Home / ಲೇಖನ / ಇತರೆ / ಊಟ-ಉಪಚಾರ

ಊಟ-ಉಪಚಾರ

ಊಟಕ್ಕೆ ಕುಳಿತಾಗ ಮಾತಾಡಬೇಕೋ ಮಾತಾಡಬಾರದೊ ಎಂಬ ವಿಷಯದ ಮೇಲೆ ಸದಾ ಭಿನ್ನಾಭಿಪ್ರಾಯವಿದೆ. ವಿಶೇಷತಃ ಹಕೀಮರೂ ವೈದ್ಯರೂ ಊಟಕ್ಕೆ ಕುಳಿತಾಗ ಮಾತಾಡಬಾರದೆಂದು ಅಭಿಪ್ರಾಯಪಡುತ್ತಿದ್ದರೆ, ಡಾಕ್ಟರ ಜನರು ಮಾತಾಡಬೇಕೆಂದು ಹೇಳುತ್ತಾರೆ. ನನ್ನ ಅಭಿಪ್ರಾಯ ಎಂದರೆ ಮಾತಾಡುವಾಗ ಊಟ ಮಾಡಬಾರದು !  ಊಟ ಮಾಡುವಾಗ ಮಾತಾಡಬಾರದೆಂದು ಹಕೀಮರೂ ಉಪದೇಶ ಮಾಡುತ್ತಾರಷ್ಟೇ, ಅವರೇ ಎರಡನೆಯವರ ಮನೆಗೆ ಊಟಕ್ಕೆ ಹೋದಾಗ ಅವರ ಊಟ ಮತ್ತು ಮಾತು ಎರಡೂ ಒಂದೇ ಸವನೆ ಸರಿಸಮಾನ ವೇಗದಿಂದ ನಡೆಯುತ್ತವೆ!
  * * * *
ಊಟ ಮಾಡುವಾಗ ಮಾತನಾಡಲೇಬೇಕೆಂದು ನೈಸರ್ಗಿಕ ತತ್ವವಿದ್ದದ್ದಾದರೆ, ಮಾತಾಡುವದಕ್ಕಾಗಿ ಬೇರೊಂದು ಇಂದ್ರಿಯವನ್ನು ಬಾಯಿಯ ಜೊತೆಗೆ ದೇವರು ನಿರ್ಮಿಸುತ್ತಿದ್ದನೆಂಬದು ಸ್ಪಷ್ಟವಾದ ಮಾತು. ಆದರೆ ಹಾಗೆ ಮಾಡದೆ, ಎರಡರ ಸಲುವಾಗಿ ಒಂದೇ ಇಂದ್ರಿಯವನ್ನು ಹುಟ್ಟಿಸಿದ್ದರಿಂದ ಕೇವಲ ಒಂದು ವೇಳೆಯಲ್ಲಿ ಬಾಯಿಯನ್ನು ಒಂದೇ ಕೆಲಸಕ್ಕೆ ಉಪಯೋಗಿಸತಕ್ಕದ್ದು. ಸದಾ ವಟವಟ ಮಾತಾಡುವವರು ಊಟಕ್ಕೆ ಕುಳಿತಾಗ ಅಷ್ಟೇ ಏಕೆ? ನಿದ್ರೆಯಲ್ಲಿ ಸಹ ಬಡಬಡಿಸುವರು !
  * * * *
ಸ್ತ್ರೀಯರಲ್ಲಿ ವಿಶೇಷವಾಗಿ ಮಾತಾಡುವ ಚಟವು ಕಂಡುಬರುತ್ತದೆ. ಹೆಚ್ಚಾಗಿ ಮುದುಕಿಯರಲ್ಲಿ ಯಾರೂ ಮಾತಾಡಲಿಕ್ಕೆ ಸಿಗದಿದ್ದರೆ, ಕಡೆಗೆ ತಮ್ಮಷ್ಟಕ್ಕೆ ತಾವೇ ಗುಣಗುಟ್ಟು ಕೂಡ್ರುವರು.
