ ಇಲ್ಲ
ಆದರೆ ಇಲ್ಲೇ ಇದೆ ನೋಡಿ ಸಂಜೆಯಿಂದ ಮುಂಜಾವಿನವರೆಗೂ
ನೀವು ಹಿಂಡಿಕೊಂಡಷ್ಟೂ
ಹಾಲು ಹೋಯ್ಯುವ ಪ್ರತ್ಯಕ್ಷ ಕಾಮಧೇನು, ಸುಮನೋಹರ, ಸುಂದರ,
ಅದೇ ನಮ್ಮ ಹುಣ್ಣಿಮೆಯ ಚಂದಿರ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)