Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ೧೦ ಜುಲೈ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ೧೦ ಜುಲೈ, ೧೯೪೨

ಪ್ರೀತಿಯ ಕಿಟಿ,

ನಮ್ಮ ವಾಸದ ಸಂಗತಿಗಳ ಕುರಿತು ನನ್ನ ದೀರ್ಘ ಲಂಬಿತ ವಿವರಣೆಗಳಿಂದ ನಿನ್ನನ್ನು ಸಾಕಷ್ಟು ಬೇಸರಗೊಳಿಸಿದೆ ಎಂದುಕೊಳ್ಳುತ್ತೇನೆ. ಆದರೂ ನಿನಗೆ ನಾವೆಲ್ಲಿ ಬಂದು ತಲುಪಿದೆವು ಎಂಬುದು ತಿಳಿದಿರಲಿ ಎಂಬುದು ನನ್ನ ವಿಚಾರ.

ನೋಡಿಲ್ಲಿ, ನನ್ನ ಕತೆ ಕೇಳು, ಅದಿನ್ನೂ ಮುಗಿದಿಲ್ಲ. ನಾವು ಪ್ರಿನ್ಸನ್‌ಗ್ರಾಟ್ಚ್‌ಗೆ ತಲುಪುತ್ತಿದ್ದಂತೆ ಮೇಪ್ ನಮ್ಮನ್ನು ಕೂಡಲೇ ಮಹಡಿಗೆ ಕರೆದೊಯ್ದಳು. ಅಲ್ಲಿಂದ ಮುಂದೆ ಗುಪ್ತ ಗೃಹಯೊಂದಕ್ಕೆ ಮುನ್ನೆಡೆಸಿದಳು. ನಮ್ಮನ್ನು ಒಳಗೆ ಕಳುಹಿಸಿ ಆಕೆ ಬಾಗಿಲು ಹಾಕಿಕೊಂಡಳು. ಮತ್ತು ಅಲ್ಲಿ ನಾವಷ್ಟೇ ಉಳಿದೆವು. ಸೈಕಲ್ಲಿನ ಮೇಲೆ ನಮಗಿಂತ ವೇಗವಾಗಿ ಬಂದ ಮಾರ್‍ಗೊಟ್ ಆಗಲೇ ನಮಗಾಗಿ ಅಲ್ಲಿ ಕಾಯುತ್ತಿದ್ದಳು. ಹಜಾರ ಮತ್ತು ಇತರ ಎಲ್ಲ ಕೋಣೆಗಳು ಹೇಳಲಾಗದಷ್ಟು ಗಲೀಜಿನಿಂದ ಕೂಡಿದ್ದವು. ಕಳೆದ ತಿಂಗಳಿಂದ ಆಫೀಸಿಗೆ ಬಂದ ಕಾರ್ಡಬೋರ್ಡ ಬಾಕ್ಸುಗಳು ನೆಲ ಮತ್ತು ಹಾಸಿಗೆಯ ಮೇಲೆಲ್ಲಾ ರಾಶಿಯಾಗಿ ಬಿದ್ದಿದ್ದವು. ಸಣ್ಣ ಕೋಣೆ ಹಾಸುಹೊದಿಕೆಯ ಬಟ್ಟೆಗಳನ್ನೆ ತಾರಸಿಯನ್ನಾಗಿಸಿಕೊಂಡಿತ್ತು. ಆ ದಿನ ರಾತ್ರಿ ತಕ್ಕ ಮಟ್ಟಿನ ಆ ಹಾಸಿಗೆಗಳ ಮೇಲೆ ಮಲಗಬೇಕೆಂದರೆ ಅದನ್ನೆಲ್ಲಾ ಆದಷ್ಟು ಬೇಗ ನಮಗೆ ಸ್ವಚ್ಛಮಾಡಬೇಕಿತ್ತು. ಮಮ್ಮಿ ಮತ್ತು ಮಾರ್‍ಗೊಟ್ ಈ ಕೆಲಸಗಳನ್ನು ಮಾಡುವ ಸ್ಥಿತಿಯಲ್ಲಿರಲಿಲ್ಲ. ತೀರಾ ದಣಿದಿದ್ದರಿಂದ ತಮ್ಮ ಹಾಸಿಗೆಯಲ್ಲಿ ಉರುಳಿಕೊಂಡರು. ಅವರು ತುಂಬಾ ದಣಿದಿದ್ದರು. ಆದರೆ ಸ್ವಚ್ಛಗೊಳಿಸಲು ಉಳಿದ ಇಬ್ಬರೆಂದರೆ ನಾನು ಮತ್ತು ಡ್ಯಾಡಿ – ಆ ಕ್ಷಣವೇ ಕೆಲಸ ಮಾಡಲು ನಿರ್‍ಧರಿಸಿದೆವು.

