Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ಸೆಪ್ಟೆಂಬರ ೨೧, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ಸೆಪ್ಟೆಂಬರ ೨೧, ೧೯೪೨

ಪ್ರೀತಿಯ ಕಿಟಿ,

ಇವತ್ತು ನಿನಗೆ ಕೆಲವು ಸಾಮಾನ್ಯ ವಿಚಾರಗಳ ಹೇಳಬೇಕು. ಮಿಸೆಸ್ ವ್ಯಾನ್ಡ್ಯಾನ್‌ರನ್ನು ಸಹಿಸಲಾಗುತ್ತಿಲ್ಲ. ತುಂಬಾ ಮಾತನಾಡುವ ಒಂದೇ ಕಾರಣಕ್ಕೆ ನಾನು ಅವರಿಂದ ಒದೆ ತಿಂದೆ. ಒಂದಲ್ಲಾ ಒಂದು ರೀತಿಯಿಂದ ಅವರು ನಮಗೆ ಉಪದ್ರವ ಕೊಡುತ್ತಿದ್ದಾರೆ. ಮತ್ತೊಂದು ಹೊಸ ಸಂಗತಿ ಎಂದರೆ ಪಾತ್ರೆ ಕಡಾಯಿಗಳೆಲ್ಲಾದರೂ ಸ್ವಲ್ಪ ಅವಶೇಷ ಉಳಿದು ಬಿಟ್ಟರೆ ಅದನ್ನ ಅವರು ತೊಳೆಯುವುದಿಲ್ಲ. ಈವರೆಗೂ ನಾವು ಯಾವಾಗಲೂ ಮಾಡುವಂತೆ, ಅದನ್ನು ಗಾಜಿನ ಸೆಲ್ಪಗಳಿಗೆ ಹಾಕುವ ಬದಲು. ಪ್ಯಾನ್ ಹಾಳಾಗುವವರೆಗೂ ಅಲ್ಲೆ ಬಿಡುತ್ತಾರೆ.

ಕೆಲವೊಮ್ಮೆ ಮಾರ್‍ಗೊಟ್ ಊಟವಾದ ನಂತರ ಸುಮಾರು ಏಳು ಪ್ಯಾನ್‌ಗಳನ್ನು ತೊಳೆಯಬೇಕಾಗುತ್ತದೆ. ಆ ಮ್ಯಾಡಮ್ ಅದಕ್ಕೆ ಖುಷಿಯಲ್ಲಿ ಒಳ್ಳೆಯದು ಮಾರ್‍ಗೊಟ್ ! ನೀನು ಬಹಳಷ್ಟು ಕೆಲಸ ಮಾಡಲು ಕಲಿತಿದ್ದಿಯಾ ಎಂದು ಪೂಸಿ ಹೊಡೆಯುತ್ತಾರೆ.

ನಾನು ಡ್ಯಾಡಿಯೊಂದಿಗೆ ಅವರ ವಂಶವೃಕ್ಷ ತಯಾರಿಸುವ ಕೆಲಸದಲ್ಲಿ ನಿರತಳಾಗಿರುವೆ. ಅದನ್ನು ಮಾಡುತ್ತಾ ಡ್ಯಾಡಿ ನನಗೆ ಅಲ್ಲಿಯ ಪ್ರತಿಯೊಬ್ಬರ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತಾರೆ. – ನಿಜಕ್ಕೂ ಇದು ಬಹಳ ಆಸಕ್ತದಾಯಕವಾಗಿದೆ. ಕೂಫಸ್ ಪ್ರತಿಯೊಂದು ವಾರವೂ ನನಗಾಗಿ ವಿಶೇಷ ಹೊಸ ಪುಸ್ತಕಗಳನ್ನು ತರುತ್ತಾರೆ. `Joop tar Heul’ ಸಿರೀಸ್ ಓದುವುದು ನನಗೆ ಥ್ರಿಲ್ ಕೊಡುತ್ತವೆ. `Ciccy Van Marxveldt’ ಟಜಣ ಪುಸ್ತಕವನ್ನು ನಾನು ಬಹಳ ಆನಂದಿಸಿದೆ. “Een JomerJotheid”ಅನ್ನು ನಾಲ್ಕು ಸಲ ಓದಿದೆ. ಅಲ್ಲಿಯ ಹಾಸ್ಯ ಸಂಗತಿಗಳು ಈಗಲೂ ನನಗೆ ನಗೆಯುಕ್ಕಿಸುತ್ತವೆ.

