ಹರಿಯಗೊಡದಿರು ಮನವೇ ಎಲ್ಲೆಂದರಲ್ಲಿ ಮನವು ಮರ್ಕಟವೆಂಬ ಮಾತು ನಿಜವಿಲ್ಲಿ. ಓಡುವುದು ನದಿಯಂತೆ ಬೀಸುವ ಗಾಳಿಯಂತೆ ಕತ್ತಿಯ ಅಲುಗಿನಂತೆ ಸುಳಿಯುವುದು ಕ್ಷಣ ಕ್ಷಣ ಚಪಲ ಚಿತ್ತವ ಹಿಡಿದು ಕಟ್ಟುವ ಇಂದ್ರಿಯ ನಿಗ್ರಹ ಶಕ್ತಿ ಇದ್ದರೆ ನೀನಾಗುವೆ...
ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ಮುನಿವರರೆಲ್ಲರು ತನ್ನವರೆಂದು, ಕಲೆಗಳ ಕೋವಿದರಲ್ಲಿಹರೆಂದು,...