ಇಡೀ ದಿನ ಬಾಕ್ಸುಗಳನ್ನು ಬಿಚ್ಚುವುದು, ಕಪಾಟಿನಲ್ಲಿ ಸಾಮಾನುಗಳನ್ನು ತುಂಬುವುದು, ಬೇಕಾದಲ್ಲಿ ಮೊಳೆ ಜಡಿಯುವುದು, ಎಲ್ಲ ಅಚ್ಚುಕಟ್ಟಾಗಿಸುವುದರಲ್ಲಿ ನಾವು ಹಣ್ಣುಹಣ್ಣಾಗಿದ್ದೆವು. ಆ ದಿನ ಸ್ವಚ್ಛ ಹಾಸಿಗೆಯಲ್ಲಿ ಬಿದ್ದುಕೊಳ್ಳಲಾಯಿತು. ಆ ಇಡೀ ದಿನ ನಮ್ಮ ಹತ್ತಿರ ಯಾವುದೊಂದು ಒಳ್ಳೆಯ ವಸ್ತು ಇರಲಿಲ್ಲ. ಆದರೆ ನಾವು ಚಿಂತಿಸಲಿಲ್ಲ. ಮಮ್ಮಿ ಮತ್ತು ಮಾರ್‍ಗೊಟ್ ಬಹಳ ದಣಿದಿದ್ದರಿಂದ ಏನಾದರೂ ಅವರಿಗೆ ತಿನ್ನಬೇಕಾಗಿತ್ತು. ನಾನು ಮತ್ತು ಡ್ಯಾಡಿ ಬಹಳ ಬ್ಯೂಸಿಯಾಗಿದ್ದೆವು.

ಮಂಗಳವಾರ ಬೆಳಿಗ್ಗೆ ನಿನ್ನೆ ಬಿಟ್ಟಲ್ಲಿಂದ ಕೆಲಸ ಮತ್ತೆ ಪ್ರಾರಂಭಿಸಿದೆವು. ಎಲಿ ವೊಸನ್ ಮತ್ತು ಮೇಪ್ ನಮ್ಮ ಪಡಿತರ ಸಾಮಾನುಗಳನ್ನೆಲ್ಲಾ ಸಂಗ್ರಹಿಸಿದರು. ಡ್ಯಾಡಿ ಪೂರ್ತಿ ಬಳಸಲು ಯೋಗ್ಯವಾಗಿರುವ ಕೆಲವು ವಸ್ತುಗಳನ್ನು ಸರಿಗೊಳಿಸಿದರು. ನಾವು ಅಡಿಗೆ ಕೋಣೆಯನ್ನು ಉಜ್ಜಿ ಸ್ವಚ್ಛಗೊಳಿಸಿದೆವು. ಪುನಃ ಇಡೀ ದಿನವೂ ಈ ಕೆಲಸದ ಮೇಲೆ ಆಯಿತು. ಬುಧವಾರದವರೆಗೆ ನನಗೆ ನನ್ನ ಬದುಕಿನ ಬದಲಾವಣೆಗಳ ಬಗ್ಗೆ ಚಿಂತಿಸಲು ಪುರುಸೊತ್ತು ಇರಲಿಲ್ಲ. ಅಲ್ಲಿಗೆ ಬಂದ ನಂತರ ಮೊದಲ ಸಲ ನಿನಗಿದನ್ನೆಲ್ಲಾ ಹೇಳಲು ನನಗೆ ಸಮಯ ಸಿಕ್ಕಿತು. ಅಲ್ಲದೇ ನಿಜಕ್ಕೂ ಏನಾಗುತ್ತಿದೆ ಮತ್ತು ಇನ್ನೂ ಏನೇನಾಗಲಿದೆ ಎಂಬುದನ್ನೆಲ್ಲಾ ಅರಿತುಕೊಳ್ಳಲು ಕೂಡಾ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...