Home / ಕವನ / ಕವಿತೆ / ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ಇರಬಹುದು ಭೂಲೋಕದಲ್ಲಿ ನಂದನವನವು;
ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು;
ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು!
ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ;
ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ
ಘನ್ನಮಹಿಮರ ನೋಡಿ ಸಾಃಕ್ರಟೀಸನಿಗೆರಗಿ, ವಂದಿಸಿ ಯುರೀಪಿಡಿಸನ!

ಆಗ ಬಂತೆದುರಾಗಿ ದೇವತೆಗಳನುರಾಗ;
ಸಾಗಿದೆನು ಜುಪಿಟಿರನ ಇಂದ್ರಪದನಿಯ ಕಂಡು
ತೂಗಿದೆನು ಹರುಷದಲಿ ಹರ್ಕ್ಯುಲೀಸನ ಬಲಕೆ, ಮರ್‍ಕ್ಯುರಿಯ ಬುದ್ಧಿ ಬಲಕೆ!
ನೋಡಿಲ್ಲಿ: ರವಿ-ಅಪಾಃಲೋನ ಶರಸಂಧಾನ!
ಬೇಡಿಲ್ಲಿ: ಓಶಿಯಾನಸನಿಗಿಹ ಕಡಲ ಸಿರಿ!
ಮಾಡಿಲ್ಲಿ ಮುಜುರೆಯನು: ಮತ್ತಿತರ ಸುರರೆಲ್ಲ ನಿಂತಿಹರು ವೈಭವದಲಿ!

ಕಂಡಿತಿಲ್ಲಿಯೆ ಆಫ್ರಿದಿತಿಯ ಮಾಲಕುಮಿ ಕಳೆ;
ಚಂದದಲಿ ಮಲಗಿಹಳು ಒಲಿದ ದೇಸೆಯಿದೇವಿ,
ವಂದಿಸಿದೆ ಭೂಗೋಲವನ್ನೆ ಕೈಯ್ಯಲಿ ಹಿಡಿದು ನಿಂತಿಹ ಯುರ್ಸಾನಿಯಳಿಗೆ!
ಆದಿಶೇಷನ ಭಾರವನೆ ಹೊತ್ತ ಅಟ್ಲಾಸ,
ನೋಡಿ ತನ್ನನು ತನ್ನೊಳೊಸೆದಿರುವ ನಾರ್‌ಸಿಸಸ!
ಹಾಡುವರು ಕೊಳಲೂದಿ ಯಕ್ಷಕಿನ್ನರರಂತೆ ಮತ್ತೆ ಸ್ಯಾ:ಟಿರ-ಫಾಃನರು!

ಅಹುದಹುದು! ಭೂಮಿಗಿಳಿದರು ಸ್ವರ್ಗದವರಿಲ್ಲಿ.
ಅಹಹ! ತಮ್ಮೊಳು ತಾವೆ ಆಳುವರು, ಬಾಳುವರು!
ಇಹರು ಕಾಲನ ಮೀರಿ ನಿಂತ ಚಕ್ರೇಶ್ವರರು ಕಾಲನೊಳನಾಡಿನಲ್ಲಿ!
ಅಹುದಾದರೋಂ ನಮೋ! ಶಿಲ್ಪಿಗಳ ಜೀವನಕೆ!
ಕಹಿ ಬಾಳ ವಿಷವನ್ನು ಕುಡಿದರಗಳಿಗೆ ಬಾಳಿ
ಸಹಿಸಿದರು ಮರಣವನು ತಮ್ಮಾತ್ಮದಮರತೆಯನಿತ್ತು ಬಾನ್ನವರಿಗೆಂದು!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...