Home / ಕವನ / ಅನುವಾದ / ಅಳಿನಿ

ಅಳಿನಿ

ಅಳಿನಿಯತ್ತಲೆ ಹೋಗೆನಲ್ಲ,
ಇರುಳು ಹಗಲು ಕರೆವಳಲ್ಲ,
ಅಯ್ಯೊ, ಅತ್ತಲೆ ಹೋಗೆನಲ್ಲ,
ಹುಲಿಯಕೋಟೆಯ ಬಯಲಲಿ!
ಹೊಲ್ಲದಾ ಎದೆ ನೆನಹ ನೆನೆದುದು,
ಹೊಲ್ಲದೇ ಕೈ ಗುರಿಯನಿಟ್ಟುದು,
ಅಳಿನಿ, ಅರಗಿಣಿ, ಸತ್ತುಬಿದ್ದುದು
ನನ್ನನುಳಿಸಿ, ತೋಳಲಿ.
ಕುದಿಯದೇ ಎದೆ ಬೆಂಕಿ ಮೂಡಿ,
ಬಿದ್ದು ನುಡಿಯದ ಹೆಣ್ಣ ನೋಡಿ!
ಒಪ್ಪಗೈದೆನು ಬಕುತಿಗೂಡಿ
ಹುಲಿಯಕೋಟೆಯ ಬಯಲಲಿ.
ನೀರ ತಡಿಯಲಿ ನಾನು ಸೇರಿ,
ನನ್ನ ಹಗೆಯೇ ದಾರಿ ತೋರಿ,
ನನ್ನ ಹಗೆಯೇ ದಾರಿ ತೋರಿ,
ಹುಲಿಯಕೋಟೆಯ ಬಯಲಲಿ.
ಇಳಿದು ಕತ್ತಿಯ ಹಿರಿದುಕೊಂಡು,
ತರಿದೆನವನನು ತುಂಡು ತುಂಡು,
ತರಿದೆನವನನು ತುಂಡು ತುಂಡು-
ಸತ್ತವಳ ಹಗೆ ತೀರಲಿ!
ಅಳಿನಿ, ಚೆಲುವೆ! ಹೊಲಲಳವೆ?
ನಿನ್ನ ಕುರುಳನು ಮಾಲೆಗೊಳುವೆ,
ಬಿಡದೆ ಎದೆಯಲಿ ಬಿಗಿದುಕೊಳುವೆ-
ಸತ್ತ ಮೇಲದು ಸಡಿಲಲಿ!
ಅಯ್ಯೋ, ಅತ್ಯಲೆ ಹೋಗೆನಲ್ಲ,
ಇರುಳು ಹಗಲು ಕರೆವಳಲ್ಲ!
ಏಳು ಹಾಸಿಗೆಯುಳಿದು, ನಲ್ಲ,
ಬೇಗ ನೀ ಬಾ ನನ್ನಲಿ!
ಅಳಿನಿ, ಚೆಲುವೆ? ಅಳಿನಿ, ನಾರಿ!
ಏನು ಪುಣ್ಯವೆ ನಿನ್ನ ಸೇರಿ
ನಿದ್ದೆ ಹೋಗಲು ದುಃಖವಾರಿ,
ಹುಲಿಯಕೋಟೆಯ ಬಯಲಲಿ.
ಮೇಲೆ ಹಸುರು ಬೆಳೆಯದಯ್ಯೋ!
ಹಾಳು ಕಣ್ಣು ಮುಚ್ಚದಯ್ಯೋ!
ನಿನ್ನ ತೋಳಲಿ ಬೀಳೆನಯ್ಯೊ!
ಹುಲಿಯಕೋಟೆಯ ಬಯಲಲಿ.
ಅಳಿನಿಯತ್ತಲೆ ಹೋಗೆನಲ್ಲ,
ಇರುಳು ಹಗಲು ಕರೆವಳಲ್ಲ!
ನನಗೆ ಬೆಳಕೇ ಬೇಸರಲ್ಲ
ಒಲುಮೆಯಳಿದೀ ನೆಲದಲಿ!
*****
ANON : Fair Helen
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...