ಊಟಕ್ಕೆ ಕುಳಿತಾಗ ಮಾತಾಡಲು ಅಡ್ಡಿ ಇರದಿದ್ದರೆ ಒದರಲಿಕ್ಕೆ ಅಡ್ಡಿ ಇಲ್ಲ, ನಗಲಿಕ್ಕೆ ಅಡ್ಡಿ ಇಲ್ಲ. ಅಳಲಿಕ್ಕೆ ಅಡ್ಡಿ ಇಲ್ಲ. ಜಗಳಾಡಲಿಕ್ಕೆ ಅಡ್ಡಿ ಇಲ್ಲ. ಹೀಗೆ ಇದಕ್ಕೆ ಮಿತಿಯೇ ಇರದಂತೆ ಆಗುತ್ತದೆ. ಊಟಕ್ಕೆ ಕುಳಿತಾಗಿನ ಮುಖ್ಯ ಕೆಲಸವು ಊಟವು; ಮಾತಲ್ಲ. ಮಾತಿನ ಭರದಲ್ಲಿ ಊಟವನ್ನೇ ಮರೆತುಬಿಡುವ ಸಂಭವವು ಇರದಿದ್ದರೂ, ಅದೇನೂ ತೀರ ಅಸಂಭವವಲ್ಲ.
****
ಅಂಗಹೀನರ ದೈವ ತೆರೆದಂತಾಯಿತು. ಈಗ ಪಾಶ್ಚಾತ್ಯ ಸಂಶೋಧಕನೊಬ್ಬನು ಮೂಗು ಇಲ್ಲದವರಿಗೆ ಪ್ಲಾಸ್ಟರಿನ ಕೃತ್ರಿಮವಾದ ಮೂಗು ಹಚ್ಚುತ್ತಾನೆ. ಕಿವಿ ಹರಿದಿದ್ದರೆ ಅದನ್ನು ಜೋಡಿಸುತ್ತಾನೆ. ಕಣ್ಣುಗಳು ಕೆಟ್ಟರೆ ಕೃತ್ರಿಮ ಕಣ್ಣುಗಳನ್ನು ಕೂಡಿಸುತ್ತಾನೆ. ಒಮ್ಮೆ ಜೋಡಿಸಿ ಬಿಟ್ಟರೆ ನಿಜವಾದ ಇಂದ್ರಿಯಗಳಂತೆ ಕಾಣಿಸುತ್ತವೆ. ಹಲ್ಲು ಹಾಕಿಸಿದವರು ಪ್ರತಿ ದಿವಸ ಹಲ್ಲು ತೆಗೆದು ಸ್ವಚ್ಛ ಮಾಡುವಂತೆ ಪ್ಲಾಸ್ಟರ ಇಂದ್ರಿಯಗಳನ್ನು ತೆಗೆಯುವ ಅಗತ್ಯವಿಲ್ಲ. ತೊಳೆಯುವ ಅವಶ್ಯವಿಲ್ಲ. ಒಮ್ಮೆ ಜೋಡಿಸಿದರೆ ಆಯಿತು, ಕಡೆತನಕ ಉಳೆಯುವವು.
  * * * *
ಆದರೆ ನಿಜವಾದ ಇಂದ್ರಿಯಗಳಂತೆ ಕೃತ್ರಿಮ ಕಣ್ಣುಗಳಿಂದ ನೋಡಲಿಕ್ಕೆ ಬರುವದಿಲ್ಲ. ಕೃತ್ರಿಮ ಕಿವಿ-ಮೂಗುಗಳಿಂದ ಶ್ರವಣ- ಘಾಣಗಳ ವ್ಯಾಪಾರ ಸಾಗುವದಿಲ್ಲ. ಇದರ ಮುಖ್ಯ ಪರಿಣಾಮವೆಂದರೆ ಅಂಗಹೀನತೆಯಿಂದ ಉಂಟಾದ ಕುರೂಪವು ಹೋಗುವದು ನತ್ತು ಮಗಬೊಟ್ಟು ಇಡಬೇಕೆಂದು ಆಪೇಕ್ಷಿಸುವ ಮೂಗಿಲ್ಲದ ಸ್ತ್ರೀಗೆ ಆ ಆಭರಣಗಳನ್ನು ಧರಿಸಲು ಅನುಕೂಲವಾಗುವದು. ಕೆಲವು ಸ್ತ್ರೀಯರಿಗೆ ಮೂಗು ಅಷ್ಟೊಂದು ಬೇಕಿಲ್ಲ. ನತ್ತು ಮೂಗಬೊಟ್ಟು ಇಡಲಿಕ್ಕೆ ಬಂದರೆ ಸಾಕು !.
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...