೧೯೮೦ ರಲ್ಲಿ ನಡೆಯಿಸಿದ ಸಾಗರ ಅಧ್ಯಯನದಿಂದ ಸಮುದ್ರ ತಳವನ್ನು ಸ್ಪರ್ಶಿಸಿ ಅಲ್ಲಿಯ ನಿಗೂಢತೆಯನ್ನು ಬೇಧಿಸಲಾಗಿದೆ. ಸಮುದ್ರದೊಳಗೊಂದು ಪಾತಾಳಲೋಕವಿದೆ. ನಾಗಲೋಕವಿದೆ, ಎಂದು ಹೇಳುವ ಪೌರಾಣಿಕ ಮಿಥ್ಯಗಳಿಗೆ ಈಗ ಉತ್ತರ ಸಿಕ್ಕಿದೆ.
ಅಮೇರಿಕೆಯ ನ್ಯುಜರ್ಸಿ ಕರಾವಳಿ ಪ್ರದೇಶದ ಸಾಗರ ತಳದಲ್ಲಿ ಆಳವಾದ ಕಮರಿಗಳಿದ್ದರೆ, ಫ್ಲೂರಿಡಾದ ಕರಾವಳಿ ಸಾಗರದಲ್ಲಿ ಮೈಲುಗಟ್ಟಲೇ ಎತ್ತರವಾದ ಶಿಖರಗಳಿವೆ, ಬರೆಗಾನ್ ಬಳಿ ಏರಿಳಿತಕ್ಕೊಳಗಾಗುವ ಮರಳು ದಿಣ್ಣೆಗಳಿವೆ. ಅಮೇರಿಕಾದ ಕರಾವಳಿ ಪ್ರದೇಶದ ತಳವನ್ನು ಶ್ರವಣಾತೀತ ಧ್ವನಿ ತರಂಗಗಳಿಂದ ಅಧ್ಯಯನ ಮಾಡಲಾಯಿತು.
ಅದರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಆದರಿಸಿ ಸಾಗರದ ತಳದ ನಕ್ಷೆಯನ್ನು ಚಿತ್ರಿಸಿದಾಗ ಮೇಲೆ ಹೇಳಿದ ರೋಚಕ ವಿಷಯಗಳು ಬೆಳಕಿಗೆ ಬಂದವು. ಅದೇ ರೀತಿ ಮೆಕ್ಸಿಕೋ ಆಖ್ಯಾತದಲ್ಲಿ ಅಧ್ಯಯನ ನಡೆಯಿಸಿದಾಗ ಸಾಗರದ ಆಳವು ಚಂದ್ರನ ಮೈಯಂತೆ ಇರುವುದು ಕಂಡು ಬಂದಿದೆ. ಅಂದರೆ ಒಂದೆಡೆ ಆಳವಾಗಿ ಕಮರಿಗಳಿದ್ದರೆ, ಇನ್ನೊಂದೆಡೆ ಎತ್ತರವಾದ
ಶಿಖರಗಳಿವೆ. ಅವುಗಳಲ್ಲಿ ಕೆಲವೊಂದು ಕಮರಿಗಳು ಎಷ್ಟು ಆಳವಾಗಿದೆ ಎಂದರೆ ಅವು ಒಂದೊಂದು ದ್ವೀಪವನ್ನೆ ಒಡಲೊಳಗೆ ಅಡಗಿಸಿಟ್ಟುಕೊಳ್ಳಬಹುದು. ಇದಕ್ಕೆ ಕಾರಣ ಸಮುದ್ರ ತಳದಲ್ಲಿರುವ ಉಪ್ಪಿನ ದಿಣ್ಣೆಗಳ ಚಲನೆ ಇರಬೇಕೆಂದು ವಿಜ್ಞಾನಿಗಳು ನಂಬಿದ್ದಾರೆ.
ಈಗ ವಿಜ್ಞಾನಿಗಳು ಸಂಪರ್ಕಕ್ಕೋಸ್ಕರ ಸಾಗರದಾಳದಲ್ಲಿ ದ್ಯೂತಿತಂತು ಕೇಬಲ್‌ಗಳನು ಹಾಕಲು ಸಾಗರದ ತಳದ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಿಂದ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದಾಗಿದೆ.
*****
- ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಧ್ವನಿಗಳು - January 25, 2021
- ಬರಲಿವೆ ಮಾತನಾಡುವ ಕಂಪ್ಯೂಟರ್ಗಳು - January 11, 2021
- ಬರಡು ನೆಲವನ್ನು ಖಸುಗೊಳಿಸುವ ಶೋಧನೆ - December 28, 2020