ಶಾಲಾವಧಿಗಳು ಪುನಃ ಪ್ರಾರಂಭಗೊಂಡಿವೆ. ನಾನು ಫ್ರೆಂಚನ್ನು ಕಷ್ಟಪಟ್ಟು ಕಲಿಯುತ್ತಿರುವೆ. ಪ್ರತಿದಿನವೂ ಐದು ಅನಿಯಮಿತ ಕ್ರಿಯಾಪದಗಳನ್ನು [ಇರ್ ರೆಗ್ಯುಲರ್ ವರ್ಬ] ಶ್ರಮಪಟ್ಟು ದಕ್ಕಿಸಿಕೊಳ್ಳುವೆ. ಪೀಟರ್‌ಗೆ ಇಂಗ್ಲಿಷ ಎಂದರೆ ನಿಟ್ಟುಸಿರು ಬಿಡುತ್ತಾನೆ, ತಲೆಕೆರೆದುಕೊಳ್ಳುತ್ತಾನೆ. ಕೆಲವು ಶಾಲಾ ಪುಸ್ತಕಗಳು ಈಗಷ್ಟೇ ಬಂದಿವೆ. ನಮ್ಮಲ್ಲಿ ಸಾಕಷ್ಟು ಒಳ್ಳೆಯ ಅಭ್ಯಾಸ ಪುಸ್ತಕಗಳು, ಪೆನ್ಸಿಲ್‌ಗಳು, ರಬ್ಬರಗಳು, ಲೆಬಲ್‌ಗಳು ಇವೆ. ಅವುಗಳನ್ನೆಲ್ಲಾ ನಾನು ಬರುವಾಗ ನನ್ನೊಂದಿಗೆ ತಂದಿದ್ದೆ. ಕೆಲವೊಮ್ಮೆ ನಾನು ಲಂಡನ್ನಿನಿಂದ ಪ್ರಸಾರವಾಗುವ ಡಚ್ ನ್ಯೂಸ್ ಕೇಳುವೆ, ಪ್ರಿನ್ಸ್ ಬರ್ನಾಡ್‌ನ ಮಾತು ಮೊನ್ನೆಯಷ್ಟೇ ಕೇಳಿದೆ. ಪ್ರಿನ್ಸೆಸ್ ಜ್ಯೂಲಿಯಾನಾ ಮುಂದಿನ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾಳೆ ಎಂದು ಹೇಳಿದರು. ಕೇಳಿ ನನಗಂತೂ ತುಂಬಾ ಖುಷಿಯಾಯಿತು. ರಾಜ ಕುಟುಂಬದ ಬಗ್ಗೆ ನನಗಿರುವ ಒಲವು ಇತರರಿಗೆ ವಿಚಿತ್ರವೆನಿಸಲುಬಹುದು.

ನನ್ನ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಪೂರ್ಣವಾಗಿ ಅಂತಹ ಮೂರ್ಖ ಶಿಖಾಮಣಿಯಲ್ಲ ಎಂದೇನೋ ಅವರು ನಿರ್ಧರಿಸಿದರು. ಅದು ನಾಳೆಗೆ ನನಗೆ ಹೆಚ್ಚಿನ ಕೆಲಸದ ಹೊರೆ ಮಾಡಿಸುವ ಹುನ್ನಾರಕ್ಕಾಗಿತ್ತು. ಹದಿನಾಲ್ಕು ಹದಿನೈದರ ಪ್ರಾಯದ ನನಗೆ ಇನ್ನೂ ಮೊದಲ ತರಗತಿಯಲ್ಲಿರಲು ನಿಜಕ್ಕೂ ಇಷ್ಟವಿಲ್ಲ.

