ಹೃದಯ ಮಂದಿರದಲೊಂದು ಮೂರ್ತಿಯನು ಕಲ್ಪಿಸಿ | ಭಕ್ತಿ ರಸ ಕುಸುಮದಿಂದ ನಿನ್ನ ಪೂಜಿಪೆ ತಂದೆ ||೧|| ನನಗಿಲ್ಲ ಧನ ಧಾನ್ಯ ನಾನಲ್ಲ ಜಗ ಮಾನ್ಯ | ಪುಣ್ಯ ಕ್ಷೇತ್ರಕ್ಕೆ ಹೋಗಿ ನಿನ್ನ ಸೇವೆಯ ಮಾಡಿ | ಸುಖ ಗಳಿಸುವಾ ಭಾಗ್ಯ ಎಸಗಿಲ್ಲ ತಂದೆ ||೨|| ಜನ ಸೇವ...

ನಾವು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾವು ನೆನೆಸಿರಲಿಲ್ಲ ಬಂಧನ ಬೆಸೆಯುವದೆಂದು. ಮನಸ್ಸುಗಳು ಒಂದಾಗಿ ಮಧುರತೆಯು ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಖಣೀಯಾಗಿ. ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದಾ ಬಂಧ ಜನ್ಮ ಜನ್ಮ...

ಇಲ್ಲಿ ಈ ಮರ್ತ್ಯಲೋಕದಲ್ಲಿ ಇರುವೆಯಾಕಳಿಕೆ ಮಿಡತೆ ನರಳಿಕೆ ಎರೆ ಹುಳುವಿನ ತೆವಳಿಕೆ ಕ್ಷಣವೂ ಎವೆ ಇಕ್ಕದೇ ದಾಖಲಾಗುವ ಈ ಅನಾದಿಯಲ್ಲಿ ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ ಮಿಡತೆ ಮೇಲಿನ್ನೊಂದು ಮಿಡತೆ ಸತ್ತ ಎರೆಹುಳುವಿನ ದಾಖಲೆ ಮುರಿಯಲಿನ್ನೊಂದರ ಸಿ...

ಪ್ರತಿಯೊಂದು ಕವಿತೆಯೂ ಕವಿತೆಯ ಬಗ್ಗೆಯೇ ಎಂದವನು ಅಮೇರಿಕದ ಕವಿ ವಾಲೆಸ್ ಸ್ಟೀವನ್ಸ್, ಎಝ್ರಾ ಪೌಂಡ್, ಟಿ. ಎಸ್. ಎಲಿಯೆಟ್, ರಾಬರ್ಟ್ ಫ್ರಾಸ್ಟ್ ಮುಂತಾದವರು ಬರೆಯುತ್ತಿದ್ದ ಕಾಲದಲ್ಲೇ ಇವರಿಗಿಂತ ಭಿನ್ನವಾಗಿ ಕವಿತೆ ರಚಿಸಿ ಪ್ರಸಿದ್ಧನಾದವನು. ಪೌ...

ತಾರಮ್ಮಯ್ಯ, ತಂದು ತೋರಮ್ಮಯ್ಯ! ದೂರದ ಬಾನೊಳು ಏರಿದ ಚಂದ್ರನ ತಾರಮ್ಮಯ್ಯ ತಂದು ತೋರಮ್ಮಯ್ಯ! ಹರಿಯುವ ನೀರಿನ ಪರಿಯ ಬಾನಿನ ಮೇಲೆ ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು, -ತಾರಮ್ಮಯ್ಯ ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ ಕಣ್ಣಿಗೆ ಕಾಣುವ ಹ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...