ಕಾಸಿನ ಬಿಸಿಗೆ ಕರಗುವ ಮೌಲ್ಯವುಳಿವುದೆಂತು?

ಹಸಿ ಬಿಸಿಯ ಸ್ಥಿತ್ಯಂತರಕೆಂಥ ಕಲ್ಲಾದೊಡಂ ತುಸು ತುಸು ಒಡೆದಂತಿಮದಿ ಮಣ್ಣಕ್ಕು ಹುಸಿ ದುಡಿಮೆಯನುದಿನವು ನೂರ್ ಬಾರಿ ಬಿಸಿ ದುಡ್ಡಪ್ಪಾವರ್ತನೆಯ ವೇಗಕೆಮ್ಮ ಕೃಷಿ ಬದುಕಿನಾರೋಗ್ಯ ನುಚ್ಚು ನೂರಾಗುತಿದೆ - ವಿಜ್ಞಾನೇಶ್ವರಾ *****

ನಂದಿ ಬೆಟ್ಟವ ಕಂಡೆ

ಹೆಂಗ ಹೇಳಲಿ ನಾನು ಹೇಳಲಾರದ ಹಿಗ್ಗು ಯೋಗ ನಂದೀಶ್ವರನ ಶಿಖರ ಕಂಡೆ ಭೋಗನಂದಿಯು ಕೆಳಗ ಯೋಗನಂದಿಯು ಮ್ಯಾಗ ನಂದಿ ಬೆಟ್ಟದ ಖುಶಿಯ ಬೆಳಕು ಕಂಡೆ ಬೆಟ್ಟ ಬೆಟ್ಟದ ಮ್ಯಾಲೆ ಗಟ್ಟ ಗಟ್ಟದ ಮಾಲೆ ನೋಡಿಲ್ಲಿ...

ನೆಮ್ಮದಿಯ ತಾಣ

ಬದುಕಿನ ಸಂತೆಯಲಿ ಚಿಂತೆಯ ಹೊರೆ ಹೊತ್ತು ವ್ಯರ್ಥ ಬಳಲಿಕೆಯಲಿ ತೊಳಲುವೆ ಏಕೆ? ಬದುಕಿದು ಮೂರು ದಿನ ಸುಖ ದುಃಖ ಸಮಗಾನ ನಶ್ವರವು ಜೀವನದ ತಾನ ಸಂತೋಷವೇ ಸುಖದ ಸೋಪಾನ ಬರುವ ನಾಳೆಯ ಕುರಿತು ಸುಮ್ಮನೇತಕೆ...
ವಚನ ವಿಚಾರ – ಅಸಾಧ್ಯ

ವಚನ ವಿಚಾರ – ಅಸಾಧ್ಯ

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ ನೆನಹಿಂಗೆ ಬಾರದುದ ಕಾಂಬುದು ಹುಸಿ ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು [ನೆನೆಯಲಮ್ಮಬಹುದೆ-ಧ್ಯಾನಿಸಲು ಯತ್ನಿಸಬಹುದೆ-ಕಾಂಬುದು-ಕಾಣುವುದು, ಮಾಣು-ಬಿಡು] ಘಟ್ಟಿವಾಳಯ್ಯನ ವಚನ. ಈ...

ಕೆಂಪುಗಳ ಹಬ್ಬ

(ಹರೀಂದ್ರನಾಥ ಚಟ್ಟೋಪಾಧ್ಯಾಯರ ಒಂದು ಇಂಗ್ಲೀಷ್ ಕವಿತೆಯ ಅನುವಾದ) ಭೂಮ್ಯಾಕಾಶದ ಕೆಂಪುಗಳೆಲ್ಲವು ಕೂಡುತೆ ಹಬ್ಬವ ಮಾಡಿದವು. ಬಂದವು ಅಲ್ಲಿಗೆ ಬಗೆ ಬಗೆ ಕೆಂಪು, ಗುಲಾಬಿ ಪೂಗಳ ಪರಿಮಳ ಕೆಂಪು, ಮಸಣದ ಜ್ವಾಲೆಯ ಗುಟ್ಟಿನ ಕೆಂಪು, ಅರುಣ...