ಜಗತ್ತಿನಲ್ಲಿರುವ ಕೋಟ್ಯಾಂತರ ತಾಯಿಯರಿಗೆ ವಾಸ್ತವತೆಯ ಅರ್ಥವನ್ನು ಮಾಡಿಕೊಡಲೆಂದೇ “ವಿಶ್ವಸ್ತನಪಾನ” ಪೋಷಕ ಸಂಸ್ಥೆ ಜನ್ಮತಾಳಿದೆ. ವಿಶ್ವಾದಾದ್ಯಂತ ಇದರ ಶಾಖೆ, ಉಪಶಾಖೆಗಳು ಕಾರ್ಯನಿರ್ವಹಿಸುತ್ತಲಿವೆ. ಬಾಟಲಿ ಹಾಲಿನ ಬಗೆಗೆ ಬೆಳದಿರುವ ಮೋಹವನ್ನು, ಎದೆಹಾಲಿನ ಬಗೆಗೆ ಬೆಳದಿರುವ ಮೌಢ್ಯವನ್ನು ವಿಜ್ಞಾನವೆಂಬ ಹರಿತವಾದ ಕತ್ತರಿಯಿಂದ ಕತ್ತರಿಸಿ ಹಾಕಲು ಈ ಸಂಸ್ಥೆ ನಿರಂತರ ಸೇವೆ ಸಲ್ಲಿಸುತ್ತಲ್ಲಿದೆ. ಕೃತಕವಾದ ಡಬ್ಬಿಹಾಲನ್ನು ತಿರಸ್ಕರಿಸಿ ಕೇವಲ ತಾಯಿಯ ಹಾಲನ್ನೆ ಮಗುವಿಗೆ ಉಣಬಡಿಸಲು ಶ್ರಮಿಸುತ್ತಿರುವ ಆಸ್ಪತ್ರೆ, ಇತರ ಸಂಸ್ಥೆಗಳಿಗೆ (ಸ್ತನ ಪಾನ ಉತ್ತೇಜಕ ಸಂಸ್ಥೆಗಳು) ಮಕ್ಕಳ ಸ್ನೇಹ ಪರ (Baby Friendly) ಆಸ್ಪತ್ರೆ ಎಂಬ ಪ್ರಮಾಣಪತ್ರದ ಬಿರುದನ್ನು ವಿಶ್ವಮಟ್ಟದ ಸಂಸ್ಥೆ ನೀಡುತ್ತದೆ.
ತಾಯಿಯ ಹಾಲು ಜಗತ್ತಿನಲ್ಲಿಯೇ ಶ್ರೇಷ್ಠವಾದ ಮಕ್ಕಳಿಗೆ ಪೋಷಕಾಂಶ ನೀಡುವ ವಸ್ತುವಾಗಿದೆ. ಮಗುವಿನ ಸಮಸ್ತ ಪೋಷಕಾಂಶಗಳ ಖಣಜ. ನವಜಾತ ಶಿಶುವಿಗೆ ಮೊದಲು ರೋಗ ನಿರೋಧಕ ಶಕ್ತಿ ಸಂಚಯವಾಗುವುದು, ತಾಯಿಯ ಎದೆ ಹಾಲಿನಿಂದ ಮಾತ್ರ ಹೆರಿಗೆಯಾದ ನಂತರ ತಾಯಿಯ ಎದೆಯಲ್ಲಿ ವಸರುವ ಗಟ್ಟಿಹಾಲು (ಕೊಲೆಸ್ಟರಂ) ರೋಗ ನಿರೋಧಕ ಶಕ್ತಿಯ ಭಂಡಾರವೆನಿಸಿದೆ. ಈ ಗಟ್ಟಿ ಹಾಲು ‘ಗೀಬು’ ಎಂದು ಚಲ್ಲುವ ಕೆಟ್ಟ ಸಂಪ್ರದಾಯ ಬಂದಿದೆ. ಮಗು ಹುಟ್ಟಿದ ೬ ಗಂಟೆಯೊಳಗೆ ಮಗುವಿಗೆ ಎದೆ ಚೀಪಿಸಲು ಬಿಡಬೇಕು. ತಾಯಿಯ ಹಾಲನ್ನೇ ಕುಡಿದು ಬೆಳೆದ ಮಗು ದೊಡ್ಡದಾದಾಗ ಬಿ.