ನಮ್ಮ ನಗರ ಹೂಬಳ್ಳಿ ನಗರ
ಸುಮ್ಮನೇಕೆ ಹೊರಟು ಬಂದೇ
ತಿರಿಗಿ ತಿರಿಗಿ ನಗರವನ್ನೊ
ಮರೆಯಲಾದೆ ಕೆರೆಯ ದಡವ
ಹರಿವ ಕೆರೆಯ ನೀರು ನೀರು
ಕರೆದು ನನ್ನ ನಿಲಿಸಿತಲ್ಲಾ
ಹರಿದು ಬರುವ ತಿಳಿಯ ನೀರು
ಮಿರಮಿರನೆ ಮಿಂಚಿತೋ
ಕಿರಣ ಸೂರ್ಯಕೆ ಹೇಳಂತು
ಸೃಷ್ಟಿ ದೇವ ಕಷ್ಟವಿಲ್ಲವೋ
ಇಷ್ಟವಾಯಿತು ಅಂದೆ ಮನದಿ
ಹರೆಯಜೀವ ಕೆರೆಯ ಬಳಿಯಲಿ
ಸಿರಿಯದೇವತೆ ಅಂತೆಕಂಡಿತು
ಮರಳಿಬರುವ ತಿಳಿಯ ನೀರು
ಕೊರೆದು ಹೋಯ್ತು ಹೃದಯ
ತೆರೆಯಲಿ ಎಂದು ಮನದಲಿ
ಮರಗುವಲ್ಲಿ ಹರಿದುಬಂದಳು “ಕೆರೆಯನಾರಿ”
ನೆಟ್ಟ ನೋಟ ಕೆಟ್ಟ ದೃಷ್ಟಿ
ಇಟ್ಟ ವಾತ್ಸಲ್ಯ ಕೆಡಕು ಅಂತೆ
ನುಟ್ಟು ಹೋಯಿತು ಕೆರೆದು ನಾರಿಯಾ
ಬಂತು ಕೆಡಗು ಎಂತ ಪಿಡಗು
ಅಂತುನಾನು ಸುಮ್ಮನಿರಲು
ಸಂತನಂತೆ ಧ್ಯಾನದಿ ಇರಲು
ಎಂತ ಮಾಯ ಆಯಿತು ಹೇಳಲಿ
ತರುಣಹೃದಯ ತರುಣಿಯಲ್ಲಿ
ಕರೆದುಬಂದು ಮುತ್ತಒತ್ತಿ
ಸರಿದು ಹೋಯಿತು ಕರೆಯನಾರಿಯಾ
ತಿಳಿದುಮಾಡಿದ ಕರ್ಮಕಾರ್ಯ
ಹೊಳೆದು ಬಂತು ನಿಜದ ನೋಟದಿ
ತಿಳಿಯ ಮುಗುಳು ನಗೆಯ ತೆನೆಯಲಿ
ಕಳಿಸಲೆಂತು ಬೆಂದಹೃದಯಾ
“ನಮ್ಮ ನಗರ ಹೂಬಳ್ಳಿ ನಗರ
ಸುಮ್ಮನೇಕೆ ಹೊರಟುಬಂದೇ”
*****








