ಚುಮು
ಚುಮು ನಸಕು
ಪಂಚಮಿಯ ರಿಪಿರಿಪಿ ಮಳೆಗಾಲ-
ಹಂಡೆಯಲ್ಲಿ ಕುದಿಯುವ ನೀರು
ಜೀರೋ ಬಲ್ಬಿನ ಬೆಳಕು
ಹೊಗೆ – ಉಗಿ ತುಂಬಿದ ಬಚ್ಚಲಿನಲ್ಲಿ
ಸ್ನಾನ,
ಏನು ಮುದ ಏನು ಹಿತವಿತ್ತು
ನನ್ನಜ್ಜಿಯ ಹಳ್ಳಿಯ ಮನೆಯಲ್ಲಿ;
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)