ಪಿ. ಬೊಜ್ಜು, ಹೃದಯಾಫಾತ, ಸಕ್ಕರೆಕಾಯಿಲೆ, ಕ್ಯಾನ್ಸ್‌ರ್ ಮುಂತಾದ ಮಾರಕ ರೋಗಗಳಿಗೆ ತುತ್ತಾಗುವುದು ಅತಿವಿರಳವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಧೂಮಪಾನ, ಮಧ್ಯಪಾನ, ಲೈಂಗಿಕ ಅಪರಾಧ, ಮಾಧಕ ಔಷಧಿಗಳ ಚಟ ಮುಂತಾದ ಸಮಾಜ ವಿರೋಧಿ ನಡವಳಿಕೆಗಳು ಎದೆ ಹಾಲು ಕುಡಿದು ಬೆಳೆದ ಮಕ್ಕಳಲ್ಲಿ ಕಡಿಮೆ. ಮಗು ತಾಯಿಯ ಹಾಲನ್ನು ಚೀಪಿ ಚೀಪಿ ಹೀರುವಾಗ ಮಗುವಿನ ಮುಖಕ್ಕೆ ದೊರೆಯುವ ವ್ಯಾಯಾಮದಿಂದಾಗಿ ಮಗುವಿನ ಮುಖ ಸುಂದರವಾಗಿ ರೂಪುಗೊಳ್ಳುತ್ತದೆ. ತಾಯಿಯ ಎದೆಹಾಲು ಕುಡಿದು ಬೆಳೆದ ಮಕ್ಕಳಿಗೆ ಬೇಧಿ, ಶೀತ, ಜ್ವರ, ನ್ಯೂಮೋನಿಯಾ, ಕ್ಷಯಾ ಹಾಗೂ ಜಂತು ರೋಗಗಳು ಕಡಿಮೆ ಪ್ರಮಾಣದಲ್ಲಿರುತ್ತದೆ.
ಗರ್ಭಿಣಿಯಾಗಿದ್ದಾಗ ಹಿಗ್ಗಿದ್ದ ಗರ್ಭಕೋಶ ಬೇಗನೇ ಸುಸ್ಥಿತಿಗೆ ಮರಳಲು ಸ್ತನ ಪಾನ ಸೂಕ್ತ ಪರಿಹಾರ. ತಾಯಿಗೆ ಇದರಿಂದ ಸ್ತನದ ಕ್ಯಾನರ್ ಬರುವುದಿಲ್ಲ. ಸೌಂದರ್ಯ ಕ್ಷೀಣಿಸುತ್ತದೆ ಎಂಬ ತಪ್ಪು ಕಲ್ಬನೆಯಿಂದ ಬಹಳೇ ಮಹಿಳೆಯರು ಮಕ್ಕಳಿಗೆ ಹಾಲು ಕುಡಿಸಲು ಹಿಂಜರಿಯುತ್ತಾರೆ. ವಾಸ್ತವವಾಗಿ ಸ್ತನ ಪಾನದಿಂದ ತಾಯಿಯ ದೇಹದ ಕೊಬ್ಬು ಕರಗಿ ಸೌಂದರ್ಯ ಅಧಿಕಗೊಳ್ಳುತ್ತದೆ. ಈ ಕಾರಣವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಆಕಾಂಕ್ಷೆಹೊಂದಿದ ಮಕ್ಕಳ ತಾಯಂದಿರು ಹೆಚ್ಚು ಹೆಚ್ಚು ಮಕ್ಕಳಿಗೆ ಸ್ತನ ಪಾನ, ಮಾಡಿಸುತ್ತಿರಬೇಕು. ಇದು ನಿಸರ್ಗದ ಸತ್ಯ.
*****