ತಳುಕು-ಬಳುಕುಗಳ
ಜಂಜಾಟದ ಬಾಳಲಿ…
ಬೆಲೆರಹಿತ ಬದುಕಾಗಿ
ಎಲ್ಲೆಡೆ ಕೀಳಾಗುತ
ಬೀದಿಯ ಬದಿಯಲಿ ಬಿದ್ದಿರುವದು

ಬಂಧು – ಬಾಂಧವ್ಯ ಬಾಡುತ
ಸ್ನೇಹ – ಸೌಹಾರ್ದತೆ ಸೊರಗುತ
ರಂಗು – ಚಂಗಿನ ಗುಂಗಿನಲಿ
ಗಂಧಹೀನ ಕೊರಡಾಗುತ
ಬಳಲಿಕೆಯಲಿ ಬಾಳು ಬೆಂಡಾಗಿಹದು

ಸೃಷ್ಟಿ – ಸೌಂದರ್ಯ ಅರಿಯದ
ನಿಸರ್ಗದ ಮಡಿಲಿಗೆ ಕಿಚ್ಚಿಡುತ
ಭವಿಷ್ಯದ ಬಾಳು ದಹದಹಿಸುತ
ಮಾನವತೆ ಮರೆತ ಮನುಕುಲ
ಬೇಯುತಲಿದೆ ಬೂದಿಯಾಗುತಿದೆ.

***