ಸಂಧ್ಯಾರಾಗದ ಸಮಯದಲಿ
ಪ್ರಶಾಂತಸಾಗರ ತೀರದಲಿ
ಸೇರಿದರೂ
ಪ್ರೇಮಿಗಳು.
ದಿಗಂತಧಾಮವ ದೂಡಿದರು
ಪತೀತಪಾವನ ಸಾರಿದರು
ರಾಗದಲೀ
ಪ್ರೇಮಿಗಳು.
ನೀಲಾಗಗನವ ಸೇರಿದರು
ಮುಗಿಲಾಮಯವನ್ನು ನೋಡಿದರು
ಒಲುವಿನಲೀ
ಪ್ರೇಮಿಗಳು.
ಚಲುವಾಚುಕ್ಕಿಯ ನೋಡಿದರು
ಗೆಲುವಾಮೊಗವನು ಬೀರಿದರು
ನಲ್ಮೆಯಲೀ
ಪ್ರೇಮಿಗಳು.
ಚಂದ್ರಾಬಿ೦ಬದಿ ನೆಲೆಸಿದರು
ತಮ್ಮಾಹೃದಯವ ಬೆರೆಸಿದರು
ಕಾಂತಿಯಲೀ
ಪ್ರೇಮಿಗಳು.
ಸೌಹಾರ್ದಸಮ್ಮೇಲನ ಸಾರಿದರು
ಹೃದ್ಗತಜ್ವಾಲೆಯ ಹೊಳೆಸಿದರು
ಒಗೇತನದಿ
ಪ್ರೇಮಿಗಳು.
ಮೃದುಮಧುರವನು ಕೋರಿದರು
ಪ್ರಶಾಂತ ಪರಿಮಳ ಸಾರಿದರು
ಸಿದ್ದದಲೀ
ಪ್ರೇಮಿಗಳು.
*****


