ಇನ್ನು ನನಗೆ ಕೆಲವೇ ಯೋಗ್ಯ ಪುಸ್ತಕಗಳ ಓದಲು ಮಾತ್ರ ಅವಕಾಶವಿತ್ತು. ಅದೂ ಅಪರೂಪಕ್ಕೆ. ಮಮ್ಮಿ ಈಗ Heeren, Vrouuwen en Knechten ಓದುತ್ತಿದ್ದಾರೆ, ಅದನ್ನು ಓದಲು ನನಗೆ ಅನುಮತಿಯಿಲ್ಲ. ಆದರೆ ಮಾರ್‍ಗೊಟ್‌ಳಿಗಿದೆ. ನಾನೂ ಕೂಡಾ ಪ್ರತಿಭಾವಂತಳಾದ ಅವಳಂತೆ ಮೊದಲು ಪ್ರಬುದ್ಧಳಾಗಬೇಕು. ಆಮೇಲೆ ಬೇಕಾದರೆ ನನಗೆ ಏನೊಂದು ತಿಳಿಯದ ತತ್ವಶಾಸ್ತ್ರ ,ಮನಃಶಾಸ್ತ್ರದ ನನ್ನ ಅಜ್ಞಾನದ ಬಗ್ಗೆ ಮತ್ತೆ ಮಾತಾಡಬಹುದು. ಬಹುಶಃ ಮುಂದಿನ ವರ್ಷದ ಹೊತ್ತಿಗೆ ನಾನು ಸ್ವಲ್ಪ ಬುದ್ಧಿವಂತಳಾಗಬಹುದು.[ ಕ್ಲಿಷ್ಟಕರವಾದ ಈ ಪದಗಳ ನಾನು ಕೊನೆನ್‌ನಲ್ಲಿ ಹುಡುಕಿದೆ.]

ನನ್ನಲ್ಲಿ ಉದ್ದ ತೋಳಿನ ಡ್ರೆಸ್ ಮತ್ತು ಚಳಿಗಾಲದಲ್ಲಿ ಧರಿಸುವ ಮೂರು ಹೆಣೆದ ಒಳ‌ಅಂಗಿಗಳಿವೆ ಎಂಬ ಸಂಗತಿ ಈಗಷ್ಟೇ ನನಗೆ ನೆನಪಾಯಿತು. ಅಲ್ಲದೇ ಬಿಳಿಯ ಉಣ್ಣೆಯ ಜಂಪರ್ ಹೆಣೆಯಲು ತಂದೆಯಿಂದ ಒಪ್ಪಿಗೆ ಪಡೆದಿರುವೆ. ಅದೇನೂ ಅಂತಹ ಒಳ್ಳೆಯ ಉಣ್ಣೆಯಲ್ಲ. ಆದರೆ ಎಷ್ಟು ದಿನಗಳವರೆಗೆ ಅದು ಬೆಚ್ಚಗಿನ ಅನುಭವ ಕೊಡಬಹುದೆಂಬುದು ಮುಖ್ಯ ಅಷ್ಟೇ. ನಮ್ಮ ಸ್ನೇಹಿತರು ನಮಗೆಂದು ನೀಡಿದ ಕೆಲವು ಬಟ್ಟೆಗಳಿವೆ. ಅವುಗಳನ್ನು ಹಾಗೇ ಶೇಖರಿಸಡಲಾಗಿದೆ. ಆದರೆ ದುರಾದೃಷ್ಟಕ್ಕೆ ಯುದ್ಧ ಕಳೆಯುವವರೆಗೂ ಅವು ಅಲ್ಲೇ ಇದ್ದರೂ ನಾವದನ್ನು ನೋಡಲಾಗುವುದಿಲ್ಲ. ಈಗಷ್ಟೇ ನಾನು ಶ್ರೀಮತಿ ವ್ಯಾನ್ಡ್ಯಾನ್ ಬಗ್ಗೆ ಬರೆದಿದ್ದೆ. ಅಗಲೇ ಅವರು ಬಂದರು.

ಪೆಟ್ಟು! ನಾನು ಪುಸ್ತಕ ಮುಚ್ಚಿದೆ. ಹೇ! ಆನ್, ನಾನೊಮ್ಮೆ ಓದಲು ನೋಡಬಾರದೇ?

“ನನಗೇನೂ ಹೆದರಿಕೆಯಿಲ್ಲ”

“ಹಾಗಾದರೆ ಆ ಕೊನೆಯ ಪೇಜು?”

“ಇಲ್ಲ ಸಾರ್ರಿ”

ಸಹಜವಾಗಿಯೇ ನಾನು ಭಯಗೊಂಡಿದ್ದೆ. ಯಾಕೆಂದರೆ ಈ ಪೇಜಿನಲ್ಲಿಯೇ ನಾನು ಅವರನ್ನು ಬೈದು ಬರೆದಿದ್ದೆ.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...